ಎರೆಡು ಬಾರಿ ಓಲಂಪಿಕ್ ಪದಕ ವಿಜೇತೆ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ. ಹೌದು ಇನ್ನೇನು ಕೆಲವೇ ದಿನಗಳಲ್ಲಿ ಅವರು ಸಪ್ತಪದಿ ತುಳಿಯಲಿದ್ದಾರೆ. ಹೈದರಾಬಾದ್ ನ ವೆಂಕಟ ದತ್ತ ಸಾಯಿ ಅವರನ್ನ ಇದೇ ಡಿಸೆಂಬರ್ 22 ರಂದು ವಿವಾಹವಾಗಲಿದ್ದಾರೆ. ವೆಂಕಟ ಪೊಸಿಡೆಕ್ಸ್ ಟೆಕ್ನಾಲಜೀಸ್ ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಇವರು, 2018 ರಲ್ಲಿ ಪ್ಲೇಮ್ ವಿವಿಯಿಂದ ಬಿಬಿಎ ಪೂರ್ಣಗೊಳಿಸಿದ್ದಾರೆ.ಇಂಟರ್ನ್ಯಾಷನಲ್ ಇನ್ಸಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ ಬೆಂಗಳೂರಿನಿಂದ ಡೇಟಾ ಸೈನ್ಸ್ ಮತ್ತು ಮಷಿನ್ ಲರ್ನಿಂಗ್ ನಲ್ಲಿ ಸ್ನಾತಕೋತ್ತರ ಪದವಿಯನ್ನ ವೆಂಕಟ ಅವರು ಪಡೆದುಕೊಂಡಿದ್ದು, ಪಿ.ವಿ.ಸಿಂಧು ಇವರ ಜೊತೆಗೆ ವಿವಾಹವಾಗಲಿದ್ದಾರೆ.
ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಗೆ ಕಂಕಣ ಭಾಗ್ಯ
