ಮಂಡ್ಯ, ಮೇ 26 – “ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ, ರಸ್ತೆಯಲ್ಲಿ ಬೈಕ್ ತಡೆದು ನಿಲ್ಲಿಸಿದ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಬಿದ್ದು ಮೃತಪಟ್ಟಿರುವ” ಹೃದಯವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಳಿಯ ಹಳೆಯ ಬೆಂಗಳೂರು-ಮೈಸೂರು ರಸ್ತೆಯಲ್ಲಿ ನಡೆದಿದೆ.
ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ದಂಪತಿಯ ಮಗಳಾದ ಮೂರೂವರೆ ವರ್ಷದ ಹೃತೀಕ್ಷಾ ಎಂಬ ಮಗು ಈ ದುರ್ಘಟನೆಯಲ್ಲಿ ಸ್ಥಳದಲ್ಲೇ ಸಾವನ್ನಪ್ಪಿದೆ. ನಾಯಿಯೊಂದು ಮಗುವನ್ನು ಕಚ್ಚಿದ್ದರಿಂದ ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ತಂದೆ-ತಾಯಿ ಬೈಕ್ನಲ್ಲಿ ಹೊರಟಿದ್ದರು. ಆದರೆ ಮಧ್ಯ ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು “ಹೆಲ್ಮೆಟ್ ಹಾಕಿಲ್ಲ” ಎಂಬ ಕಾರಣಕ್ಕೆ ಬೈಕ್ ತಡೆದು ನಿಲ್ಲಿಸಿದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಅಂದುಕೊಳ್ಳದ ರೀತಿಯಲ್ಲಿ ಆಯತಪ್ಪಿ ಮಗು ಕೆಳಗೆ ಬಿದ್ದು ತಲೆಗೆ ಬಲವಾದ ಪೆಟ್ಟಾಗಿ, ಸ್ಥಳದಲ್ಲೇ ಮೃತಪಟ್ಟಿತು. ಮಗು ಸಾವನ್ನಪ್ಪಿದ ಮೇಲಷ್ಟೆ, ಪೋಷಕರು ಗೋಳಾಡುತ್ತಾ ಮಗುವನ್ನು ಮಡಿಲಲ್ಲಿ ಹಿಡಿದು ರಸ್ತೆಯಲ್ಲಿ ಗೋಳಾಡಿದರು. ಈ ದೃಶ್ಯ ನೋಡಿ ಸಾರ್ವಜನಿಕರೂ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಆಕ್ರೋಶದಿಂದ ಪೊಲೀಸರು ಸಸ್ಪೆಂಡ್
ಘಟನೆ ಬಗ್ಗೆ ಸ್ಥಳೀಯರು ಕಿಡಿಕಾರಿದ ಬಳಿಕ, ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಕ್ಷಣ ಕ್ರಮ ತೆಗೆದುಕೊಂಡು, ಘಟನೆಯ ವೇಳೆಗೆ ಸ್ಥಳದಲ್ಲಿದ್ದ ಆರು ಮಂದಿ ಎಎಸ್ಐ ಗಳನ್ನ ಸಸ್ಪೆಂಡ್ ಮಾಡಿದ್ದಾರೆ. ಅವರಲ್ಲಿ ಎಎಸ್ಐ ನಾಗರಾಜು, ಜಯರಾಂ, ಗುರುದೇವ್ ಸೇರಿದಂತೆ ಇತರ ಸಿಬ್ಬಂದಿಗಳು ಇದ್ದರು.
ಶಾಸಕರ ಭರವಸೆ
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿದ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರು, “ಇದು ತುಂಬಾ ದುರಂತ. ಪೊಲೀಸರ ನಿರ್ಲಕ್ಷ್ಯ ಕ್ಷಮಿಸಲು ಸಾಧ್ಯವಿಲ್ಲ. ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಈ ಕುಟುಂಬಕ್ಕೆ ಸರಿಯಾದ ಪರಿಹಾರ ನೀಡಲಾಗುತ್ತದೆ. ನಾನು ವೈಯಕ್ತಿಕವಾಗಿ ಸಹ ಸಹಾಯ ಮಾಡುತ್ತೇನೆ” ಎಂದು ಹೇಳಿದರು.

ಪೋಷಕರ ಬೇಸರ
“ಅವಳು ಬದುಕಿದ್ದರೆ ಸಾಕಾಗಿತ್ತು… ತಡವಾಗಿದ್ದು ಅಷ್ಟು ದೊಡ್ಡ ದಂಡನೆಯಾಗಿತ್ತೆ?” ಎಂಬದು ಪೋಷಕರ ನೋವಿನ ಮಾತು. ಅವರು ತಮ್ಮ ಮಗಳ ಶವವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಕರೆದೊಯ್ದಿದ್ದಾರೆ.
ಈ ಘಟನೆ ಎಲ್ಲಾ ಪೊಲೀಸರಿಗೆ ಎಚ್ಚರಿಕೆ ಆಗಬೇಕು. ಸಹಾನುಭೂತಿ ಇಲ್ಲದೆ ಕೇವಲ ಕಾನೂನು ಕಠಿಣವಾಗಿ ಅನುಸರಿಸಿದರೆ, ಎಂತಹ ದುಃಖಕರ ಪರಿಣಾಮ ಬರುತ್ತದೆ ಎಂಬುದಕ್ಕೆ ಇದು ತೀವ್ರ ಪಾಠ.
