ಗದಗ: 2025-26 ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಕೇಂದ್ರ ಪುರಸ್ಕೃತ ರಾಷ್ಟ್ರೀಕೃತ ತೋಟಗಾರಿಕೆ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಪಡೆಯಲು ಅರ್ಜಿ ಕರೆದಿದ್ದಾರೆ.
ದ್ರಾಕ್ಷೀ, ಮಾವು , ಅಂಜೂರ , ಬಾಳೆ, ನಿಂಬೆ , ಪೇರಲ, ದಾಳಿಂಬೆ ಡ್ರ್ಯಾಗನ್ ಹಣ್ಣು , ಪಪ್ಪಾಯ, ಹುಣಸೆ ಹಣ್ಣುಗಳ ಪ್ರದೇಶ ವಿಸ್ತರಣೆ, ಹೈಬ್ರೀಡ್ ತರಕಾರಿ, ಹೂವು ಪ್ರದೇಶ ವಿಸ್ತರಣೆ, ಔಷಧೀಯ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದೇಶ ವಿಸ್ತರಣೆ , ಅನುತ್ಪಾದಕ ತೋಟಗಳ ಆಕಾರ ನಿರ್ವಹಣೆ ಮತ್ತು ಪುನಶ್ಚೇತನ ಕಾರ್ಯಕ್ರಮ , ತೋಟಗಾರಿಕೆಯಲ್ಲಿ ಯಾಂತ್ರೀಕರಣ, ವೈಯಕ್ತಿಕ ನೀರು ಸಂಗ್ರಹಣಾ ಘಟಕ, ಸಂರಕ್ಷಿತ ಬೇಸಾಯ ಕಾರ್ಯಕ್ರಮದಡಿ ಹಸಿರು ಮನೆ ಹಾಗೂ ನೆರಳು ಪರದೆ ಘಟಕಗಳ ನಿರ್ಮಾಣ , ಫಾರ್ಮಗೇಟ್ ಪ್ಯಾಕಹೌಸ್ ಘಟಕ ಹಾಗೂ ಈರುಳ್ಳಿ ಶೇಖರಣಾ ಘಟಕಗಳ ನಿರ್ಮಾಣಕ್ಕೆ ಸಹಾಯಧನದ ಸೌಲಭ್ಯವಿದ್ದು ಆಸಕ್ತ ರೈತರು ಸಂಬಂಧಿಸಿದ ತಾಲ್ಲೂಕು ತೋಟಗಾರಿಕೆ ಕಛೇರಿಗಳಿಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಲು ಕೋರಿದೆ.
ತೋಟಗಾರಿಕೆ ಉಪ ನಿರ್ದೇಶಕರ ಜಿಲ್ಲಾ ಪಂಚಾಯತ್ ಗದಗ ಇವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