ಗದಗ: ಕಾನೂನು ಬಾಹಿರವಾಗಿ ಹೆಚ್ಚಿನ ಬಡ್ಡಿ ವಿಧಿಸಿ ಮತ್ತು ಹಿಂಸೆ ನೀಡಿ ವಸೂಲಿ ಮಾಡುವವರ ವಿರುದ್ಧ ಗದಗ ಜಿಲ್ಲೆಯ ವಿವಿಧ ಪೊಲೀಸ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ, ಪ್ರಕರಣ ತನಿಖೆಗಳನ್ನು ಕೈಗೊಂಡಿದೆ.
ಈ ಪ್ರಕರಣಗಳಲ್ಲಿ ಇನ್ನೂ ಕೆಲವು ಸಾಕ್ಷಿದಾರರು ಮುಂದೆ ಬಂದು ಘಟನೆ ಕುರಿತು ಮಾಹಿತಿ ನೀಡುವುದು ಅವಶ್ಯಕವಿದ್ದು ಕಾರಣ ವಶಪಡಿಸಿಕೊಂಡ ದಾಖಲೆಗಳೊಂದಿಗೆ ತನಿಖಾಧಿಕಾರಿಗಳು ದಿ: 5-4-2025 ರಂದು ಸಂಭಾಪೂರ ರಸ್ತೆಯ ಪೊಲೀಸ ಭವನದಲ್ಲಿ ಮುಂಜಾನೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಾಜರ ಇರುತ್ತಾರೆ.

ಹೀಗಾಗಿ ಸಾರ್ವಜನಿಕರು ಮುಂದೆ ಬಂದು ಈ ಪ್ರಕರಣಗಳಲ್ಲಿ ಹೆಚ್ಚಿನ ಮಾಹಿತಿ ನೀಡಬೇಕೆಂದು ಗದಗ ಜಿಲ್ಲೆ ಪೋಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.