ಗದಗ: ಸನ್ಮಾರ್ಗ ಪದವಿಪೂರ್ವ ಕಾಲೇಜು ತನ್ನ ವಿದ್ಯಾರ್ಥಿನಿ ಅಪರೂಪದ ಸಾಧನೆಯ ಮೂಲಕ ಕೀರ್ತಿಗೆ ಪಾತ್ರವಾಗಿದೆ. ೨೦೧೯–೨೦ನೇ ಸಾಲಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡಿದ್ದ ಕುಮಾರಿ ಅಪೇಕ್ಷಾ ಎಸ್. ಪಾಟೀಲ ಅವರು ತಮ್ಮ ಪದವಿಪೂರ್ವ ಶಿಕ್ಷಣವನ್ನು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿ, ನಂತರ ಭಾರತದ ಪ್ರಸಿದ್ಧ ತಾಂತ್ರಿಕ ಸಂಸ್ಥೆಗಳಲ್ಲಿ ಒಂದಾದ IIT ಧನ್ಬಾದ್ನಲ್ಲಿ MSc in Physics ಪದವಿ ಪಡೆಯುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಅವರು IIT ಖಾನ್ಪೂರಿನಲ್ಲಿ ಪಿಎಚ್ಡಿ ಶಿಕ್ಷಣವನ್ನು ಪ್ರಾರಂಭಿಸಿ, ಪ್ರಸ್ತುತ ಅದನ್ನ ಮುಂದುವರೆಸುತ್ತಿದ್ದಾರೆ.
ಅವರಿಗೆ ಶಿಷ್ಯವೇತನ ಸೇರಿದಂತೆ ಎಲ್ಲಾ ಬಡ್ತಿ ಹಾಗೂ ಸೌಲಭ್ಯಗಳನ್ನು ಸರ್ಕಾರದ ವತಿಯಿಂದ ಒದಗಿಸಲಾಗುತ್ತಿದೆ. ಅವರ ಈ ಸಾಧನೆಯು ಸನ್ಮಾರ್ಗ ಕಾಲೇಜಿನ ಮಾತ್ರವಲ್ಲದೆ, ಗದಗ ಜಿಲ್ಲೆಯಲ್ಲಿನ ಶಿಕ್ಷಣ ಕ್ಷೇತ್ರಕ್ಕೂ ಹೆಮ್ಮೆ ಮೂಡಿಸಲಿದೆ.
ವಿದ್ಯಾರ್ಥಿನಿಯ ಈ ವಿಶಿಷ್ಟ ಸಾಧನೆಗೆ ಸನ್ಮಾರ್ಗ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ರಾಜೇಶ್ ಕುಲಕರ್ಣಿ, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ, ನಿರ್ದೇಶಕರುಗಳಾದ ಪ್ರೊ. ರಾಹುಲ್ ಒಡೆಯರ್, ಪ್ರೊ. ರೋಹಿತ್ ಒಡೆಯರ್, ಪ್ರೊ. ಪುನೀತ್ ದೇಶಪಾಂಡೆ, ಪ್ರೊ. ಸೈಯ್ಯದ್ ಮತೀನ್ ಮುಲ್ಲಾ, ಆಡಳಿತಾಧಿಕಾರಿ ಶ್ರೀ ಎಮ್.ಸಿ. ಹಿರೇಮಠ ಹಾಗೂ ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ಸಿಬ್ಬಂದಿಗಳು ಅವರುಮೀದ ಹೆಮ್ಮೆ ವ್ಯಕ್ತಪಡಿಸಿದ್ದು, ಅವರ ಭವಿಷ್ಯ ಉತ್ತಮವಾಗಿ ಬೆಳೆಯಲಿ ಎಂಬ ಹಾರೈಕೆಯನ್ನು ವ್ಯಕ್ತಪಡಿಸಿದ್ದಾರೆ.
ಅಪೇಕ್ಷಾ ಅವರಂತಹ ವಿದ್ಯಾರ್ಥಿಗಳ ಸಾಧನೆಗಳು ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯ ದೀಪವಾಗಲೆಂದು ಸಂಸ್ಥೆಯ ವತಿಯಿಂದ ಶುಭಾಶಯ ವ್ಯಕ್ತಪಡಿಸಲಾಗಿದೆ.