ಗದಗ: ನಗರದ ವಿಜಯ ಲಲಿತ ಕಲಾ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆ ಹಿನ್ನೆಲೆ ಸಮಾರಂಭ ಜರುಗಿತು.
ಸಮಾರಂಭದ ಉದ್ಘಾಟನೆಯನ್ನ ಬೆಟಗೇರಿ ಠಾಣೆಯ ಸಿಪಿಐ ಧೀರಜ ಸಿಂಧೆ ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರು.ಈ ವೇಳೆ ಮಾತನಾಡಿದ ಅವರು, ಎಲ್ಲ ವಿದ್ಯಾರ್ಥಿಗಳು ಪಟ್ಯೆತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾತ್ರ ವಿದ್ಯಾರ್ಥಿಯ ಶೈಕ್ಷಣಿಕ ಜೀವನ ಮತ್ತು ವ್ಯಕ್ತಿತ್ವ ಸಂಪೂರ್ಣಗೊಳ್ಳುತ್ತದೆ ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀದತ್ತ ಗ್ರೂಪ್ ಮ್ಯಾನೇಜಿಂಗ್ ನಿರ್ದೇಶಕರಾದ, ಕಿರಣ್ ಭೂಮಾ, ಅತಿಥಿಗಳಾಗಿ ನಗರಸಭೆ ಸದಸ್ಯೆ ವಿದ್ಯಾವತಿ ಗಡಗಿ, ವಿಶಾಲ ಸ್ಟೀಲ್ ಮಾಲೀಕರಾದ, ಕೃಷ್ಣ ಕಡ್ಲಿಕೊಪ್ಪ ಉಪಸ್ಥಿತರಿದ್ದರು.

ಇದೇ ವೇಳೆ, ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ಬಿ. ಬಿಡ್ನಾಳ ಅವರನ್ನ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷರಾದ ಅಶೋಕ ಟಿ. ಅಕ್ಕಿ ಅವರು ವಹಿಸಿಕೊಂಡಿದ್ದರು.ಸಂಸ್ಥೆಯ ಕಾರ್ಯದರ್ಶಿಯಾದ ಸಂತೋಷ ಅಕ್ಕಿ ಹಾಗೂ ಸಂಸ್ಥೆಯ ಶಾಲಾ ಮುಖ್ಯಸ್ಥರಾದ ಶ್ರೀಮತಿ ಸಾಗರಿಕ ಅಕ್ಕಿ ಉಪಸ್ಥಿದ್ದರು. ಶಾಲಾ ಮುಖ್ಯೋಪಾಧ್ಯಾಯರು, ಕಾಲೇಜಿನ ಪ್ರ ಪ್ರಾಚಾರ್ಯರು, ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಹಾಗೂ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.