ಲಕ್ಷ್ಮೇಶ್ವರ: ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ತ ಪಟ್ಟಣದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವ ನಿಟ್ಟಿನಲ್ಲಿ ಪಟ್ಟಣದ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪಿಎಸ್ಐ ನಾಗರಾಜ ಗಡದ ನೇತೃತ್ವದಲ್ಲಿ ಪೊಲೀಸರು ಬುಧವಾರ ಪಥ ಸಂಚಲನ ನಡೆಸಿದರು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಈ ವೇಳೆ ಪಿಎಸ್ಐ ನಾಗರಾಜ ಗಡದ ಮಾತನಾಡಿ, ‘ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ಗಣೇಶನ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ನಡುವೆ ಯಾವುದೇ ಗಲಾಟೆ ಗದ್ದಲಕ್ಕೆ ಅವಕಾಶ ನೀಡಬಾರದು. ಸಂಜೆ ಮತ್ತು ರಾತ್ರಿ ನಿಗದಿಪಡಿಸಿದ ಸಮಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳನ್ನು ಮುಗಿಸಬೇಕು. ವೃದ್ಧರು, ರೋಗಿಗಳು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಬ್ಬರದ ಧ್ವನಿವರ್ಧಕ ಮತ್ತು ಡಿಜೆ ಬಳಕೆ ನಿಷೇಧ ಮಾಡಲಾಗಿದೆ’ ಮತ್ತು ಈದ್ ಮಿಲಾದ್ ಹಬ್ಬವು ಶಾಂತಿ ರೀತಿಯಲ್ಲಿ ಮಾಡಬೇಕು ಎಂದರು.
‘ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಈಗಾಗಲೇ ಪೋಲಿಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಸಭೆ ಮಾಡಿದ್ದು ಸಾರ್ವಜನಿಕರ ಸಮಸ್ಯೆ ಆಲಿಸಿ ಅವುಗಳನ್ನು ಪರಿಹರಿಸಲು ಪೊಲೀಸರು ಬದ್ಧರಾಗಿದ್ದಾರೆ ಎಂದು ತಿಳಿಸಿದ್ದು. ಹಾಗಾಗಿ, ನಿಬಂಧನೆಗಳಿಗೆ ಒಳಪಟ್ಟು, ಮಾರ್ಗಸೂಚಿ ಪ್ರಕಾರ ಹಬ್ಬ ಆಚರಿಸಬೇಕು ಎಂದು ಮನವಿ ಮಾಡಿದರು.
ಪೋಲಿಸ್ ಠಾಣೆಯಿಂದ ಪ್ರಾರಂಭಗೊಂಡ ಪಥ ಸಂಚಲನ ಶಿಗ್ಲಿ ನಾಕಾ, ಪಾದಗಟ್ಟಿ, ಸೋಮೇಶ್ವರ ದೇವಸ್ಥಾನ, ದೂದನಾನಾ ದರ್ಗ, ಪಂಪ ಸರ್ಕಲ ಸೇರಿ ಪಟ್ಟಣ ಪ್ರಮುಖ ಬೀದಿಗಳಲ್ಲಿ ಪೊಲೀಸರು ಶಾಂತಿ ಸಂದೇಶ ಸಾರಿದರು.
ಪಿಎಸ್ಐ ನಾಗರಾಜ ಗಡದ ಸೇರಿದಂತೆ , ಠಾಣೆಯ ಸಿಬ್ಬಂದಿಗಳೆಲ್ಲರೂ ಪಾಲ್ಗೊಂಡಿದ್ದರು.