ಗದಗ: ಗದಗ ನಗರದ ಗದಗ–ಬಳ್ಳಾರಿ ಹೆದ್ದಾರಿಯಲ್ಲಿರುವ ವಿನಯ ಚಿಕ್ಕಟ್ಟಿ ಶಾಲೆಯಲ್ಲಿ Art of Living Foundation ವತಿಯಿಂದ “ಹ್ಯಾಪಿನೆಸ್ ಪ್ರೋಗ್ರಾಂ” ಎಂಬ ವಿಶೇಷ ಶಿಬಿರವನ್ನು ಆಯೋಜಿಸಲಾಗಿದೆ.
ಮಾರ್ಚ್ 9ರಿಂದ 11ರವರೆಗೆ ಪ್ರತಿದಿನ ಸಂಜೆ 5ರಿಂದ 8ರವರೆಗೆ ವಿನಯ ಚಿಕ್ಕಟ್ಟಿ ಶಾಲೆಯಲ್ಲೇ ಈ ಶಿಬಿರ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಈ ಶಿಬಿರದಲ್ಲಿ ಸುದರ್ಶನ ಕ್ರಿಯೆ ಎಂಬ ಉಸಿರಾಟದ ವಿಶಿಷ್ಟ ಮತ್ತು ಶಕ್ತಿಯುತ ಪ್ರಕ್ರಿಯೆ, ಯೋಗ ಹಾಗೂ ಪ್ರಾಣಾಯಾಮದ ಮೂಲಕ ದೈಹಿಕ ಆರೋಗ್ಯ ಮತ್ತು ಚೈತನ್ಯ ಹೆಚ್ಚಿಸುವ ಅಭ್ಯಾಸಗಳು, ಧ್ಯಾನದ ಮೂಲಕ ಮನಸ್ಸಿನ ಪ್ರಶಾಂತತೆ ಪಡೆಯುವ ವಿಧಾನಗಳು ಹಾಗೂ ದೈನಂದಿನ ಜೀವನದ ಸವಾಲುಗಳನ್ನು ಸುಲಭವಾಗಿ ಎದುರಿಸುವ ಪ್ರಾಯೋಗಿಕ ಜ್ಞಾನವನ್ನು ತಿಳಿಸಲಾಗುತ್ತದೆ.
ಈ ಶಿಬಿರದಲ್ಲಿ ಭಾಗವಹಿಸುವುದರಿಂದ ಉತ್ತಮ ನಿದ್ರೆ, ದೈಹಿಕ ಆರೋಗ್ಯ ವೃದ್ಧಿ, ಒತ್ತಡ ಮತ್ತು ಆತಂಕದಿಂದ ಮುಕ್ತಿ, ರೋಗನಿರೋಧಕ ಶಕ್ತಿ ಹಾಗೂ ಏಕಾಗ್ರತೆ ಹೆಚ್ಚಳ, ಜೊತೆಗೆ ಸಂಬಂಧಗಳಲ್ಲಿ ಮಧುರತೆ ಮತ್ತು ಆತ್ಮವಿಶ್ವಾಸ ವೃದ್ಧಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.
ಶಿಬಿರದಲ್ಲಿ ಭಾಗವಹಿಸಲು ಆಸಕ್ತರು ಇಂದೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 9886306121, 8073117990 ಹಾಗೂ 9945358365 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. ನೋಂದಣಿಗಾಗಿ aolt.in/960294 ಜಾಲತಾಣದ ಮೂಲಕವೂ ಹೆಸರು ದಾಖಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
