Home » News » ಅಟಲ್ ಜಿ ಟ್ರೋಫಿ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರಧಾನ

ಅಟಲ್ ಜಿ ಟ್ರೋಫಿ ಸಮಾರೋಪ ಸಮಾರಂಭ ಮತ್ತು ಪ್ರಶಸ್ತಿ ಪ್ರಧಾನ

by CityXPress
0 comments

ಗದಗ: ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಗದಗ ಜಿಲ್ಲೆಯ ನೇತೃತ್ವದಲ್ಲಿ ರಾಷ್ಟ್ರೀಯ ಯುವದಿನ ಮತ್ತು ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಬ್ಬಡ್ಡಿ ಕ್ರೀಡಾಕೂಟದ ಎರಡನೆಯ ದಿನ ಯುವಕ ಮತ್ತು ಯುವತಿ ರೋಚಕ ಪಂದ್ಯಾವಳಿಗಳು ನಡೆದವು.

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಲಿಂಗರಾಜ ಪಾಟೀಲ ಅವರು ಮಾತನಾಡಿ ಆಯುಷ್ಯಕ್ಕಾಗಿ ವೃತ್ತಿಗಾಗಿ ನಮ್ಮ ಹಿರಿಯರ ಕಾಲದಿಂದಲೂ ಗ್ರಾಮೀಣ ಆಟಗಳಿಗೆ ಮಹತ್ವ ನೀಡುತ್ತಾ ಬಂದಿದ್ದಾರೆ. ಇದರಿಂದ ಆರೋಗ್ಯ ವೃದ್ಧಿ, ಸದೃಢ ಮನಸ್ಸು ಮತ್ತು ವ್ಯಕ್ತಿತ್ವ ರೂಡಿಗೊಳಲು ಸಾಧ್ಯ.ಆರೋಗ್ಯ ಹಾಳಾದಲ್ಲಿ ಎಲ್ಲವೂ ಕಳೆದುಕೊಂಡಂತೆ. ಆದ್ದರಿಂದ ನಮ್ಮ ಪ್ರತಿಯೊಂದು ಸಾಧನೆಗೆ ಕ್ರೀಡೆ ಸಹಕಾರಿಯಾಗುತ್ತದೆ. ಆದ್ದರಿಂದ ಕ್ರೀಡಾಸಕ್ತಿಯನ್ನು ಬೆಳೆಸಿಕೊಳ್ಳೋಣ ಮಾನಸಿಕ ಮತ್ತು ದೈಹಿಕವಾಗಿ ಸದೃಢ ಸಂಪತ್ತನ್ನು ಗಳಿಸೋಣ ಎಂದು ಹೇಳಿದರು. 

ನಗರ ಮಂಡಲದ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಅನಿಲ್ ಅಬ್ಬಿಗೇರಿ ಅವರು ಮಾತನಾಡಿ ಜಿಲ್ಲೆಯ ಯುವ ಮೋರ್ಚಾ ಅಧ್ಯಕ್ಷರ ನೇತೃತ್ವದಲ್ಲಿ ಕ್ರಿಯಾಶೀಲವಾಗಿ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಗೊಳಿಸುವ ಯುವ ಮೋರ್ಚಾ ಎಲ್ಲಾ ಸದಸ್ಯರ ಕಾರ್ಯವನ್ನು ಶ್ಯಾಗಿಸಿದರು. ಜಿಲ್ಲೆಯ ವಿವಿಧ ಭಾಗಗಳಲ್ಲಿ ಯುವಕರ ಸಂಘಟನೆ ಮತ್ತು ಕ್ರೀಡಾಕೂಟಕ್ಕೆ ಬೇಕಾದ ಸಂಪೂರ್ಣ ವ್ಯವಸ್ಥೆಯನ್ನು ಪ್ರಬುದ್ಧವಾಗಿ ನಿರ್ವಹಿಸುತ್ತಾ ನಮ್ಮ ಕ್ರೀಡಾ ಆಸಕ್ತಿಗೆ ಶಕ್ತಿ ತುಂಬುತ್ತಿದ್ದಾರೆ. ಈ ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಯುವಕ ಯುವತಿಯರು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರ ಕ್ರೀಡಸಾಧನೆ ಇನ್ನು ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಅಭಿನಂದಿಸಿದರು. 

