ಲಕ್ಷ್ಮೇಶ್ವರ: ತಾಲೂಕಿನ ಆದರಹಳ್ಳಿ ಗ್ರಾಮದ ಜನರಿಗೆ ಪೋಸ್ಟ್ ಮಾಸ್ಟರ್ ಯಾರು ಅಂತಾನೆ ಗೊತ್ತೇ ಆಗುತ್ತಿಲ್ಲ ಎಂದು ವೃದ್ಧರು ಹಾಗೂ ವೃದ್ಧೆಯರು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಆದರಹಳ್ಳಿ ಗ್ರಾಮದಲ್ಲಿ ಪೋಸ್ಟ್ ಮಾಸ್ಟರ್ ಯಾರು ಅಂತ ಗೊತ್ತೇ ಆಗುತ್ತಿಲ್ಲ ಒಂದೇ ತಿಂಗಳಲ್ಲಿ ನಾಲ್ಕು ಜನ ಪೋಸ್ಟ್ ಮಾಸ್ಟರ್ ಅಂತ ಹೇಳಿ ಬರುತ್ತಾರೆ. ಒಂದು ದಿನ ಬಂದರೆ ಮರುದಿನ ಬೇರೆ ಪೋಸ್ಟ ಮಾಸ್ಟರ್ ಬರುತ್ತಾರೆ. ಹೀಗಾಗಿ ಅಂಚೆ ಇಲಾಖೆಯಲ್ಲಿ ಖಾತೆ ಹೊಂದಿರೋ ಬಡಜನರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ ಎಂದು ಮಾಸಾಶನ ಪಡೆಯಲು ಪರದಾಟ ನಡೆಸಿದ ಫಲಾನುಭವಿಗಳು ತಮ್ಮ ಅಳಲು ತೊಡಿಕೊಂಡರು.
ಲಕ್ಷ್ಮೇಶ್ವರ ಮುಖ್ಯ ಅಂಚೆ ಅಧಿಕಾರಿಗಳ ಜೊತೆ ಮಾತನಾಡಿದರೆ ನಿಮ್ಮ ಗ್ರಾಮದ ಪೋಸ್ಟ್ ಮಾಸ್ತರಿಗೆ ಆರೋಗ್ಯ ಸರಿಯಿಲ್ಲ ಹೀಗಾಗಿ ಬೇರೆದವರನ್ನು ಕಳಿಸುತ್ತೇವೆ ಅಂತ ಉಡಾಫೆ ಉತ್ತರ ಕೊಡುತ್ತಾರೆ. ಒಂದು ದಿನ ಬಂದ ಪೋಸ್ಟ ಮಾಸ್ಟರ್ ಮತ್ತೆ ಬರುವುದಿಲ್ಲ. ದಿನ ದಿನ ಇದೇ ರೀತಿ ತೊಂದರೆಯಾಗುತ್ತಿದೆ ಕಣ್ಣು ಕಾಣದವರು, ಅಂಗವಿಕಲರು, ವೃದ್ಧೆಯರು ಅಂಚೆ ಇಲಾಖೆಯಲ್ಲಿ ಖಾತೆ ತರೆದು ತಮ್ಮ ವೇತನವನ್ನ ಆ ಖಾತೆಯಲ್ಲಿ ಪಡೆಯಲು ಪರದಾಡುವಂತಾಗಿದೆ.
“ಸರ್… ನಮ್ಮ ಹಣ ನಮಗೆ ಕೊಡಲು ನಾಳೆ ಬಾ ಅಂತ ಹೇಳಿ ಮರುದಿನ ಅವರು ಬರುವುದಿಲ್ಲ. ನಮಗೆ ಗೊತ್ತಿಲ್ಲ ಅಂತ ಹೇಳುತ್ತಾರೆ. ದಯವಿಟ್ಟು ನಮಗೆ ನ್ಯಾಯ ಕೊಡಿಸಿ ಅಂತ ಮಾಧ್ಯಮದ ಮುಖಾಂತರ ಗ್ರಾಮಸ್ಥರೆಲ್ಲರೂ ಅಳಲು ತೊಡಿಕೊಂಡರು.
ಮಾಸಾಶನಕ್ಕಾಗಿ ಪರದಾಟ ನಡೆಸುತ್ತಿರುವ ವೃದ್ಧೆ