ಗದಗ: ಅಯ್ಯಪ್ಪನ ದರ್ಶನ ಪಡೆದು ಮಾಲಾಧಾರಿ ನಾಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ನರಗುಂದ ತಾಲೂಕಿನ ಕಣ್ಕಿಕೊಪ್ಪ ಗ್ರಾಮದ ಭಕ್ತ ಹನುಮರಡ್ಡಿ ಕಲಹಾಳ ಅನ್ನುವಾಯ ನಾಪತ್ತೆಯಾಗಿರೋ ಅಯ್ಯಪ್ಪನ ಭಕ್ತನಾಗಿದ್ದಾನೆ.

ಜನವರಿ 7 ರಂದೇ ಹನುಮರೆಡ್ಡಿ ಶಬರಿಮಲೆಯ ಅಯ್ಯಪ್ಪ ದರ್ಶನಕ್ಕೆ ಹೋಗಿದ್ದನು. ಅಯ್ಯಪ್ಪನ ಮಾಲೆಹಾಕಿದ್ದ ಹನುಮರಡ್ಡಿ ತಾನೂ ಸಹ
ಗ್ರಾಮದ ಮಾಲಾಧಾರಿಗಳೊಂದಿಗೆ ಶಬರಿಮಲೆಗೆ ಹೋಗಿದ್ದನು.
ಜನವರಿ 7 ರಂದು ಅಯ್ಯಪ್ಪ ದರ್ಶನ ಪಡೆದು ಮರಳಿ ಬರುವ ವೇಳೆ ನಾಪತ್ತೆಯಾಗಿದ್ದಾನೆ. ಮೊಬೈಲ್ ಸ್ವಿಚ್ ಆಫ್ ಆದ ಹಿನ್ನೆಲೆ ಹನುಮರೆಡ್ಡಿ ಸ್ನೆಹಿತರ ಸಂಪರ್ಕಕ್ಕೆ ಸಿಕ್ಕಿಲ್ಲ. ಹನುಮರಡ್ಡಿಗಾಗಿ ಕೇರಳ ರಾಜ್ಯದ ಪಂಪಾ, ಶಬರಿಮಲೆಯಲ್ಲಿ ಹುಡುಕಾಟ ನಡೆಸಲಾಗಿದೆ.
ಅಲ್ಲದೇ, ಕೇರಳದ ಪಂಪಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇನ್ನು ಜನವರಿ 7 ರಂದು ನಾಪತ್ತೆಯಾದ ಹನುಮರಡ್ಡಿಗಾಗಿ ಆತನ ಹೆತ್ತ ತಾಯಿ ಕಾದುಕುಳಿತಿದ್ದಾಳೆ. 21 ದಿನಗಳು ಕಳೆದ್ರು ಮನೆಗೆ ಬಾರದ ಮಗನ ನೆನೆದು ಹೆತ್ತವರು ಕಣ್ಣೀರು ಹಾಕ್ತಿದ್ದಾರೆ. ಮಗ ಎಲ್ಲೆ ಇದ್ರು ಮನೆಗೆ ಬರುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ.
ಕೇರಳ ಪೊಲೀಸರು ಆದಷ್ಟು ಬೇಗನೆ ಮಗನ ಹುಡುಕಿಕೊಡುವಂತೆ ಕುಟುಂಬಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ.