ಮಂಗಳೂರು: ಬೀದರ್ ನಲ್ಲಿ ಎಟಿಎಂ ಗೆ ಹಣ ತುಂಬಿಸುವ ವೇಳೆ, ಸಿಬ್ಬಂದಿಗೆ ಗುಂಡಿಟ್ಟು ಕೊಲೆ ಮಾಡಿ, ಹಣ ಸಮೇತ ದರೋಡೆಕೋರರು ಪರಾರಿಯಾದ ಘಟನೆ ಮಾಸುವ ಮುನ್ನವೇ ಮತ್ತೊಂದು ಬ್ಯಾಂಕ್ ದರೋಡೆ ಪ್ರಕರಣ ಮಂಗಳೂರಿನಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆ, ಉಳ್ಳಾಲದ ಕೆ.ಸಿ.ರೋಡ್ ನ ಕೋಟೆಕಾರು ಬ್ಯಾಂಕ್ ಶಾಖೆಯಿಂದ ಭಾರೀ ಪ್ರಮಾಣದಲ್ಲಿ ದರೋಡೆ ಮಾಡಿದ್ದು, ಬ್ಯಾಂಕ್‌ನಲ್ಲಿದ್ದ ಸಿಬ್ಬಂದಿಗೆ ಬಂದೂಕು ತೋರಿಸಿ ಖದೀಮರ ತಂಡ ದರೋಡೆ ನಡೆಸಿದೆ.

ಹಾಡಹಗಲೇ ಐದು ಮಂದಿ ಆಗಂತುಕರ ತಂಡದಿಂದ ಈ ಕೃತ್ಯ ನಡೆದಿದ್ದು, ಬ್ಯಾಂಕ್‌ನಲ್ಲಿದ್ದ ಚಿನ್ನ ಒಡವೆ, ನಗದುಗಳನ್ನೆಲ್ಲವೂ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.
ಫಿಯೇಟ್ ಕಾರಿನಲ್ಲಿ ಬಂದ ದರೋಡೆಕೋರರು, ಕಳ್ಳತನ ನಡೆಸಿ, ಬಳಿಕ ಮಂಗಳೂರು ಕಡೆಗೆ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ತನಿಖೆ ಮುಂದುವರೆಸಿದ್ದಾರೆ. ಸಿಎಂ ಮಂಗಳೂರಿನಲ್ಲಿ ಇರುವಾಗಲೇ ಈ ದರೋಡೆ ನಡೆದಿದ್ದು, ವಿಧಾನಸಭೆ ಸ್ಪೀಕರ್ ಹಾಗೂ ಶಾಸಕ ಯು.ಟಿ.ಖಾದರ್ ಬ್ಯಾಂಕ್ ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.