ಇತ್ತೀಚೆಗೆ ತಂದೆ ತಾಯಿಗಳು ತಮ್ಮ ಪ್ರೀತಿಯ ಮುದ್ದು ಮಕ್ಕಳಿಗೋಸ್ಕರ ಅವರು ಏನೇ ಕೇಳಿದರೂ ಇಲ್ಲ ಅನ್ನದೇ ಕೊಡಿಸಿಬಿಡುತ್ತಾರೆ. ಅದು ಅವರವರ ಮಕ್ಕಳ ಮೇಲಿನ ಪ್ರೀತಿ. ಆದರೆ ಕೊಡಿಸುವ ಮೊದಲು ಯಾವುದನ್ನ ಕೊಡಿಸುತ್ತಿದ್ದೀರಿ? ಅದರಿಂದ ಮಗುವಿಗೆ ಏನಾದರೂ ಅಪಾಯ ಕಾದಿದೆಯಾ? ಎಂದು ಸ್ವಲ್ಪ ಮುಂದಾಲೋಚಿಸಿ ನಿಮ್ಮ ಮಕ್ಕಳು ಇಷ್ಟಪಟ್ಟಿದ್ದನ್ನು ಕೊಡಿಸಿ. ಯಾಕೆ ಈ ಸಲಹೆ ನೀಡ್ತಿದ್ದೇವೆ ಅಂತ ಕೇಳಿದ್ರೆ, ಮಕ್ಕಳು ಆಟ ಆಡುವ ಬಲೂನ್ ಗಂಟಲಲ್ಲಿ ಸಿಲುಕಿ 7ನೇ ತರಗತಿ ವಿದ್ಯಾರ್ಥಿ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡದ ಹಳಿಯಾಳ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ.
13 ವರ್ಷದ ನವೀನ ನಾರಾಯಣ ಬೆಳಗಾಂವಕರ್, ತನ್ನ ಮನೆಯಲ್ಲಿ ಆಟವಾಡುತ್ತಿದ್ದ ವೇಳೆ ಬಲೂನ್ ಊದುವಾಗ ಅದು ಆತನ ಬಾಯಿಯ ಒಳ ಹೊಕ್ಕು ಗಂಟಲಲ್ಲಿ ಸಿಲುಕಿಕೊಂಡಿದೆ. ಉಸಿರಾಡಲು ಸಾಧ್ಯವಾಗದೆ ಒದ್ದಾಡುತ್ತಿದ್ದ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕೊನೆಯುಸಿರೆಳೆದಿದ್ದಾನೆ.