ಗದಗ: ಚಿಲ್ಲರೆ ವಿಷಯವಾಗಿ ಪುಂಡರ ಗುಂಪೊಂದು ಬಂಕ್ ಸಿಬ್ಬಂದಿಗಳ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ನಡೆಸಿರುವ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ.
ಪೆಟ್ರೋಲ್ ಹಾಕಿಸಲು ಬಂದಾಗ ಈ ಘಟನೆ ಜರುಗಿದ್ದು, ಸಿಬ್ಬಂದಿಗಳ ಮೇಲೆ ಪುಡಿ ರೌಡಿಗಳಂತೆ ಬಂದ ಪುಂಡರು, ಪೆಟ್ರೋಲ್ ಬಂಕ್ ಸಿಬ್ಬಂದಿಗಳನ್ನ ಥಳಿಸಿದ್ದಾರೆ.
ಪುಂಡರ ಅಟ್ಟಹಾಸದ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಹಲ್ಲೆಗೊಳಗಾದ ಸಿಬ್ಬಂದಿಯನ್ನ ಜೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.