ಕಲರ್ಸ್ ಕನ್ನಡ ವಾಹಿನಿಯಲ್ಲಿ ಜನಪ್ರೀಯತೆಯ ರಿಯಾಲಿಟಿ ಶೋ ಬಿಗ್ ಬಾಸ್ ಗೆ ಕಂಠಕ ಶುರುವಾಗಿದೆ. ಅವಧಿ ಮುನ್ನವೇ ಬಿಗ್ ಬಾಸ್ ಶೋ ಮುಗಿಯುತ್ತಾ ಅನ್ನೋ ಪ್ರಶ್ನೆ ಹುಟ್ಟಿದೆ.

ಹೌದು, ಬೆಂಗಳೂರು ದಕ್ಷಿಣ ತಾಲ್ಲೂಕಿನ ಮಾಳಿಗೊಂಡನಹಳ್ಳಿಯಲ್ಲಿ ಬಿಗ್ ಬಾಸ್ ನ ಸೆಟ್ ಹಾಕಲಾಗಿದೆ. ಸೆಟ್ ಹಾಕಿರುವ ಸ್ಥಳದ ವಾಣಿಜ್ಯ, ವ್ಯಾಪಾರ, ವಸತಿಯೇತರ ವ್ಯವಹಾರದ ಲೈಸೆನ್ಸ್ ರದ್ದು ಮಾಡಿದ್ದು, ಶೋ ಸ್ಥಗಿತಗೊಳಿಸಲು ಬೆಂಗಳೂರು ಜಿ.ಪಂ. CEO ಲತಾ ಕುಮಾರಿ ಸೂಚನೆ ನೀಡಿದ್ದಾರೆ.
ಕಾರ್ಮಿಕ ಇಲಾಖೆ, ಸ್ಥಳೀಯ ಗ್ರಾ.ಪಂ. ಪರಿಸರ ಮಾಲಿನ್ಯ ಮಂಡಳಿಯಿಂದ ಅನುಮತಿ ಪಡೆದಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ರಾಘವೇಂದ್ರಾಚಾರ್ ಅನ್ನೋರು ದೂರು ನೀಡಿದ್ದರು. ಡಿಸಿ ಭೂಪರಿವರ್ತನೆಯ ಆದೇಶ ರದ್ದುಗೊಳಿಸಿದ್ದಾರೆ.