ಗದಗ: ಗದಗ ಜಿಲ್ಲೆ ಮುಂಡರಗಿ ತಾಲೂಕಿನ ತುಂಗಭದ್ರಾ ನದಿಯಲ್ಲಿ ರವಿವಾರ ಸಂಜೆ ವೇಳೆ ಮತ್ತೊಂದು ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ.
ಸುಮಾರು 40 ವರ್ಷದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದು, ಈವರೆಗೂ ಗುರತು ಪತ್ತೆಯಾಗಿರುವದಿಲ್ಲ. ಈ ಕುರಿತು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ತಾನೆ, ತಂದೆಯೊಬ್ಬ ಮೂವರು ಮಕ್ಕಳನ್ನ ನದಿಗೆ ಎಸೆದು, ತಾನು ಸಹ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆ ದಾರುಣ ಘಟನೆ ಮಾಸುವ ಮುನ್ನವೇ, ನದಿಯಲ್ಲಿ ಮತ್ತೊಂದು ಶವ ತೇಲಿಬಂದಿದೆ. ಈ ಭಾಗದ ಜನರ ಜೀವನಾಡಿಯಾಗಿರೋ ತುಂಗಭದ್ರೆ, ಸುಸೈಡ್ ಸ್ಪಾಟ್ ಆಗಿ ಪರಿವರ್ತನೆ ಆಗುತ್ತಿದೆಯಾ? ಅನ್ನೋ ಆತಂಕ ಮೂಡಿದೆ.
ಆದಷ್ಟು ಬೇಗ ತಾಲೂಕಾಡಳಿತ ಮುತುವರ್ಜಿ ವಹಿಸಿ, ನದಿ ಮೇಲಿನ ಸೇತುವೆ ಎರೆಡೂ ಬದಿಯಲ್ಲಿ, ಎತ್ತರದ ಕಬ್ಬಿಣದ ತಡೆಗೋಡೆ ನಿರ್ಮಿಸಬೇಕು. ಅಂದಾಗ ಆತ್ಮಹತ್ಯೆಯಂಥ ಅವಘಡಗಳಿಗೆ ಸಾಧ್ಯವಾದಷ್ಟು ತಡೆ ಬಿದ್ದಂತಾಗುತ್ತೆ ಅನ್ನೊದು ಸಾರ್ವಜನಿಕರ ಆಗ್ರಹವಾಗಿದೆ.
