ಗದಗ, ಏಪ್ರೀಲ್: 9 – ಗದಗ ಜಿಲ್ಲಾ ವಕೀಲರ ಸಂಘದ 2025–2027ನೇ ಸಾಲಿನ ಚುನಾವಣೆಯ ಸಹ ಕಾರ್ಯದರ್ಶಿ ಹುದ್ದೆಗೆ ಯುವ ನ್ಯಾಯವಾದಿ ಬಸವರಾಜ ಬೀರಳ್ಳಿ ಅವರು ಇಂದು ತಮ್ಮ ನಾಮಪತ್ರವನ್ನು ಸಹಾಯಕ ಚುನಾವಣಾಧಿಕಾರಿಗಳಾದ ಎಂ.ಎಸ್. ಹಾಳಕೇರಿ ಅವರಿಗೆ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೆ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ವಕೀಲರಾದ ಶ್ರೀಕಾಂತ್ ದೊಡ್ಡಮನಿ, ಬಿ.ಎಸ್. ಮಾಡಲಗೇರಿ, ಎನ್.ಎಸ್. ಬಿಚ್ಚಗಟ್ಟಿ, ಎಸ್.ಎಸ್. ಕಾಟ್ರಳ್ಳಿ, ಎಂ.ಎಸ್. ಬಡಿಗೇರ್, ವಿ.ಜಿ. ಮುದಿಯಪ್ಪನವರ್, ಡಿ.ಜಿ. ಮೆಹರವಾಡೆ, ಅನಿಲ್ ಶಿಂಗತಲಕೇರಿ, ಟಿ.ಆರ್. ಕೊಂಗಟಿ, ಆರ್.ಸಿ. ಶಿಷ್ಟಗಾರ, ಮಜ್ಜಿಗುಡ್ಡ್, ವೈ.ಎಚ್. ಅಸುಂಡಿ, ಆರ್.ಬಿ.ಎಸ್. ರಾಠೋಡ, ಆರ್.ಬಿ. ತಳವಾರ್ ಹಾಗೂ ವೈ.ಎಫ್. ಕನ್ಯಾಳ ಮತ್ತು ಇತರರು ಉಪಸ್ಥಿತರಿದ್ದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಗದಗ ಜಿಲ್ಲೆಯ ವಕೀಲರ ಸಂಘದ ಚುನಾವಣೆಯು ದಿನಾಂಕ ಏಪ್ರೀಲ್ 26 ರಂದು ನಡೆಯಲಿದ್ದು, ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಯುವ ವಕೀಲರ ನಡುವೆಯೂ ಈ ಬಾರಿ ಚುನಾವಣೆಯಲ್ಲಿ ಉತ್ಸಾಹ ಹೆಚ್ಚಾಗಿರುವುದು ಗೋಚರಿಸುತ್ತಿದೆ.
