ಗದಗ : ಮತದಾನವು ನಮ್ಮ ಸಂವಿಧಾನ, ನಮಗೆಲ್ಲರಿಗೂ ನೀಡಿರುವ ಅತ್ಯಮೂಲ್ಯ ಹಕ್ಕಾಗಿದೆ ಎಂದು ಪ್ರಾಚಾರ್ಯ ಪ್ರೋ. ಪ್ರೇಮಾನಂದ ರೋಣದ ಹೇಳಿದರು.
ನಗರದ ಸನ್ಮಾರ್ಗ ಪದವಿ ಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ವಿದ್ಯಾಲಯದಲ್ಲಿ ಜರುಗಿದ ರಾಷ್ಟ್ರೀಯ ಮತದಾನ ದಿನಾಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಮತ ಚಲಾಯಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಅರ್ಹರಾದ ಪ್ರತಿನಿಧಿಗಳನ್ನು ಚುನಾಯಿಸುವುದು ಕೂಡ ಪ್ರತಿ ಮತದಾರನ ಪ್ರಮುಖ ಜವಾಬ್ದಾರಿ ಎಂದರು.
ಸ್ಟುಡೆಂಟ್ಸ್ ಏಜ್ಯುಕೇಶನ್ ಸೊಸೈಟಿಯ ಚೇರಮನ್‌ರಾದ ಪ್ರೋ. ರಾಜೇಶ ಕುಲಕರ್ಣಿಯವರು ಮಾತನಾಡಿ, ದೇಶದ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮತ್ತು ರಾಜಕೀಯ ಪ್ರತಿಕ್ರಿಯೆಯಲ್ಲಿ ಭಾಗವಹಿಸಲು ಉತ್ಯೇಜನದ ಸದುದ್ಧೇಶದಿಂದ ಭಾರತ ಸರಕಾರವು ೧೯೫೦ ರಲ್ಲಿ ಸ್ಥಾಪನೆಯಾದ ಭಾರತದ ಚುನಾವಣಾ ಆಯೋಗದ ಸವಿನೆನಪಿಗಾಗಿ ೨೦೧೧ ರಲ್ಲಿ ಮೊದಲ ಬಾರಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಿತು.
ಅಂದಿನಿಂದ ಪ್ರತಿವರ್ಷ ಜನೇವರಿ ೨೫ ರಂದು ಈ ವಿಶೇಷ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸುತ್ತಾ ಬರಲಾಗುತ್ತಿದೆ ಎಂದರು.
ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಂ. ಸಿ. ಹಿರೇಮಠ, ನಿರ್ದೇಶಕರಾದ ಪ್ರೊ. ರಾಹುಲ್ ಒಡೆಯರ, ಪ್ರೊ.ಪುನೀತ ದೇಶಪಾಂಡೆ, ಪ್ರೊ.ಸೈಯ್ಯದ್ ಮತಿನ್ ಮುಲ್ಲಾ, ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಯವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.