ಲಕ್ಷ್ಮೇಶ್ವರ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮೆಕ್ಕೆಜೋಳ ಬೆಳೆದ ರೈತರನ್ನು ದಿನಕ್ಕೊಂದು ಆದೇಶ ಮಾಡುತ್ತ ದಿಕ್ಕೂ ತಪ್ಪಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜ ಪಲ್ಲೇದ ರೈತ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಇಟಗಿ ಕೆಪಿಸಿಎಂಎಸ್ ಅಧ್ಯಕ್ಷ ಸೋಮಣ್ಣ ಉಪನಾಳ ಅವರು ಸರಕಾರ ಈಗಿರುವ 20 ಕ್ವಿಂಟಲ್ ಬೆಂಬಲ ಬೆಳೆಯಲ್ಲಿ ಮೆಕ್ಕೆಜೋಳ ಮೀತಿಯನ್ನು ಖರೀದಿಸುತ್ತಿರುವ 100 ಕ್ವಿಂಟಲಗೆ ಹೆಚ್ಚಿಸಬೇಕು ಹಾಗೂ ಖರೀದಿಯ ಮಾನದಂಡಗಳನ್ನು ಸಡಿಲಿಸಿ ಯಾವುದೇ ಗುಣಮಟ್ಟ ಪರಿಶೀಲಿಸದೆ ರೈತರಿಗೆ ಅನುಕೂಲ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಟಿಎಟಿಸಿಎಂಎಸ್ ಮತ್ತು ಕೆಎಮ್ಎಫ್ ನ ಮುಖಾಂತರ ಖರೀದಿ ಮಾಡುತ್ತಿದ್ದು ರೈತರಿಗೆ ಅನುಕೂಲ ಆಗುವಂತೆ ಪ್ರತಿ ದಿವಸ ಯಾವ ರೈತರ ಮೆಕ್ಕೆಜೋಳ ಖರೀದಿ ಮಾಡಲಾಗುತ್ತದೆ ಎನ್ನುವುದನ್ನು ಟೊಕನ್ ನೀಡಿ ಮೆಸೇಜ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ರೈತರಿಗೆ ತಿಳಿಸಬೇಕೆಂದು ಹೇಳಿದರು.
ಅವರು ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿ ಡಿಬಿಟಿ ಮೂಲಕ ರೈತರ ಖಾತೆಗಳಿಗೆ ಹಣ ಜಮೆ ಮಾಡುವುದರಿಂದ ಬ್ಯಾಂಕನವರು ಸಾಲದ ಖಾತೆಗಳಿಗೆ ಜಮೆ ಮಾಡಿಕೊಳ್ಳುವುದರಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಾರೆ ಆದ್ದರಿಂದ ಜಿಲ್ಲೆಯ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆದು ಸ್ಪಷ್ಟ ನಿರ್ದೇಶನ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಿಂಗಪ್ಪ ಬನ್ನಿ,ಚನ್ನವೀರಪ್ಪ ಹೂಗಾರ, ಅನೀಲ ಮುಳಗುಂದ,ಗಂಗಾಧರ ಮೆಣಸಿನಕಾಯಿ, ಪ್ರವೀಣ ಬೋಮಲೆ,ಬಸವರಾಜ ಕಲ್ಲೂರ,ಅಶೋಕ. ಸೂರಣಗಿ ಸಂತೋಷ ಜಾವೂರ,ಸೇರಿದಂತೆ ಅನೇಕರು ಇದ್ದರು.
