ಲಕ್ಷ್ಮೇಶ್ವರ: ಸರಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಶೂನ್ಯವಾಗಿದೆ. ನಾನು ಅಲ್ಲದೇ, ಕಾಂಗ್ರೆಸ್ ಪಕ್ಷದ ಶಾಸಕರು ಅನುದಾನ ಇಲ್ಲದೆ, ಪರದಾಡುತ್ತಿದ್ದಾರೆ. ಸರಕಾರ ಶಿಕ್ಷಣದ ಬಗ್ಗೆ ಒತ್ತು ನೀಡಬೇಕು ಇಂದಿನ ಮಕ್ಕಳೇ ನಾಳಿನ ನಾಗರಿಕರು ಮಾತ್ರವಲ್ಲ, ಮಕ್ಕಳೇ ದೇಶದ ಸಂಪತ್ತು, ಮಕ್ಕಳ ಸರ್ವಾಂಗೀಣ ವಿಕಾಸ ಪ್ರತಿಯೊಬ್ಬರ ಹೊಣೆಯಾಗಬೇಕು ಎಂದು ಶಾಸಕ ಡಾ.ಚಂದ್ರು ಲಮಾಣಿ ತಿಳಿಸಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಲಮಾಣಿ.
ತಾಲೂಕಿನ ಆದ್ರಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಲಕ್ಷ್ಮೇಶ್ವರ ತಾಲೂಕಿನ 2025-26 ನೇ ಸಾಲಿನಲ್ಲಿ ಠೇವಣಿ ಮತ್ತು ವಂತಿಕೆ ಅನುದಾನದ ವಿವೇಕ ಶಾಲಾ ಯೋಜನೆ ಅಡಿಯಲ್ಲಿ, 58 ಲಕ್ಷ ರೂ ಗಳ ಅನುದಾನದಲ್ಲಿ ನಿರ್ಮಿಸುತ್ತಿರುವ ನೂತನ 4 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಅತಿಹೆಚ್ಚು ಮಕ್ಕಳ ಹಾಜರಾತಿ ಇರುವ ಆದ್ರಳ್ಳಿ ಗ್ರಾಮ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು, ಮಕ್ಕಳ ಹಾಜರಾತಿ ಇದ್ದರೂ ಕೊಠಡಿಗಳ ಸಮಸ್ಯೆ ಇದೆ ಎಂಬುವುದು ನನ್ನ ಗಮನಕ್ಕೆ ಬಂದಿತ್ತು,ಶಾಲೆ ಕಟ್ಟಡದ ಕೊರತೆ ನೀಗಿಸುವ ಭಾಗ್ಯ ಇದೀಗ ಒದಗಿ ಬಂದಿದೆ. ಗ್ರಾಮದ ಜನತೆಯ ಕನಸು ನನಸಾದಂತಾಗಿದೆ ಎಂದರು.
ನಾಲ್ಕೂ ಕೊಠಡಿ ಅಷ್ಟೆ ಅಲ್ಲ, ಕೆಲವೇ ದಿನಗಳಲ್ಲಿ ಮತ್ತಷ್ಟು ಕೊಠಡಿಗಳ ಭೂಮಿ ಪೂಜೆ ನಡೆಯಲಿದೆ.ಲ್ಯಾಬ್ ಗಳು ಬರುತ್ತವೆ. ಶಿಕ್ಷಣಕ್ಕಾಗಿ ನನ್ನ ಕೆಲಸ ಯಾವತ್ತು ಮುಂದೆ ಇರುತ್ತದೆ ಎಂದರು. ಶಾಲೆಯ ಜಾಗವನ್ನು ಯಾರಾದರೂ ಅತಿಕ್ರಮಣ ಮಾಡಿದ್ದು ಕಂಡುಬಂದಲ್ಲಿ ಗ್ರಾಮ ಪಂಚಾಯತಿ ಅಧಿಕಾರಿಗಳು ಕ್ರಮ ಕೈಗೊಂಡು ಸರಿಪಡಿಸಬೇಕು, ಸರ್ವೆ ಮಾಡಿಸಿ ಅತಿಕ್ರಮಣ ಮಾಡಿದ ಜಾಗವನ್ನು ಹಿಮ್ಮಪಡೆಯಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಮಾಂತೇಶಗೌಡ್ರ ಪಾಟೀಲ್, ರಮೇಶ ಹೆಗ್ಗಣ್ಣವರ್, ನಾಗವ್ವ ವಡ್ಡರ, ಚಂದ್ರಕಾಂತ ಲಮಾಣಿ, ಶೇಖಪ್ಪ ಲಮಾಣಿ, ಗಣೇಶ ಲಮಾಣಿ, ಶೀಲಾಬಾಯಿ ಲಮಾಣಿ, ತಿಪ್ಪವ್ವ ಲಮಾಣಿ, ಹಾಲಪ್ಪ ಸೂರಣಗಿ, ಜಾನು ಲಮಾಣಿ, ಉಮೇಶ ನಾಯಕ, ಲಕ್ಷ್ಮಣ ಲಮಾಣಿ, ಕೀರಣ ಲಮಾಣಿ, ಲೋಕೋಪಯೋಗಿ ಅಧಿಕಾರಿ ಫಕ್ಕಿರೇಶ ತಿಮ್ಮಾಪೂರ, ಗುತ್ತಿಗರದಾರ ಕೆಲೋಡಿ, ಶರಣು ಸಿಂದಗಿ ಮತ್ತು ಗ್ರಾಮದ ಹಿರಿಯರು, ಯುವಕರು, ಶಾಲಾ ಶಿಕ್ಷಕರ ವೃಂದದವರು ಇದ್ದರು.
ಶಾಲಾ ಶಿಕ್ಷಣದ ಬಗ್ಗೆ ಕ್ಷೇತ್ರ ಶಿಕ್ಷಣ ಅಧಿಕಾರಿ ಎಚ್.ಎಂ.ನಾಯಕ ತಮ್ಮ ಅನಿಸಿಕೆ ಹಂಚಿಕೊಂಡರು, ಫ್ರೌಡಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಹರೀಶ ಪ್ರಸ್ತಾವಿಕವಾಗಿ ಮಾತನಾಡಿದರು.