ಶಿರಹಟ್ಟಿ/ಬೆಂಗಳೂರು:
ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ (ರಿ), ಬೆಂಗಳೂರು ವತಿಯಿಂದ ಶಿರಹಟ್ಟಿ ತಾಲೂಕ ಘಟಕದ ಅಧ್ಯಕ್ಷರಾದ ಶ್ರೀ ಬಿ.ಡಿ. ಪಲ್ಲೇದ ಅವರನ್ನು ಸಂಘದ ನಿಯಮ ಉಲ್ಲಂಘನೆ ಮತ್ತು ನಿಯಮ ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಕಾರಣದಿಂದ ವಜಾಗೊಳಿಸಲಾಗಿದೆ.
ಈ ಕುರಿತು ಸಂಘದ ರಾಜ್ಯಾಧ್ಯಕ್ಷ ಶ್ರೀ ಸೋಮನಗೌಡ ಮಾಲಿ ಪಾಟೀಲ ಅವರ ಸೂಚನೆಯ ಮೇರೆಗೆ, ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಈರಣ್ಣ ಕರಿಬೆಷ್ಟಿ ಅವರು ಅಧಿಕೃತವಾಗಿ ವಜಾ ಆದೇಶ ಹೊರಡಿಸಿದ್ದಾರೆ.
ಸಂಘದ ಪ್ರಕಟಣೆಯ ಪ್ರಕಾರ, ಬಿ.ಡಿ. ಪಲ್ಲೇದರು ಸಂಘದ ಶಿಸ್ತಿಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಆದೇಶ ಕೂಡಲೇ ಜಾರಿಗೆ ಬರುವಂತಾಗಿದೆ.
ಇನ್ನುಮುಂದೆ ಬಿ.ಡಿ. ಪಲ್ಲೇದರು ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಯಾವುದೇ ಹುದ್ದೆ ಅಥವಾ ಚಟುವಟಿಕೆಯಲ್ಲಿ ಭಾಗವಹಿಸಲು ಅರ್ಹರಾಗಿರುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.