ಹೈದರಾಬಾದ್: ಬೆಳಿಗ್ಗೆಯಷ್ಟೇ ಅರೆಸ್ಟ್ ಆಗಿದ್ದ ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್’ಗೆ ರಿಲೀಫ್ ಸಿಕ್ಕಿದೆ.ಹೌದು, ಹೈದರಾಬಾದ್‌ನ ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಅಲ್ಲು ಅರ್ಜುನ್ ಅವರಿಗೆ ಸ್ವಲ್ಪ ಸಮಯದ ಹಿಂದೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನಾಂಪಲ್ಲಿ ನ್ಯಾಯಾಲಯ ಆದೇಶಿಸಿತ್ತು.
ಆದರೆ ಇದೀಗ ಹೈಕೋರ್ಟ್ ನಟ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿದೆ. ಏತನ್ಮಧ್ಯೆ, ಪೊಲೀಸರು ಈಗಾಗಲೇ ಅಲ್ಲು ಅವರನ್ನು ಅಲ್ಲಿನ ಚಂಚಲಗೂಡ ಜೈಲಿಗೆ ಸ್ಥಳಾಂತರಿಸಿದ್ದಾರೆ.