Headlines

ಛಲ, ಹಠ ಮತ್ತು ಸಾಧನೆಗೆ ಮತ್ತೊಂದು ಹೆಸರು – ಡಾ. ಬಿ.ಆರ್. ಅಂಬೇಡ್ಕರ್: ಡಾ. ಚಂದ್ರು ಲಮಾಣಿ

ಮುಂಡರಗಿ: ಪಟ್ಟಣದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮುಂಡರಗಿ ಮಂಡಲದ ವತಿಯಿಂದ ಹಿರಿಯ ಸಮಾಜ ಸುಧಾರಕ, ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರ ಜಯಂತಿಯನ್ನು ಭವ್ಯವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಂಡರಗಿ ಕ್ಷೇತ್ರದ ಮಾನ್ಯ ಶಾಸಕ ಡಾ. ಚಂದ್ರು.ಕೆ.ಲಮಾಣಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು ಹಾಗೂ ಉದ್ದೇಶಪೂರ್ಣವಾದ ಭಾಷಣ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಚಂದ್ರು ಲಮಾಣಿ ಅವರು, “ಡಾ. ಅಂಬೇಡ್ಕರ್ ಅವರು ಈ ಜಗತ್ತಿನ ಅತಿದೊಡ್ಡ ಸಂವಿಧಾನವನ್ನು ರಚಿಸಿದವರು. ಅವರು ಪಡೆದ ನೋವುಗಳು, ಅನುಭವಿಸಿದ ತೊಂದರೆಗಳು ಅವರನ್ನು ಕುಗ್ಗಿಸಲಿಲ್ಲ, ಬದಲಾಗಿ ಜ್ಞಾನವನ್ನು ಹಾಸುಹೊಕ್ಕಾಗಿ ಪಡೆದು ದೇಶದ ಪ್ರತಿಯೊಬ್ಬರಿಗೂ ಹಕ್ಕುಗಳ ಮಹತ್ವವನ್ನು ಅರ್ಥಮಾಡಿಕೊಟ್ಟರು. ಇಂದು ನಾವು ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಏನಾದರೂ ಸಾಧನೆ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಭಾರತ ಸಂವಿಧಾನ ಮತ್ತು ಅಂಬೇಡ್ಕರ್ ಅವರ ತತ್ವಜ್ಞಾನ,” ಎಂದರು.

ಕಾರ್ಯಕ್ರಮದಲ್ಲಿ ಮುಂಡರಗಿ ಬಿಜೆಪಿ ಮಂಡಲದ ಅಧ್ಯಕ್ಷರಾದ ಶ್ರೀ ಹೇಮಗಿರೀಶ ಹಾವಿನಾಳ ಅವರು ಅಧ್ಯಕ್ಷತೆ ವಹಿಸಿದ್ದರು. ಡಾ. ಕುಮಾರಸ್ವಾಮಿ ಹಿರೇಮಠ, ಕೊಟ್ರೇಶಪ್ಪ ಅಂಗಡಿ, ಶಿವನಗೌಡ ಗೌಡರ, ಶ್ರೀನಿವಾಸ ಅಬ್ಬಿಗೇರಿ, ಶಂಕ್ರಣ್ಣ ಉಳ್ಳಾಗಡ್ಡಿ, ಎಲ್ಲಪ್ಪ ಗಣಾಚಾರಿ, ದೇವು ಹಡಪದ, ಯುವ ಮೋರ್ಚಾ ಅಧ್ಯಕ್ಷ ಶಿವಕುಮಾರ ಕುರಿ, ರಮೇಶ ಹುಳಕನ್ನವರ್, ಟಿ.ಬಿ. ದಂಡಿನ, ಮೈಲಾರಪ್ಪ ಕಲಕೇರಿ, ಬಸವರಾಜ ಚಿಗಣ್ಣವರ್, ದೇವಪ್ಪ ಇಟಗಿ, ಮಲ್ಲಿಕಾರ್ಜುನ ಹಣಜಿ, ಮಹೇಶ್ ದೇಸಾಯಿ, ಪರಶುರಾಮ ಕರಡಿಕೊಳ್ಳ, ಪರುಶುರಾಮ ಸುಣಗಾರ, ಪವನ ಲೆಂಡ್ವೆ, ವಿನಾಯಕ ಕರಿಬಿಷ್ಠಿ, ಮಾರುತಿ ಭಜಂತ್ರಿ, ವೆಂಕಪ್ಪ ಪುರದ, ಲೋಹಿತ ಪುರದ, ನಾಗರಾಜ್ ಮುರಡಿ, ಆನಂದ ಗುರನಳ್ಳಿ, ವೀರೇಂದ್ರ ಅಂಗಡಿ, ಮಹೇಶ್ ಪವಾರ, ಮಾರುತಿ ನಗರಹಳ್ಳಿ, ಸೋಮರೆಡ್ಡಿ ಮುದ್ದಾಬಳ್ಳಿ, ಅಶೋಕ ಚೂರಿ, ಮಂಜುನಾಥ ಮುಧೋಳ, ಜೋತಿ ಹಾನಗಲ್, ಪವಿತ್ರ ಕಲ್ಲುಕುಟುಗರ್, ಪಿ.ಎಸ್. ಉಕ್ಕಲಿ, ವೀಣಾ ಲಮಾಣಿ, ದಾವಲ್ ನಮಾಜಿ, ಪ್ರಕಾಶ್ ಕುರಿ, ಮಹೇಶ್ ಕಿಳ್ಳಿಕ್ಯಾತರ, ಹಾಲೇಶ್ ಈಟಿ, ಅರುಣ ಬೆಲ್ಲದ, ಪ್ರಕಾಶ್ ಕೊಡ್ಲಿ, ಕೋಟೇಶ ಕಲಕೇರಿ, ರೇವಣಸಿದ್ದಪ್ಪ ಕರಿಗಾರ, ಆನಂದ ಗಳಗನಾಥ, ರವಿ ಜಂಗಣವಾರಿ, ರವಿ ಲಮಾಣಿ ಸೇರಿದಂತೆ ಹಲವು ಗಣ್ಯರು, ಕಾರ್ಯಕರ್ತರು, ಅಭಿಮಾನಿಗಳು, ಮಹಿಳಾ ಮೋರ್ಚಾ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನ ಚರಿತ್ರೆ, ತತ್ವಗಳು ಹಾಗೂ ಸಂವಿಧಾನದ ಶ್ರೇಷ್ಠತೆ ಕುರಿತು ವಿದ್ಯಾರ್ಥಿಗಳಿಂದ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗೆದ್ದ ಸ್ಪರ್ಧಾರ್ಥಿಗಳಿಗೆ ಡಾ. ಲಮಾಣಿ ಅವರು ಪ್ರಶಸ್ತಿ ನೀಡಿ ಸನ್ಮಾನಿಸಿದರು.

ಕಾರ್ಯಕ್ರಮದ ಕೊನೆಗೆ ಧನ್ಯವಾದ ಅರ್ಪಣೆ ನಡೆಸಿದ ಬಿಜೆಪಿ ಯುವ ಮೋರ್ಚಾ ನಾಯಕರು, “ಡಾ. ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಮಾಜದ ಸೇವೆಯಲ್ಲಿ ಶ್ರಮಿಸೋಣ,” ಎಂಬ ಹಂಬಲ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *