ಗದಗ: ಅಖಿಲ ಭಾರತ ಸಮಾನತೆಯ ಮಂದಿರ ಪ್ರತಿಷ್ಠಾಪನೆ ಮಹಾಸಭಾ ವತಿಯಿಂದ ಅಂಬೇಡ್ಕರ್ ಜಯಂತಿಯನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಮಹಾಸಭಾದ ಸಕ್ರೀಯ ರೂವಾರಿಯಾಗಿರುವ ಸನ್ಮಾನ್ಯ ಅನಿಲ್ ಪಿ. ಮೆಣಸಿನಕಾಯಿ ಅವರ ಗದಗ ನಿವಾಸ ಈ ವಿಶಿಷ್ಟ ಆಚರಣೆಗೆ ವೇದಿಕೆಯಾಯಿತು. ಬೌದ್ಧ ತತ್ತ್ವ, ಸಾಮಾಜಿಕ ನ್ಯಾಯ ಹಾಗೂ ಅಂಬೇಡ್ಕರ್ ತತ್ವಾಧಾರಿತ ಸಂಸ್ಕೃತಿಗೆ ಪ್ರಣಾಮ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹಲವಾರು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದರು. ರುದ್ರಣ್ಣ ಗುಳಗುಳಿ, ಸಿದ್ದಣ್ಣ ಪಲ್ಲೇದ್, ಅಶೋಕ ಕರೂರು, ವಸಂತ ಪಡಗದ, ಶರಣಪ ಚಿಂಚಲಿ, ಮುತ್ತು ಮುಸಿಗೇರಿ, ಶರಣಪ್ಪ ಕಮ್ಮಡೋಳ್ಲಿ, ರವಿ ಬಾಬು ಎಲಿಗಾರ, ಕೋರಿಶೆಟ್ಟರ, ವಸ್ತ್ರದ ಬಸು ಕುರಿ, ಉಡಚಪ್ಪ ಹಳ್ಲಿಕೇರಿ, ಪರಮೇಶ ನಾಯಕ, ವಿಜಯಲಕ್ಷ್ಮಿ ಮಾನ್ವಿ, ಚಮ್ಮಾಮ ಅಕ್ಕ, ಪದ್ಮಿನಿ, ಯೋಗೇಶ ಘೋಡಕೆ ಮುಂತಾದವರು ಈ ಭಾವಪೂರ್ಣ ಕ್ಷಣದಲ್ಲಿ ಭಾಗವಹಿಸಿ, ಅಂಬೇಡ್ಕರ್ ಅವರ ಸಮಾಜ ಪರಿವರ್ತನೆ ಚಿಂತನೆಗಳನ್ನು ಸ್ಮರಿಸಿದರು.

ಮೇಲಿನ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಕಾರ್ಯಕ್ರಮದ ಸಂದರ್ಭದಲ್ಲಿ ಅಂಬೇಡ್ಕರ್ ತತ್ವ, ಭಾರತೀಯ ಸಂವಿಧಾನ, ಸಮಾಜದ ಶೋಷಿತ ವರ್ಗಗಳ ಸಬಲೀಕರಣ ಕುರಿತ ಚರ್ಚೆಗಳು ನಡೆದವು. ಈ ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಸಾಮಾಜಿಕ ಉದ್ದೇಶದ ಸಮಾಗಮ ಗದಗದ ಜನಜೀವನದಲ್ಲಿ ಹೊಸ ಚೈತನ್ಯ ತುಂಬಿದಂತಾಯಿತು.
