Sunday, April 20, 2025
Homeಸುತ್ತಾ-ಮುತ್ತಾಅವಳಿ ನಗರದ ಬಾರ್ ಗಳಲ್ಲಿ ಪುಡಿರೌಡಿಗಳ ಅಟ್ಟಹಾಸ! ಅಬಕಾರಿ ಇಲಾಖೆ ಅಧಿಕಾರಿಗಳು ಗಪ್ ಚುಪ್!

ಅವಳಿ ನಗರದ ಬಾರ್ ಗಳಲ್ಲಿ ಪುಡಿರೌಡಿಗಳ ಅಟ್ಟಹಾಸ! ಅಬಕಾರಿ ಇಲಾಖೆ ಅಧಿಕಾರಿಗಳು ಗಪ್ ಚುಪ್!

ಗದಗ: ಅವಳಿ ನಗರದಲ್ಲಿ ಪುಡಿರೌಡಿಗಳ ಉಪಟಳ ಮುಂದುವರೆದಿದ್ದು, ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವನಿಗೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ‌ರುವ ಘಟನೆ ಗದಗ ನಗರದ ಪಾಪ್ಯುಲರ್ ಬಾರ್ ನಲ್ಲಿ ನಡೆದಿದೆ.

ಕುಡಿಯುತ್ತ ಕುಳಿತಿದ್ದ ವ್ಯಕ್ತಿಯ ಮೇಲೆ ಇಬ್ಬರು ಪುಡಿ ರೌಡಿಗಳು ಏಕಾ ಏಕಿ ಹಲ್ಲೆ ನಡೆಸಿ, ಜಗ್, ಗ್ಲಾಸ್, ಬಾಟಲ್ ನಿಂದ ಹಲ್ಲೆ ಮಾಡಿ‌ ಪುಂಡರು ಸ್ಥಳದಿಂದ ಎಸ್ಕೇಪ್ ಅಗಿದ್ದಾರೆ.

ಗದಗ ನಗರದ ಜೀವನ್, ಆಸೀಫ್ ಎಂಬಾತರಿಂದ ಈ ಕೃತ್ಯ ನಡೆದಿದ್ದು, ಹಲ್ಲೆ ಮಾಡುವ ಘಟನೆಯ ದೃಶ್ಯ ಬಾರ್ ನಲ್ಲಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇನ್ನು ಲಿಕ್ಕರ್ ಮಾಲೀಕರು ಅಬಕಾರಿ ನಿಯಮ ಉಲ್ಲಂಘನೆ ಮಾಡಿದ್ರೂ ಅಬಕಾರಿ ಇಲಾಖೆ ಅಧಿಕಾರಿಗಳು‌ ಮಾತ್ರ ಗಪ್ ಚುಪ್ ಕುಳಿತಿದ್ದಾರೆ ಅಂತ ಸಾರ್ವಜನಿಕರು ಆರೋಪಿಸಿದ್ದಾರೆ.

ಕಳೆದ ವಾರವಷ್ಟೇ ಕಳಸಾಪುರ ರಸ್ತೆಯ ರಿಂಗ್ ರೋಡ್ ಬಳಿ ಇರುವ ರಾಜ್ ಕಮಲ್‌ ವೈನ್ ಶಾಪ್ ನಲ್ಲಿ ಸ್ನ್ಯಾಕ್ಸ್ ವಿಷಯವಾಗಿ ಗಲಾಟೆಯಾಗಿತ್ತು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಬಾರ್ ಮಾಲೀಕರಿಂದ ಅಬಕಾರಿ ಕಾನೂನು ಉಲ್ಲಂಘನೆ ಆದರೂ‌ ಸಹಿತ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವದು ಇಂಥಹ ಘಟನೆಗಳಿಗೆ ಸಾಕ್ಷಿಯಾಗಿದೆ.

ಘಟನೆ ಸಂಬಂಧ ಶಹರ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲಿಸಿ ತನಿಖೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹಲ್ಲೆಗೊಳಗಾದ ವ್ಯಕ್ತಿ ಹಾಗೂ ಘಟನೆಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಲ್ಲೆ‌ ಘಟನೆಯ ದೃಶ್ಯ ಕೆಳಗಿನ ಯೂಟ್ಯೂಬ್ ಲಿಂಕ್ ನಲ್ಲಿ ನೋಡಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments