ಬಳ್ಳಾರಿ:ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ನಿಮಗೆಲ್ಲಾ ಗೊತ್ತಿದೆ. ಹೀಗೆ ಈ ಸರಣಿ ಸಾವಿನ ಪ್ರಕರಣವನ್ನ ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾವಿನ ಸಮಸ್ಯೆ ನಾನು ರಾಜೀನಾಮೆ ನೀಡುವದರಿಂದ ಸರಿಯಾಗುತ್ತದೆ ಅನ್ನುವದಾದರೆ ಅದಕ್ಕೂ ನಾನು ಸಿದ್ಧನಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ನನ್ನ ತಪ್ಪು ಏನಾದರೂ ಇದ್ದಲ್ಲಿ ನಾನು ರಾಜೀನಾಮೆ ಕೊಡೋದಕ್ಕೆ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ. ಈಗಾಗಲೇ ಬಳ್ಳಾರಿಯ ಬೀಮ್ಸ್ ನಲ್ಲಿ ಸರಣಿ ಬಾಣಂತಿಯರ ಸಾವಾಗಿದ್ದು, ಇಂದೂ ಸಹ ಓರ್ವ ಬಾಣಂತಿ ಸುಮಯ್ಯ ಅನ್ನೋರ ಸಾವಾಗಿದೆ.ಈವರೆಗೂ ಒಟ್ಟು ಆರು ಬಾಣಂತಿಯರು ಮೃತಪಟ್ಟಿದ್ದಾರೆ.
ಬಳ್ಳಾರಿಯಲ್ಲಿ ಇಂದೂ ಸಹ ಬಾಣಂತಿ ಸಾವು! ರಾಜೀನಾಮೆಗೆ ಸಿದ್ಧ ಎಂದ ಗುಂಡೂರಾವ್!
22
previous post