ಗದಗ: ವಿಜಯ ಲಲಿತಕಲಾ ಸಂಸ್ಥೆಯ ವಾರ್ಷಿಕೋತ್ಸವ ದಿನಾಚರಣೆ ಹಿನ್ನೆಲೆ 2024-25 ರ ದಿ:11-01-2025 ರಂದು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರಮಾಣ ಪತ್ರ ವಿತರಣಾ ಸಮಾರಂಭ ಜರುಗುವುದು.
ಬೆಳಿಗ್ಗೆ 10:00 ಘಂಟೆಗೆ ಕಾರ್ಯಕ್ರಮ ನಡೆಯಲಿದ್ದು, ರಾಜೀವಗಾಂಧಿ ನಗರದ ಸಾಯಿಬಾಬಾ ಮಂದಿರ ಹಿಂಬಾಗದಲ್ಲಿ ಇರುವ ಸಂಸ್ಥೆಯ ಆವರಣದಲ್ಲಿ ಸಮಾರಂಭ ಜರುಗಲಿದೆ.
ವಿಜಯ ಫೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆ, ವಿಜಯ ಪದವಿ ಪೂರ್ವ ಕಾಲೇಜು, ವಿಜಯ ಲಲಿತಾ ಕಲಾ ಕಾಲೇಜು, ವಿಜಯ ಪಿ ಜಿ ಆರ್ಟ್ ಸೆಂಟರ್ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದು, ಉದ್ಘಾಟನೆಯನ್ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಎಂ.ಬಿ.ಸಂಕದ ಇವರು ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಶ್ರೀ ದತ್ತ ಗ್ರೂಪ್ ಮ್ಯಾನೇಜಿಂಗ್ ಡೈರೆಕ್ಟರ್ ಆದ ಶ್ರೀ ಕಿರಣ್ ಭೂಮಾ ಆಗಮಿಸುವರು. ಕಾರ್ಯಕ್ರಮದ ಅತಿಥಿಗಳಾಗಿ ಡಾ. ಶಾಂತಾಬಾಯಿ ಭೂಮರೆಡ್ಡಿ, ಶ್ರೀ.ವಿದ್ಯಾವತಿ ಗಡಗಿ ನಗರ ಸಭಾ ಸದಸ್ಯರು ಹಾಗೂ ಶ್ರೀ ಕೃಷ್ಣ ಕಡ್ಲಿಕೊಪ್ಪ ಮಾಲಕರು ವಿಶಾಲ ಸ್ಟೀಲ್ ಏಜೆನ್ಸಿ ಗದಗ ಇವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗುವದು. ಇದೇ ವೇಳೆ, ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಡಾ.ಜಿ.ಬಿ. ಬಿಡ್ನಾಳ ಅವರನ್ನ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯ ಲಲಿತಕಲಾ ಸಂಸ್ಥೆಯ ಅಧ್ಯಕ್ಷರಾದ ಅಶೋಕ.ಟಿ. ಅಕ್ಕಿ ಅವರು ವಹಿಸಿಕೊಳ್ಳಲಿದ್ದು, ಶಾಲಾ ಮುಖ್ಯೋಪಾಧ್ಯಾಯರು, ಕಾಲೇಜಿನ ಪ್ರ ಪ್ರಾಚಾರ್ಯರು, ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತಿ ಇರಲಿದ್ದಾರೆ.