ನಿಕಟಪೂರ್ವ ರೈತ ಮೋರ್ಚಾದ ಜಿಲ್ಲಾಧ್ಯಕ್ಷರು ಹಾಗೂ ಹಿರಿಯ ಕಬ್ಬಡ್ಡಿ ಪಟು ರಾಜು ಕುಲಕರ್ಣಿ ಅವರು ಮಾತನಾಡಿ ರಾಷ್ಟ್ರೀಯ ಯುವ ದಿನೋತ್ಸವದ ಅಂಗವಾಗಿ ಕಬ್ಬಡ್ಡಿ ಕ್ರೀಡೆ ಒಂದು ದೇಶಿಯ ಆಟವಾಗಿದೆ. ಇದರಿಂದ ಗ್ರಾಮೀಣ ಪ್ರತಿಭೆಗಳಿಗೆ ಮತ್ತು ಪ್ರಾದೇಶಿಕ ಆಟಗಳಿಗೆ ಮಹತ್ವ ನೀಡುವುದರಿಂದ ಕಳೆದು ಹೋದ ಕ್ರೀಡೆಗಳನ್ನು ಉಳಿಸಿ ಬೆಳೆಸುವುದು ಕಬ್ಬಡ್ಡಿ ಆಟ. ಮಣ್ಣಿನ ಜೊತೆಗೆ ನೆಲದ ಮೇಲೆ ಆಟವಾದುದರಿಂದ ದೈಹಿಕ ಸದೃಢತೆ ಹೆಚ್ಚಾಗುತ್ತದೆ. ಇಂದಿನ ದಿನಗಳಲ್ಲಿ ಮೆತ್ತನೆಯ ಮ್ಯಾಟ್ ಮೇಲೆ ಆಡುವ ಕಾಲ ಬಂದಿದೆ. ಆದ್ದರಿಂದ ನಮ್ಮ ಸದೃಢತೆ ಕಡಿಮೆ ಆಗಬಹುದು. ಆದ್ದರಿಂದ ದೇಶಿ ಕ್ರೀಡೆಗಳಿಗೆ ಮಹತ್ವ ನೀಡುವುದು ಯುವ ಮೋರ್ಚಾದ ಉದ್ದೇಶವಾಗಿದೆ ಎಂದು ಮಾತನಾಡಿದರು, 

banner

ನಿರೂಪಣೆಯನ್ನು ರೋಣ ಮಂಡಲದ ಅಧ್ಯಕ್ಷರಾದ ಉಮೇಶ್ ಅನ್ನು ಪಾಟೀಲ್ ಅವರು ಮಾಡಿದರು. ಪ್ರಶಸ್ತಿ, ನಗದು ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾದ ಸಂತೋಷಕ್ಕೆ ಅವರು ವಿತರಿಸಿದರು. ವಂದನಾರ್ಪಣೆಯನ್ನು ಜಿಲ್ಲಾ ಯುವ ಮೋರ್ಚಾ ಕಾರ್ಯಕರ್ತರಾದ ನವೀನ ಕುರ್ತಕೋಟಿ ಅವರು ನುಡಿದರು. 

