ಗದಗ ( ಲಕ್ಷ್ಮೇಶ್ವರ ) : ಗದಗ ಜಿಲ್ಲಾ ನ್ಯೂಸ್ ಫಸ್ಟ್ ವಾಹಿನಿಯ ಜಿಲ್ಲಾ ವರದಿಗಾರ ಸುರೇಶ ಕಡ್ಲಿಮಟ್ಟಿ ಇವರ ಮೇಲಿನ ಹಲ್ಲೆ ಖಂಡಿಸಿ ಲಕ್ಷ್ಮೇಶ್ವರ ತಾಲೂಕಾ ಪತ್ರಕರ್ತರ ಸಂಘದಿಂದ ಮನವಿ ಸಲ್ಲಿಸಲಾಯಿತು.
ಮನವಿ ನೀಡಿ ಮಾತನಾಡಿದ ಹಿರಿಯ ಪತ್ರಕರ್ತರ ರಮೇಶ ನಾಡಗೇರ ಗದಗ ಜಿಲ್ಲಾ ನ್ಯೂಸ್ ಫಸ್ಟ್ ವರದಿಗಾರ ಸುರೇಶ ಕಡ್ಲಿಮಟ್ಟಿ ಇವರು ವರದಿ ಮಾಡಲು ತೆರಳಿದ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕಣೂರ ಹಾಗೂ ಅವರ ಬೆಂಬಲಿಗರು ವರದಿಗಾರನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿ : ಪರಮೇಶ ಎಸ್ ಲಮಾಣಿ
ಅವಾಚ್ಯ ಶಬ್ದಗಳಿಂದ ನಿಂದಿಸಿ ಕ್ಯಾಮರಾ ಕಸಿಯಲು ಯತ್ನಿಸಿದಲ್ಲದೇ, ವಾಸ್ತವ ವರದಿ ಮಾಡಲು ಅಡ್ಡಿ ಪಡಿಸಿದ್ದಾರೆ. ವರದಿಗಾರರು ಅಕ್ರಮ ಅನ್ಯಾಯಗಳ ವಿರುದ್ಧ ಧ್ವನಿ ಎತ್ತಿದಾಗ ಅವರನ್ನು ಬೆದರಿಸುವುದು ಮತ್ತು ಧಮ್ಮಿ ಮಾಡುವುದು, ಹಲ್ಲೆ ಮಾಡುವುದು ನಿರಂತರವಾಗಿ ನಡೆಯುತ್ತಲೆ ಇದೆ. ಇಂತಹ ಕೃತ್ಯಗಳನ್ನು ತಡೆಗಟ್ಟಲು ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಲ್ಲದೇ, ವರದಿಗಾರರಿಗೆ ಸೂಕ್ತ ರಕ್ಷಣೆ ಒದಗಿಸಬೇಕೇಂದು ಆಗ್ರಹಿಸಿದರಲ್ಲದೇ,
ಕೆಲವ ರಾಜಕೀಯ ವ್ಯಕ್ತಿಗಳು, ಅಧಿಕಾರಿಗಳು ತಮ್ಮ ಕಾರ್ಯಗಳ ಬಗ್ಗೆ ಸುದ್ದಿ ಮಾಡಲು ವರದಿಗಾರರನ್ನು ಬಳಿಸಿಕೊಳ್ಳುತ್ತಾರೆ. ಆದರೆ ಅದೆ ಅವರು ಮಾಡುವ ಅಕ್ರಮಗಳ ಬಗ್ಗೆ ಸುದ್ದಿಗಳನ್ನ ಮಾಡಲು ಹೋದರೆ ಈ ರೀತಿಯ ಕೃತ್ಯ ನಡಿಸುತ್ತಾರೆ ಇದು ಇವರಿಗೆ ಉತ್ತಮ ಬೆಳವಣಿಗೆ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವರದಿಗಾರನ ಮೇಲೆ ನಡೆದಿರುವುದರ ಬಗ್ಗೆ ಸಂಕಣೂರ ಕ್ಷಮೆ ಕೇಳಬೇಕು , ಸರ್ಕಾರ ಇಂತಹ ಘಟನೆಗಳಿಗೆ ಕಡಿವಾಣ ಹಾಕಬೇಕು, ಹಾಕದೆಯಿದ್ದರೆ ಮುಂದಿನ ದಿನ ಮಾನಗಳಲ್ಲಿ ರಾಜಕೀಯ ವ್ಯಕ್ತಿಗಳ ಕಾರ್ಯಕ್ರಮಗಳಿಗೆ ಪತ್ರಕರ್ತರು ಬಾಯಕಾಟ್ ಹಾಕುತ್ತಾರೆ ಎಂದು ಎಚ್ಚರಿಸಿದರು.
ಸಂದರ್ಭದಲ್ಲಿ ತಾಲೂಕ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪೂರ, ಪ್ರಧಾನ ಕಾರ್ಯದರ್ಶಿ ಅಶೋಕ ಸೊರಟೂರ, ಹಿರಿಯ ಪತ್ರಕರ್ತರರಾದ ನಾಗರಾಜ ಹಣಗಿ, ಸೋಮಣ್ಣ ಯತ್ತಿನಹಳ್ಳಿ, ಸುರೇಶ ಲಮಾಣಿ, ಶಿವಲಿಂಗಯ್ಯ ಹೊತಗಿಮಠ, ಪರಮೇಶ ಲಮಾಣಿ, ಬೀರಣ್ಣ ಪೂಜಾರ ಇದ್ದರು.
