ದೆಹಲಿ, ಮೇ 07 – ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಕಳೆದ ತಿಂಗಳು ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತವು ತೀವ್ರ ಪ್ರತಿಕಾರದ ಹೆಜ್ಜೆ ಇಟ್ಟಿದ್ದು, ಮಂಗಳವಾರ ತಡರಾತ್ರಿ ಭಾರತೀಯ ವಾಯುಪಡೆಯು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ (ಪಿಒಕೆ) ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಯಶಸ್ವಿ ವೈಮಾನಿಕ ದಾಳಿ ನಡೆಸಿದೆ. ಈ ಪ್ರತಿಕಾರಾತ್ಮಕ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ಎಂಬ ಹೆಸರನ್ನು ನೀಡಲಾಗಿದೆ.
ಹಿಂಸಾಚಾರದ ಬೆನ್ನಿನಲ್ಲೇ ಧರ್ಮಭಾವನೆಗೆ ಹೊರೆಬಿದ್ದ ದಾಳಿ..!
ಪಹಲ್ಗಾಮ್ ದಾಳಿಯಲ್ಲಿ 26 ಹಿಂದೂ ಪ್ರವಾಸಿಗರು ಭಯೋತ್ಪಾದಕರ ಗುಂಡಿಗೆ ಬಲಿಯಾದರು. ಧರ್ಮ ಏನು ಎಂದು ಪ್ರಶ್ನಿಸಿ ಗುಂಡು ಹಾರಿಸಿದ ಈ ದಾಳಿಯಲ್ಲಿ ಮಹಿಳೆಯರ ಸಿಂಧೂರವನ್ನೂ ಅಳಿಸಿಹಾಕಿದರು. ಈ ಅವಮಾನ ಭರಿಸಲು ಸಾಧ್ಯವಿಲ್ಲದ ಭಾರತದ ಸೇನೆ, ದುಷ್ಟ ಶಕ್ತಿಗಳ ನೆಲೆಮಾವುಗಳತ್ತ ತೀಕ್ಷ್ಣವಾದ ಪ್ರತಿಕಾರ ಕೈಗೊಂಡಿದೆ. ಈ ಪೈಕಿ ಪಿಒಕೆ ರಾಜಧಾನಿ ಮುಜಫರಾಬಾದ್‌ನಲ್ಲಿನ ಉಗ್ರ ನೆಲೆಗೂ ತೀವ್ರ ಸ್ಫೋಟ ಸಂಭವಿಸಿದ್ದು, ವಿದ್ಯುತ್ ವ್ಯತ್ಯಯ ಹಾಗೂ ಜನಜೀವನ ಅಸ್ತವ್ಯಸ್ತಗೊಂಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.
ರಾಜಕೀಯ ನಾಯಕರಿಂದ ಶ್ಲಾಘನೆ – ದೇಶಭಕ್ತಿಯಿಂದ ತೇಜಸ್ಸುಗೊಂಡ ಪ್ರತಿಕ್ರಿಯೆ
ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಕಾರ್ಯಾಚರಣೆಯ ಬಗ್ಗೆ ಪ್ರತಿಕ್ರಿಯಿಸಿ “ಭಾರತ್ ಮಾತಾ ಕಿ ಜೈ” ಎಂಬ ಘೋಷವಾಕ್ಯವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಭಾರತೀಯ ಸೇನೆಯನ್ನು ಶ್ಲಾಘಿಸಿ “ಜೈ ಹಿಂದ್! ಜೈ ಹಿಂದ್ ಸೇನೆ!” ಎಂದು ಎಕ್ಸ್‌ನಲ್ಲಿ (ಹಿಂದಿನ ಟ್ವಿಟರ್) ಬರೆದಿದ್ದಾರೆ. ದೇಶದಾದ್ಯಾಂತ ಜನತೆಗೆ ಸೇನೆಯ ಈ ಕ್ರಮದಿಂದ ರಕ್ಷಣಾ ಭಾವನೆಗೆ ನೂತನ ಬಲ ಸಿಕ್ಕಂತಾಗಿದೆ.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಆಪರೇಷನ್ ಸಿಂಧೂರ್ ಎಂಬ ಹೆಸರಿನ ಹಿಂದಿರುವ ತಾತ್ಪರ್ಯ
‘ಸಿಂಧೂರ’ – ಇದು ಕೇವಲ ಹಾಳೆಯ ಬಣ್ಣವಲ್ಲ, ಭಾರತೀಯ ಮಹಿಳೆಯ ಸೌಭಾಗ್ಯದ ಸಂಕೇತ. ಹೆಣ್ಣುಮಕ್ಕಳ ಹೆಸರಿನಲ್ಲಿ ನಡೆದ ಪಹಲ್ಗಾಮ್ ದಾಳಿಗೆ ತಕ್ಕ ಪ್ರತಿಕಾರವಾಗಿ ಕಾರ್ಯಾಚರಣೆಗೆ ‘ಆಪರೇಷನ್ ಸಿಂಧೂರ್’ಎಂಬ ಹೆಸರಿಡಲಾಗಿದೆ. ಇದು ಅವರ ಶಕ್ತಿಗೆ, ಆತ್ಮಗೌರವಕ್ಕೆ ಗೌರವ ಸಲ್ಲಿಸುವ ನಿಜವಾದ ಉತ್ತರವಾಗಿದೆ. ಸಿಂಧೂರ ಕಳೆದುಕೊಂಡ ನಾರಿ ಕಣ್ಣೀರಿಗೆ ಸೈನಿಕರ ಗುಂಡು ಉತ್ತರವಾಗಿದೆ.
