ಬೆಂಗಳೂರು: ಕರ್ನಾಟಕ ಬಂಜಾರ (ಲಂಬಾಣಿ ) ಹಕ್ಕು ಸಂರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಬೆಂಗಳೂರಿನ ಶಾಸಕರ ಭವನದ ಸಭಾಂಗಣದಲ್ಲಿ ಸಮುದಾಯದ ಜನಪ್ರತಿನಿಧಿಗಳು, ಮುಖಂಡರುಗಳ ಸಭೆ ನಡೆಸಲಾಯಿತು.
ಈ ಸಭೆಯ ಅಧ್ಯಕ್ಷತೆಯನ್ನು ಮಾಜಿ ಸಂಸದರಾದ ಉಮೇಶ್ ಜಾದವ್ ವಹಿಸಿದ್ದರು, ಸಿಟಿ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಅವರು,
ವರದಿ : ಪರಮೇಶ ಎಸ್ ಲಮಾಣಿ
ಮೀಸಲಾತಿ ವರ್ಗೀಕರಣದ ಸರ್ಕಾರಿ ಆದೇಶ ಪುನರ್ ಪರಿಶೀಲನೆ ಆಗಬೇಕು ಹಾಗೂ ಒಳಮಿಸಲಾತಿ ವಿಷಯವನ್ನು ಮುಂಬರುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆಯುವ ಸರ್ಕಾರದ ಷಡ್ಯಂತ್ರದ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಯಿತು.
ಸರ್ಕಾರದ ಈ ನಡೆಯನ್ನು ಉಗ್ರವಾಗಿ ಖಂಡಿಸಿ, ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು. ಡಿಸೆಂಬರ್ 16 ರಂದು ಬೆಳಗಾವಿ ವಿಧಾನಸೌಧದ ಎದುರು ಸಮುದಾಯದ ಮಠಾಧೀಶರಿಂದ ಧರಣಿ ಸತ್ಯಾಗ್ರಹ ಪ್ರಾರಂಭಿಸಲಾಗುವುದು.
ಡಿಸೆಂಬರ್ 17 ರಂದು ಒಳ ಮೀಸಲಾತಿಯಿಂದ ಭಾದಿತ ಸಮುದಾಯದಿಂದ ಬೃಹತ್ ರಾಜ್ಯ ಮಟ್ಟದ ಬೆಳಗಾವಿ ಚಲೋ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಯಿತು ಎಂದರು.
ಸಭೆಯಲ್ಲಿ ವಿಧಾನಸಭಾ ಉಪಸಭಾಪತಿಗಳಾದ ರುದ್ರಪ್ಪ ಲಮಾಣಿ, ಶಾಸಕರಾದ ಕೃಷ್ಣನಾಯ್ಕ, ಮಾಜಿ ಶಾಸಕರುಗಳಾದ ಪಿ .ರಾಜೀವ್, ಕೆ. ಬಿ ಅಶೋಕ್ ನಾಯ್ಕ, ತಾಂಡ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಬಾಲರಾಜನಾಯ್ಕ ಬಿಜಾಪುರದ ಗೋಪಾಲ ಮಹಾರಾಜ್, ಸೂರಗೊಂಡನ ಕೊಪ್ಪ ಮಹಾಮಠದ ಧರ್ಮದರ್ಶಿಗಳಾದ ಬಿ. ಹೀರಾನಾಯ್ಕ, ಭೋಜನಾಯ್ಕ ಸಮಿತಿಯ ಗೌರವಾಧ್ಯಕ್ಷರಾದ ರಾಘವೇಂದ್ರನಾಯ್ಕ, ಅಧ್ಯಕ್ಷರಾದ ರಾಜಾನಾಯ್ಕ ಸಿಂಗಟಗೆರೆ ಪ್ರಧಾನ ಕಾರ್ಯದರ್ಶಿಗಳಾದ ರವಿಕಾಂತ್ ಅಂಗಡಿ ಖಜಾಂಚಿ ಗಂಗಾನಾಯ್ಕ ಗೊಂದಿ, ಸೇವಾಲಾಲ್ ಮಹಾಮಠದ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ನರೇನಹಳ್ಳಿ ಮಠ ಸಮಿತಿ ಅಧ್ಯಕ್ಷರಾದ ಹನುಮಂತನಾಯ್ಕ, ಮುಖಂಡರುಗಳಾದ ಮಾರುತಿನಾಯ್ಕ, ಭರತನಾಯ್ಕ, ವಿಜಯ ಜಾದವ್, ವಕೀಲರುಗಳಾದ ಮುತ್ತುರಾಥೋಡ್, ಮಂಜುನಾಯ್ಕ, ಬೆಳಗಾಂ ನ ಪಾಂಡುರಂಗ ರಾಥೋಡ್, ಮಂಜುನಾಥ ಪಮ್ಮಾರ್, ಸುನಿಲ್ ನಾಯ್ಕ, ಮಹೇಂದ್ರನಾಯ್ಕ, ಪುಂಡಲಿಕನಾಯ್ಕ, ಮನೋಹರ ಪವಾರ್, ತುಳಸಿನಾಯ್ಕ, ಅಮರೇಶ್, ಶಿವಾನಂದ ಲಮಾಣಿ, ಕುಮಾರ್ ನಾಯ್ಕ ಸೇರಿದಂತೆ ಹಲವರು ಸಭೆಯಲ್ಲಿ ಉಪಸ್ಥಿತರಿದ್ದರು.