ಈ ಕ್ರೀಡಾಕೂಟದಲ್ಲಿ ಯುವತಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಶರಣಬಸವೇಶ್ವರ ಕಲಿಕೇರಿ (ಎ) ತಂಡ , ದ್ವಿತೀಯ ಸ್ಥಾನ ಶ್ರೀ ಶರಣಬಸವೇಶ್ವರ ಕಲಿಕೇರಿ(ಬಿ) ತಂಡ ಹಾಗೂ ತೃತೀಯ ಸ್ಥಾನ ಎಸ್.ಜೆ.ಜೆ.ಎಮ್ ಪಿಯು ಕಾಲೇಜ್ ತಂಡ ಪಡೆದುಕೊಂಡವು. ಉತ್ತಮ ರೈಡರ್ ಭವಾನಿ ಮನಕವಾಡ , ಉತ್ತಮ ಆಲ್ ರೌಂಡರ್ ಭಾಗ್ಯ ಬೂದಿಹಾಳ , ಉತ್ತಮ ಕ್ಯಾಚರ್ ಐಶ್ವರ್ಯ ಪರಮೇಶ್ವರ ಅವರು ಸ್ಥಾನವನ್ನು ಪಡೆದಿದ್ದಾರೆ. ಯುವಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಿ ಸಿ ಪಾಟೀಲ ಅಭಿಮಾನಿ ಬಳಗ ಲಕ್ಕುಂಡಿ (ಎ) ತಂಡ, ದ್ವಿತೀಯ ಸ್ಥಾನ ರೈಲ್ವೇಸ್ ಗದಗ ಟೀಮ್ ಹಾಗೂ ತೃತೀಯ ಸ್ಥಾನವನ ಬಿ.ಪಿ.ಎಡ್ ಕಾಲೇಜ ಪಡೆದುಕೊಂಡವು. ಉತ್ತಮ ರೈಡರ್ ವಿಷ್ಣು , ಉತ್ತಮ ಆಲ್ ರೌಂಡರ್ ಸಂಗಮೇಶ್ , ಉತ್ತಮ ಕ್ಯಾಚರ್ ಚಂದ್ರು ಕಂಬಳಿ ಅವರು ಸ್ಥಾನವನ್ನು ಪಡೆದಿದ್ದಾರೆ. 

ಈ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ನಿಂಗರಾಜ ತಿ ಪಾಟೀಲ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂತೋಷ ಅಕ್ಕಿ , ಜಿಲ್ಲಾ ಕೋಶಾಧ್ಯಕ್ಷರಾದ ನಾಗರಾಜ ಕುಲಕರ್ಣಿ, ನಗರ ಮಂಡಲದ ಅಧ್ಯಕ್ಷರಾದ ಅನಿಲ್ ಅಬ್ಬಿಗೇರಿ , ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ಬಸವರಾಜ್ ಇಟಗಿ,ಜಿಲ್ಲಾ ಪ್ರಕೋಷ್ಠದ ಸಂಚಾಲಕರಾದ ಶಶಿಧರ ದಿಂಡೂರ, ಜಿಲ್ಲಾ ರೈತ ಮೋರ್ಚಾದ ನಿಕಟಪೂರ್ವ ಅಧ್ಯಕ್ಷರಾದ ರಾಜು ಕುಲಕರ್ಣಿ ರೋಣ ಮಂಡಲ ಮೋರ್ಚಾದ ಅಧ್ಯಕ್ಷರಾದ ಉಮೇಶ ಚನ್ನು ಪಾಟೀಲ, ಡಂಬಳ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಪ್ರಕಾಶ ಕೊತ್ತಂಬರಿ, ಯುವ ಮೋರ್ಚಾ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ನವೀನ ಕುರ್ತಕೋಟಿ ಹಾಗೂ ಸಚಿನ್ ಮಡಿವಾಳರ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ನರೇಗಲ್ಲ , ಗದಗ ನಗರ ಮಂಡಲ ಉಪಾಧ್ಯಕ್ಷ ಪ್ರವೀಣ ಹಡಪದ, ಆನಂದ್ ಗಡಗೇರಿ ಹಾಗೂ ಪಕ್ಷದ ಪ್ರಮುಖರು, ಪದಾಧಿಕಾರಿಗಳು, ಯುವಕರು, ಕ್ರೀಡಾ ಪ್ರೇಮಿಗಳು ಮುಂತಾದವರು ಉಪಸ್ಥಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb