ಶಿರಹಟ್ಟಿ: ತಾಲ್ಲೂಕಿನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಸತಿ ನಿಲಯಗಳಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ರಸ್ತೆ, ಚರಂಡಿ ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂಬಂಧ ತಾಲೂಕು ಮಟ್ಟದ ಕರವೇ ಘಟಕದ ನೇತೃತ್ವದಲ್ಲಿ ಮಾನ್ಯ ತಹಶೀಲ್ದಾರರ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರವೇ ರಹಟ್ಟಿ ತಾಲೂಕು ಅಧ್ಯಕ್ಷರಾದ ಶ್ರೀ ಶಿವು ಮಠದ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಡೆಣವರ, ಕಾರ್ಯಾಧ್ಯಕ್ಷ ನೂರ ಅಹ್ಮದ್ ಆದರಹಳ್ಳಿ, ಉಪಾಧ್ಯಕ್ಷ ಗಾಳೆಪ್ಪ ಮರಚಣನವರ, ತಾಲೂಕು ಸಂಚಾಲಕ ಮಂಜುನಾಥ ಗುಡಿಮನಿ, ಶಿರಹಟ್ಟಿ ನಗರ ಘಟಕದ ಅಧ್ಯಕ್ಷ ಮಾಬುಸಾಬ ಡಾಲಾಯತ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ನಾಗರಾಜ ಎನ್.ಎಚ್. ಸೇರಿದಂತೆ ಹಲವಾರು ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ಪದಾಧಿಕಾರಿಗಳಾದ ಪ್ರವೀಣ್ ಪಕ್ಕೀರೇಶ ಇಂಗಳಿಗಿ, ರಾಹುಲ್ ಮಡಿವಾಳರ್, ನಾಗಯ್ಯ ಕಾಶಿಮಠ, ಮಂಜುನಾಥ ಓಲೆಕಾರ್, ನಿಹಾಲ್ ಸೂರಟೂರ, ವಿನಾಯಕ ಪಾಟೀಲ್, ಹನುಮಂತ ಕುರಿ, ವಿನಾಯಕ ಪತ್ತಾರ, ಬಸವರಾಜ ಸೇರಿದಂತೆ ಅನೇಕರು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಸ್ಪಷ್ಟವಾಗಿ ಮಾಹಿತಿಯನ್ನು ನೀಡಿದರು.
ಈ ಕಾರ್ಯಚಟುವಟಿಕೆಯ ಮೂಲಕ ಅಧಿಕಾರಿಗಳ ಗಮನ ಸೆಳೆಯಲಾಗಿದ್ದು, ವೇಗದ ನಡವಳಿಕೆಗೆ ನಿರೀಕ್ಷೆಯಿದೆ.