Sunday, April 20, 2025
Homeದೇಶ20 ಕೆಜಿ ತೂಕ ಹೊತ್ತೊಯ್ಯಬಲ್ಲ ಹೊಸ ಮಾನವರಹಿತ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

20 ಕೆಜಿ ತೂಕ ಹೊತ್ತೊಯ್ಯಬಲ್ಲ ಹೊಸ ಮಾನವರಹಿತ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

ಭಾರತೀಯ ಸೇನೆಯು ಬುಧವಾರ ಸಬಲ್ 20 ಲಾಜಿಸ್ಟಿಕ್ಸ್ ಡ್ರೋನ್ ಎಂಬ ಮಾನವ ರಹಿತ ಎಲೆಕ್ಟ್ರಿಕ್ ಹೆಲಿಕಾಪ್ಟರ್ ಅನ್ನು ಎಡ್ಯೂರ್ ಏರ್ನಿಂದ ಸ್ವೀಕರಿಸಿತು, ಇದು ಕ್ಲಿಸ್ಟಕರ ಭೂಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ರಕ್ಷಣಾ ಪಡೆಗಳಿಗೆ ಸಾಮಾನು ಸರಂಜಾಮುಗಳನ್ನು ತಲುಪಿಸಲು ಉಪಯುಕ್ತವಾಗಲಿದೆ..

ಸಬಲ್ 20 ಎಂಬುದು ವೇರಿಯಬಲ್ ಪಿಚ್ ತಂತ್ರಜ್ಞಾನವನ್ನು ಆಧರಿಸಿದ ಮಾನವ ರಹಿತ ಎಲೆಕ್ಟ್ರಿಕ್ ಹೆಲಿಕಾಪ್ಟರ್ ಆಗಿದ್ದು, ವೈಮಾನಿಕವಾಗಿ ಸರಕು ಸಾಗಣೆಗಾಗಿ ವಿನ್ಯಾಸಗೊಳಿಸಲಾಗಿದೆ. ಇದು 20 ಕೆಜಿವರೆಗೆ ವಸ್ತುಗಳನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ಅದರ ಸ್ವಂತ ತೂಕದ 50 ಪ್ರತಿಶತಕ್ಕೆ ಸಮಾನವಾಗಿದೆ.

ಚಿನೂಕ್ ಹೆಲಿಕಾಪ್ಟರ್ ನ ಪರಂಪರೆಯನ್ನು ಆಧರಿಸಿ ನಿರ್ಮಿಸಿರುವ ಈ ಸಬಲ್ 20, ಟಂಡೆಮ್ ರೋಟರ್ ಸಂರಚನೆಯ ದೊಡ್ಡ ರೋಟರ್ ಗಳ ಜೊತೆಗೆ ಅಧಿಕ ಹೊರೆ ಹೊರುವ ಸಾಮರ್ಥ್ಯವನ್ನು ಹೊಂದಿದೆ. ಸಬಲ್ 20 ಹೆಲಿಕಾಪ್ಟರ್ ಅನ್ನು ನಿರ್ಧರಿತ, ಅತಿ ಎತ್ತರದ ಪ್ರದೇಶಗಳು, ಕಡಿದಾದ ಕಣಿವೆ ಪ್ರದೇಶಗಳು ಮತ್ತು ಸಂಚರಿಸಲು ಯೋಗ್ಯವಲ್ಲದ ಪ್ರದೇಶಗಳಲ್ಲಿ ಬಳಸಲು ವಿನ್ಯಾಸಗೊಳಿಸಲಾಗಿದೆ.

ಜೊತೆಗೆ ಈ ಸಬಲ್ 20 ಹೆಲಿಕಾಪ್ಟರ್ ಕಡಿಮೇ ಶಬ್ದವನ್ನು ಮಾಡುವುದರಿಂದ ಸೂಕ್ಷ್ಮ-ರಹಸ್ಯ ಕಾರ್ಯಾಚರಣೆಗಳಲ್ಲಿ ಹೆಚ್ಚು ಉಪಯೋಗವಾಗಲಿದೆ.

ಇದು ಅತ್ಯಾಧುನಿಕ ಸ್ವಯಂಚಾಲಿತ ಹಾರಾಟ ವ್ಯವಸ್ಥೆ ಮತ್ತು ಬಳಕೆದಾರ ಸ್ನೇಹಿ ನಿಯಂತ್ರಣಗಳನ್ನು ಸಹ ಹೊಂದಿದೆ, ಇದು ಕ್ಲಿಷ್ಟಕರವಾದ ಕಾರ್ಯಗಳನ್ನು ಸರಳಗೊಳಿಸುತ್ತದೆ. ಒಂದು ವೇಳೆ ಆಪರೇಟರ್ನ ಮಿತಿ ದಾಟಿದರೂ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸಿ ಮರಳಿ ಬರುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಡ್ಯೂರ್ ಏರ್ ನ ನಿರ್ದೇಶಕ ಮತ್ತು ಸಹ-ಸಂಸ್ಥಾಪಕ ಅಭಿಷೇಕ್, “ಭಾರತೀಯ ಸೇನೆಯು ತನ್ನ ಸರಕು ಸಾಗಾಣೆಯಲ್ಲಿ ಆಧುನೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಗೆ ಕೊಡುಗೆ ನೀಡಲು ನಾವು ಹೆಮ್ಮೆಪಡುತ್ತೇವೆ. ಎಡ್ಯೂರ್ ಏರ್ ನ ಸಬಲ್ 20 ನೊಂದಿಗೆ, ನಮ್ಮ ಸಶಸ್ತ್ರ ಪಡೆಗಳನ್ನು ಸದೃಢಗೊಳಿಸುವ ಮತ್ತು ವೈವಿಧ್ಯಮಯ ಮತ್ತು ಕ್ಲಿಸ್ಟಕರ ಪರಿಸರದಲ್ಲಿ ಅವರ  ಕಾರ್ಯಾಚರಣೆಗಲಿಗೆ ಅಗತ್ಯವಾದ ನವನವೀನ ಪರಿಕರಗಳನ್ನು ಸ್ಥಳೀಯವಾಗಿ ನಮ್ಮ ವದಗಿಸಲು ನಾವು ಸದಾ ಬದ್ಧರಾಗಿದ್ದೇವೆ ಎಂದು ನಾವು ಪುನರುಚ್ಚರಿಸುತ್ತೇವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments