ಗದಗ(ಲಕ್ಷ್ಮೇಶ್ವರ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತಾಲೂಕು ಶಾಖೆ ಲಕ್ಷ್ಮೇಶ್ವರ ವತಿಯಿಂದ ಶಾಸಕ ಡಾ. ಚಂದ್ರು ಲಮಾಣಿ ರವರಿಗೆ ತಾಲೂಕಿನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣ ಮಾಡಲಿಕ್ಕೆ ಶಾಸಕರ ಅನುದಾನದಲ್ಲಿ ಅನುದಾನವನ್ನು ನೀಡುವಂತೆ ಮನವಿ ಸಲ್ಲಿಸಲಾಯಿತು.
ವರದಿ: ಪರಮೆಶ ಲಮಾಣಿ
ಉದ್ದೇಶಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಜಿ.ಡಿ ಹವಳದ ಸರ್ಕಾರಿ ನೌಕರರು ಯಾವುದೇ ಕಾರ್ಯಕ್ರಮ ಹಮ್ಮಿಕೊಂಡರು ಭವನ ಇಲ್ಲದೇ ಪರದಾಡುವ ಪರಿಸ್ಥಿತಿ ಇದೆ. ನೌಕರರು ಭವನ ನಿರ್ಮಿಸುವುದಕ್ಕೆ ಕಷ್ಟ ಪಡುತ್ತಿದ್ದಾರೆ ಎಂದು ಹೇಳಿದರಲ್ಲದೇ, ಶಾಸಕರು ತಮ್ಮ ಅನುದಾನಲ್ಲಿ ನೌಕರರ ಭವನ ನಿರ್ಮಿಸಲು ಅನುದಾನ ನೀಡಲು ಮನವಿ ಮಾಡಿದರು.
ಸಂದರ್ಭದಲ್ಲಿ ನೌಕರರ ಸಂಘದ ಲಕ್ಷ್ಮೇಶ್ವರ ತಾಲೂಕ ಅಧ್ಯಕ್ಷ ಜಿ ಡಿ ಹವಳದ, ನಿಕಟ ಪೂರ್ವ ಅಧ್ಯಕ್ಷ ಡಿ ಎಚ್ ಪಾಟೀಲ್, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ಎಮ್ ಎ ನದಾಫ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯದರ್ಶಿ ಚಂದ್ರು ನೇಕಾರ, ಖಜಾಂಚಿ ಬಸವರಾಜ್ ಎತ್ತಿನಹಳ್ಳಿ, ಉಪಾಧ್ಯಕ್ಷ ಡಿ ಡಿ ಲಮಾಣಿ, ಖಜಾಂಚಿ ಎಂ ಡಿ ವಾರದ, ನೌಕರರ ಸಂಘದ ಜಿಲ್ಲಾ ನಾಮ ನಿರ್ದೇಶಿತ ಸದಸ್ಯ ಎಂ ಎಸ್ ಹಿರೇಮಠ, ನಿರ್ದೇಶಕ ಎ ಎಂ ಅಕ್ಕಿ, ಬಿ ಎಂ ಯರಗುಪ್ಪಿ, ಮಂಜುನಾಥ್ ಕೊಕ್ಕರಗುಂದಿ, ಶ್ರೀಕಾಂತ್ ಬಾಲೆಸೂರ, ಪ್ರಶಾಂತ ಸನದಿ, ಶಿವಾನಂದ ಅಸುಂಡಿ, ಸಂತೋಷ್ ರಾಠೋಡ್,ಎಂ ಎನ್ ಭರಮ್ ಗೌಡರ್, ವಿವಿಧ ಇಲಾಖೆಗಳ ಪ್ರತಿನಿಧಿಗಳು ಹಾಗೂ ನೌಕರರು ಹಾಜರಿದ್ದರು.
