Home » News » ಕೆಲಸಕ್ಕೆ ಸೇರಿಸಿಕೊಳ್ಳಲು ಪೌರ ಕಾರ್ಮಿಕರಿಂದ ಪುರಸಭೆ ಮುಖ್ಯಾದಿಕಾರಿಗಳಿಗೆ ಮನವಿ …! ಧರಣಿ ಸತ್ಯಾಗ್ರಹದ ಎಚ್ಚರಿಕೆ…!

ಕೆಲಸಕ್ಕೆ ಸೇರಿಸಿಕೊಳ್ಳಲು ಪೌರ ಕಾರ್ಮಿಕರಿಂದ ಪುರಸಭೆ ಮುಖ್ಯಾದಿಕಾರಿಗಳಿಗೆ ಮನವಿ …! ಧರಣಿ ಸತ್ಯಾಗ್ರಹದ ಎಚ್ಚರಿಕೆ…!

by CityXPress
0 comments

ಲಕ್ಷ್ಮೇಶ್ವರ ಃ ಪಟ್ಟಣದ ಪುರಸಭೆಯಲ್ಲಿ ಜೂನ್ ಜುಲೈ ದಿಂದ ಪೌರಕಾರ್ಮಿಕರಾಗಿ 10 ಜನ ಸೇವೆ ಸಲ್ಲಿಸಿದ್ದು ಅದರಲ್ಲಿ ನಾಲ್ಕು ಕಾರ್ಮಿಕರನ್ನು ಯಾವುದೇ ಸೂಚನೆ ನೀಡದೆ ಪೌರಕಾರ್ಮಿಕರ ಕೆಲಸದಿಂದ ತೆಗೆದುಹಾಕಿದ್ದಾರೆ.

ಯಾವ ಕಾರಣಕ್ಕಾಗಿ ತೆಗೆದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸದೆ ನಮಗೆ ಅನ್ಯಾಯ ಮಾಡಿದ್ದಾರೆ ಮತ್ತು ಇದುವರೆಗೂ ಸೇವೆ ಸಲ್ಲಿಸಿ ದ್ದರಲ್ಲಿ ಇನ್ನು ಎರಡು ತಿಂಗಳ ವೇತನ ಬಾಕಿ ಇದ್ದು ರಾಜಕೀಯದಿಂದ ನಮ್ಮನ್ನು ತೆಗೆದಿರುವ ಭಾವನೆ ಕಾಡುತ್ತಿದೆ.

ವರದಿ : ಪರಮೇಶ ಎಸ್ ಲಮಾಣಿ.

ಆದ್ದರಿಂದ, ಆಡಳಿತಾಧಿಕಾರಿಗಳು ಮತ್ತು ಮುಖ್ಯ ಅಧಿಕಾರಿಗಳು ನಮಗೆ ನ್ಯಾಯ ಒದಗಿಸದಿದ್ದರೆ ಪುರಸಭೆಯ ಮುಂದೆ ಧರಣಿ ಸತ್ಯಾಗ್ರ ಹೋಗುವದಾಗಿ ಹೇಳಿದ್ದಾರೆ.

banner

ಮನವಿ ಪತ್ರದಲ್ಲಿ ನೀಲಪ್ಪ ಶಿರಹಟ್ಟಿ ಪರಮೇಶ ಗಡದವರ ಅರುಣ ನಂದಣ್ಣನವರ ಮತ್ತು ರವಿ ಗಾಜಿಯವರನ್ನು ಕೆಲಸದಿಂದ ತೆಗೆದುಹಾಕಿದ್ದು ಕೂಡಲೇ ಈ ನಾಲ್ವರನ್ನು ಪುನರ್ ನೇಮಕ ಮಾಡಿಕೊಳ್ಳಬೇಕೆಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.

ಸಂದರ್ಭದಲ್ಲಿ ಪೌರಕಾರ್ಮಿಕ ಮುಖಂಡ ಬಸವೇಣೆಪ್ಪ ನಂದೆಣ್ಣವರ,ನೀಲಪ್ಪ ಶಿರಹಟ್ಟಿ, ಪರಮೇಶ ಗಡದವರ, ಅರುಣ ನಂದೆಣ್ಣವರ, ರವಿ ಗಾಂಜಿ, ಕಲ್ಯಾಣಕುಮಾರ ಹಾದಿಮನಿ, ಅಜಿತ ನಂದೆಣ್ಣವರ, ರಾಮಪ್ಪ ಅಯ್ಯಣ್ಣವರ, ಪ್ರಕಾಶ ಗಡದವರ, ಹೊನ್ನಪ್ಪ ಮೆಗಲಮನಿ, ಮಂಜುನಾಥ ದೊಡ್ಡಮನಿ, ಯಲ್ಲಕ್ಕ ಗಡದವರ, ದುರ್ಗವ್ವ ಶಿರಹಟ್ಟಿ, ಕಮಲವ್ವ ನಂದೆಣ್ಣವರ, ಮಲ್ಲವ್ವ ಗಡದವರ, ಹನುಮವ್ವ ಗಡದವರ, ದ್ಯಾಮಕ್ಕ ನಂದೆಣ್ಣವರ, ಕರಿಯವ್ವ ದೊಡ್ಡಮನಿ ಇದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb