ಗದಗ : ಬಡ ಹಾಗೂ ಸಣ್ಣ ಹಿಡುವಳಿ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ವಿವಿಧ ಯೋಜನೆಗಳಲ್ಲಿ ಬೋರ್‌ವೆಲ್ ಹಾಗೂ ವಿದ್ಯುತ್ ಸಂಪರ್ಕವನ್ನು ಉಚಿತವಾಗಿ ಕೊಡುತ್ತಿದೆ. ಆದರೆ ಕಳೆದ ಮೂರು ತಿಂಗಳ ಕಳೆದರು ಇಲ್ಲವರೆಗೂ ಟಿಸಿ ಹಾಕುತ್ತಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವರದಿ : ಪರಮೇಶ ಲಮಾಣಿ
ಈ ವರ್ಷದಲ್ಲಿ ಮುಂಗಾರು ಹಾಗೂ ಹಿಂಗಾರಿ ಬೆಳೆಗಳು ರೈತರಿಗೆ ಹಾನಿಯುಂಟು ಮಾಡಿದೆ, ಕೆಂಗೆಟ್ಟಿರುವ ರೈತರು ಬೇಸಿಗೆ ಬೆಳೆ ಬೆಳೆಯಲು ವಿದ್ಯುತ್ ಬೇಕಾಗುತ್ತದೆ. ಆದರೆ ಕಳೆದ ಮೂರು ತಿಂಗಳಿಂದ ಟಿಸಿ ಹಾಕುತ್ತಿಲ್ಲ, ವಿದ್ಯುತ್ ಪ್ರಸರಣ ಘಟಕದ ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿ ಹೇಳಿ ಸಾಕಾಗಿದೆ ಎಂದು ರೈತರು ನೋವು ತೊಡಿಕೊಂಡರು.
ಹೌದು, ಲಕ್ಷ್ಮೇಶ್ವರ ತಾಲೂಕಿನ ಹರದಗಟ್ಟಿ ಗ್ರಾಮದ ರೈತರ ಟಿಸಿ (ವಿದ್ಯುತ್ ಟ್ರಾನ್ಸಪಾರ್ಮರ್) ಹೋಗಿ ಮೂರು ತಿಂಗಳ ಕಳೆದರು, ಇದುವರೆಗೂ ಟಿಸಿ ಹಾಕುತ್ತಿಲ್ಲ. ಕಳೆದ ಬಾರಿ ಟಿಸಿ ರಿಪೇರಿಗೆ ರೈತರ ಹತ್ತಿರ ಹಣ ವಸುಲಿ ಮಾಡಿ ರಿಪೇರಿ ಮಾಡಿ ಕೊಟ್ಟಿದ್ದರು, ಈ ಬಾರಿ ಟಿಸಿ ಹೋಗಿದೆ ಎಂದು ಎಷ್ಟೋ ಸಾರಿ ಹೇಳಿದರು ಅಧಿಕಾರಿಗಳು ಮಾತ್ರ ಜಾಣಕುರುಡುತನ ತೋರುತ್ತಿದ್ದಾರೆ ಎಂದು ರೈತ ಸುರೇಶ ಲಮಾಣಿ ಆಕ್ರೋಶ ವ್ಯಕ್ತಪಡಿಸಿದರು.
ಸರಕಾರ ರೈತರಿಗೆ ಅನುಕೂಲವಾಗಲಿ ಎಂದು ರೈತರಿಗೆ ಅನೇಕ ಯೋಜನೆ ನೀಡಿದರು ಅಧಿಕಾರಿಗಳು ಮಾತ್ರ ಟಿಸಿಯಲ್ಲು ಭಷ್ಟಚಾರ ನಡೆಸುತ್ತಿದ್ದಾರೆ ಹೊಸ ಟಿಸಿ (ವಿದ್ಯುತ್ ಟ್ರಾನ್ಸಫಾರ್ಮರ್) ಕೊಡಲು, ಕೆಟ್ಟಿರುವ ಟಿಸಿ ರಿಪೇರಿ ಮಾಡಿಸಿಕೊಡಲು ರೈತರು ಹಣ ನೀಡಿದರೆ ಮಾತ್ರ ಕೆಲಸ ಮಾಡುತ್ತಿದ್ದಾರೆ ಎಂದು ರೈತರಾದ ರಾಜು ಮಾಳಗಿಮನಿ ಫಕ್ಕೀರಪ್ಪ ಲಮಾಣಿ, ಸುರೇಶ ಲಮಾಣಿ, ಚಂದ್ರು ಖಾನಪ್ಪನವರ ಆರೋಪಿಸಿದರು.
ಕೋಟ್.೧
ಕಳೆದ ಬಾರಿ ಟಿಸಿಯಲ್ಲಿ ಆಯಿಲ್ ಇಲ್ಲ ಎಂದಿದಕ್ಕೆ ರೈತರು ಎಲ್ಲರೂ ಸೇರಿಕೊಂಡು ಪಟ್ಟಿ ಹಾಕಿ ಹಣವನ್ನು ಕೊಟ್ಟಿದ್ದೇವೆ. ಈ ಬಾರಿ ನಮ್ಮ ಟಿಸಿ ಹೋಗಿದೆ ಟಿಸಿ ಹಾಕಿಸಿ ಎಂದು ಸಾವಿರ ಸಾರಿ ಹೇಳಿದರು ಕ್ಯಾರೆ ಎನ್ನುತ್ತಿಲ್ಲ ಟಿಸಿ ಹಾಕಲಿಲ್ಲ ಎಂದರೆ ಲಕ್ಷ್ಮೇಶ್ವರ ಕೆಇಬಿ ಮುಂದೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು.
ಸುರೇಶ ಎಸ್ ಲಮಾಣಿ(ಹರದಗಟ್ಟಿ ಗ್ರಾಮದ ರೈತ)