ಸಂಸ್ಕೃತಿಯ ಕಣ್ಣುಗಳಿಂದ ಸಿಂಧೂರದ ಗಂಭೀರತೆಯ ಚರ್ಚೆ
ಭಾರತದಲ್ಲಿ ಹೆಣ್ಣನ್ನು ದೇವಿ ರೂಪದಲ್ಲಿ ಪೂಜೆ ಮಾಡಲಾಗುತ್ತದೆ. ಅಂತವರ ಮುತ್ತೈದೆ ಭಾಗ್ಯವನ್ನು ಕಿತ್ತುಕೊಂಡಿದ್ದು ಸಾಮಾನ್ಯ ವಿಷಯವಲ್ಲ. ನಮ್ಮ ಇತಿಹಾಸ ಪುಟ ತಿರುವಿ ನೋಡಿದರೂ ಕೂಡ ಹೆಣ್ಣಿನ ಕಣ್ಣೀರಿನ ಮುಂದೆ ಯಾರೂ ಗೆದ್ದಿಲ್ಲ. ಹೆಣ್ಣಿನ ಶಕ್ತಿಯೇ ಅಂತದ್ದು. ಅದರಲ್ಲಿ ಅವರ ಸೌಭಾಗ್ಯವನ್ನು ಅವರ ಮುಂದೆಯೇ ಕಿತ್ತುಕೊಂಡವರನ್ನು ಬಿಟ್ಟಿತೇ?
ಭಾರತೀಯ ನಾರಿಗೆ ಸಿಂಧೂರ ಅಥವಾ ಕುಂಕುಮ ಕೇವಲ ನೆತ್ತಿಯ ಮೇಲೆ ಅಥವಾ ಹಣೆ ಮೇಲಿಡುವ ಬಣ್ಣವಲ್ಲ. ಅದು ಆಕೆಯ ಶಕ್ತಿ. ಮದುವೆಯ ಸಮಯದಲ್ಲಿ ಇಟ್ಟ ಸಿಂಧೂರ ಕೊನೆಯವರೆಗೂ ಅವಳೊಂದಿಗೆ ಇರಬೇಕು ಎಂಬುದು ಪದ್ಧತಿ. ಇದರಿಂದ ಮಹಿಳೆಗೆ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳು ಕೂಡ ಲಭಿಸುತ್ತದೆ. ಆದರೆ ಇದೆಲ್ಲದರ ಹೊರತಾಗಿ ಸಿಂಧೂರ ಸ್ತ್ರೀ ಶಕ್ತಿಯ ಸಂಕೇತ. ಬೆಂಕಿ, ರಕ್ತ ಮತ್ತು ಶಕ್ತಿಯ ಬಣ್ಣ, ಆಕೆಯನ್ನು ಶಕ್ತಿ ಸ್ವರೂಪಿಯಾಗಿ ಗೌರವಿಸಬೇಕು ಎಂಬುದರ ಸಂಕೇತ. ಅವಳನ್ನು ಕೆಣಕಿದರೆ ತನ್ನ ತಾಯ್ನಾಡನ್ನು ರಕ್ಷಿಸಲು ಬೆಂಕಿಯ ಕಿಡಿಯಾಗಬಹುದು ಅಥವಾ ಮೃದುವಾದ ಹೂವು ಆಗಬಹುದು.

