ಗದಗ 30: ಇದೇ ತಿಂಗಳು ದಿನಾಂಕ 26ರಂದು ಹುಬ್ಬಳ್ಳಿಯ I.B.M.R. ಮಹಾವಿದ್ಯಾಲಯದಲ್ಲಿ ಜರುಗಿದ ‘ಇಂಟರ್ ಕಾಲೇಜ್ ಫೆಸ್ಟ್ ವಿದ್ಯೋತ್ಸವ 2025’ ರಲ್ಲಿ ಸನ್ಮಾರ್ಗ ಪದವಿ ಪೂರ್ವ ಮಹಾವಿದ್ಯಾಲಯದ ದ್ವಿತೀಯ ವರ್ಷದ ವಾಣಿಜ್ಯ ವಿದ್ಯಾರ್ಥಿನಿಯರು ಸಕ್ರೀಯವಾಗಿ ಭಾಗವಹಿಸಿ, ‘ರಿಧಮ್ ಎಕ್ಸ್‍ಪ್ರೆಸ್’ ನೃತ್ಯ ಸ್ಫರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ನೃತ್ಯ ಸ್ಫರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಕುಮಾರಿ: ಅನಿತಾ ಚೌಧರಿ, ಕುಮಾರಿ: ಶ್ರೇಯಾ ಶೆಟ್ಟಿ, ಕುಮಾರಿ: ಝಿಕ್ರಾ ಸುಂಕದ, ಕುಮಾರಿ: ಜವೇರಿಯಾ ಡಂಬಳ. ಕುಮಾರಿ: ನೇಹಾ ಬರದ. ಕುಮಾರಿ: ರಿಂಕು ಚೌಧರಿ ಇವರುಗಳು ದ್ವಿತೀಯ ಸ್ಥಾನ ಪಡೆದಿದ್ದು ಹಾಗೂ ‘‘QUIZ, BRAND-O-WAR’ ಸ್ಪರ್ಧೆಯಲ್ಲಿಯೂ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಕುಮಾರ: ನೇಮಿಚಂದ ಗಜೇಂದ್ರಗಡ. ಕುಮಾರ: ಸಾಹಿಲ್ ಜೈನ. ಕುಮಾರ: ವರುಣ ಜರತ್‍ಖಾನಿ. ಕುಮಾರ ಚಿನ್ಮಯ ಅಕ್ಕಿ ಹಾಗೂ ಕುಮಾರ: ಶ್ರೀನಿವಾಸ ತೆಗ್ಗಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಸ್ಪರ್ಧಾ ವಿಜೇತರನ್ನು ಸ್ಟುಡೆಂಟ್ಸ್ ಏಜ್ಯುಕೇಶ್‍ನ ಸೊಸೈಟಿಯ ಚೇರ್ಮನ್‍ರಾದ ಪ್ರೊ. ರಾಜೇಶ ಕುಲಕರ್ಣಿ. ಆಡಳಿತಾಧಿಕಾರಿ ಶ್ರೀ ಎಮ್ ಸಿ ಹಿರೇಮಠ. ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ನಿರ್ದೇಶಕರುಗಳಾದ ಪ್ರೊ. ರೋಹಿತ್ ಒಡೆಯರ್. ಪ್ರೊ. ಪುನೀತ್ ದೇಶಪಾಂಡೆ. ಪ್ರೊ. ರಾಹುಲ್ ಒಡೆಯರ್. ಪ್ರೊ. ಸೈಯದ್ ಮತೀನ ಮುಲ್ಲಾ ಮತ್ತು ಬೋದಕ-ಬೋದಕೇತರ ಸಿಬ್ಬಂದಿ ಹಾಗೂ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ. ಈ ಫೆಸ್ಟಿಗೆ ಭಾಗವಹಿಸಲು ಪ್ರೊ ಸಂಗೀತಾ ಬೀಳಗಿ ಹಾಗೂ ಪ್ರೊ. ಎಸ್ ಎಸ್ ವಜ್ರಬಂಡಿ ಅವರು ಮಾರ್ಗದರ್ಶನ ಹಾಗೂ ಪ್ರೇರೆಪಣೆ ನೀಡಿದ್ದರು.