ಸಿಂಧೂರ ಮತ್ತು ಪುರಾಣ
ಇನ್ನು, ನಮ್ಮ ಹಿಂದೂ ಪುರಾಣಗಳಲ್ಲಿ, ಸಿಂಧೂರವು ಅಗಾಧವಾದ ಸಂಕೇತಗಳನ್ನು ಹೊಂದಿದೆ. ದಂತಕಥೆಗಳ ಪ್ರಕಾರ, ಶಿವನ ಪತ್ನಿ ಪಾರ್ವತಿ, ಕೃಷ್ಣನ ಪತ್ನಿ ರುಕ್ಮಿಣಿ, ರಾಮನ ಪತ್ನಿ ಸೀತೆ ಹೀಗೆ ಮುತ್ತೈದೆಯರು ತಮ್ಮ ಹಣೆಯ ಮೇಲೆ ಯಾವಾಗಲೂ ಸಿಂಧೂರವಿಡುತ್ತಿದ್ದರು ಎಂಬ ನಂಬಿಕೆ ಇದೆ. ಈ ಕ್ರಮ ಗಂಡನ ಆಯುಷ್ಯ, ಆರೋಗ್ಯವನ್ನು ಹೆಚ್ಚಿಸುವುದರ ಸಂಕೇತವಾಗಿದೆ. ಇದರಿಂದ ದೀರ್ಘ ಮತ್ತು ಆನಂದದಾಯಕ ವೈವಾಹಿಕ ಜೀವನ ಸಿಗುತ್ತದೆ. ಜೊತೆಗೆ ದಂಪತಿಗಳಿಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಮತ್ತು ದುಷ್ಟ ಶಕ್ತಿಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂಬುದರ ಪ್ರತೀಕವಾಗಿದೆ.
ಸೀತೆಯನ್ನು ಅಪಹರಿಸಿದ ರಾವಣನಿಗೆ, ದ್ರೌಪದಿಯ ಸೀರೆ ಎಳೆದ ದುಶ್ಯಾಸನಿಗೆ ಕ್ಷಣಿಕ ಜಯ ಸಿಕ್ಕರೂ ಸಹ ಊಹೆಗೂ ನಿಲುಕದ ಸೋಲು ಪ್ರಾಪ್ತವಾಗಿತ್ತು. ಇದೇ ರೀತಿ ಕಲಿಯುಗದಲ್ಲಿಯೂ ಹೆಣ್ಣಿಗೆ ಅನ್ಯಾಯವಾಗಿದೆ. ಹಿಂದೆ ಹೆಣ್ಣಿಗೆ ಅವಮಾನ ಮಾಡಿಯೇ ಉಳಿದಿಲ್ಲ ಎಂದ ಮೇಲೆ ಹೆಣ್ಣಿನ ಸೌಭಾಗ್ಯವನ್ನೇ ಕಿತ್ತುಕೊಂದವರು ಉಳಿದಾರೆಯೇ?…
ಪಾಕಿಸ್ತಾನ ವ್ಯಥೆ – ಭಾರತೀಯ ಸೇನೆಯ ಸ್ಪಷ್ಟ ನಿಲುವು
ಪಾಕಿಸ್ತಾನ ಈ ದಾಳಿಯಲ್ಲಿ ಮೂವರು ಸಾವನ್ನಪ್ಪಿದರೆಂದು ಒಪ್ಪಿಕೊಂಡಿದ್ದು, 12 ಜನರು ಗಾಯಗೊಂಡಿರುವುದಾಗಿ ತಿಳಿಸಿದೆ. ಆದರೆ ಭಾರತವು ಈ ಕಾರ್ಯಾಚರಣೆ ಶುದ್ಧವಾಗಿ ಉಗ್ರರ ವಿರೋಧವಾದದ್ದೆಂಬುದನ್ನು ಪುನರಾವರ್ತಿಸಿದೆ. “ಇದು ಯಾವುದೇ ರಾಷ್ಟ್ರದ ವಿರುದ್ಧದ ದಾಳಿ ಅಲ್ಲ. ಉಗ್ರತೆಯ ವಿರುದ್ಧದ ನಿರ್ಧಾರಶೀಲ ಕ್ರಮ” ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.
ನ್ಯಾಯ ಸಿಕ್ಕಿದೆ – ಸೇನೆಯ ಸ್ಪಷ್ಟ ಹೇಳಿಕೆ
ಕಾರ್ಯಾಚರಣೆ ಬಳಿಕ ಭಾರತೀಯ ಸೇನೆಯ ಅಧಿಕೃತ ಎಕ್ಸ್ ಖಾತೆಯ ಮೂಲಕ “ನ್ಯಾಯ ಸಿಕ್ಕಿದೆ” ಎಂಬ ವಾಕ್ಯವನ್ನು ಹಂಚಿಕೊಳ್ಳಲಾಗಿದೆ. ಇದು ಕೇವಲ ಪ್ರತಿಕಾರವಲ್ಲ; ದೇಶದ ಬದ್ನಾಮ ಮಾಡಿರುವ ಅವಮಾನವನ್ನು ತಿದ್ದುಹಾಕುವ ಸಂಗ್ರಾಮವಾಗಿದೆ.
