ಲಕ್ಷ್ಮೇಶ್ವರ : ಕಳೆದ ಒಂದು ದಶಕಗಳಿಂದ ಸುಣ್ಣ ಬಣ್ಣ ಕಾಣದ ಪ್ರವಾಸಿ ಮಂದಿರ ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಿದ್ದಾರೆ ಎಂಬ ಹಿನ್ನಲೆಯಲ್ಲಿ ಎಚ್ಚೆತಕೊಂಡ ಅಧಿಕಾರಿಗಳು ಪ್ರವಾಸಿ ಮಂದಿರಕ್ಕೆ ಸುಣ್ಣ ಬಣ್ಣ ಹಚ್ಚಲು ಮುಂದಾಗಿದ್ದಾರೆ.
ಪ್ರತಿ ವರ್ಷವು ಪ್ರವಾಸಿಮಂದಿರಗಳ ನಿರ್ವಹಣೆಗಾಗಿ ಲಕ್ಷಾಂತರ ರೂಪಾಯಿ ಅನುದಾನ ಬಂದರು ಈಗ ಏಕಾಏಕಿ ಸುಣ್ಣ ಬಣ್ಣ ಬಳೆಯುತ್ತಿರುವುದಕ್ಕೆ ಸಾರ್ವಜನಿಕರು ಅನೇಕ ವರ್ಷಗಳಿಂದಲೂ ಅನಾಥವಾಗಿದ್ದ ಪ್ರವಾಸಿ ಮಂದಿರಕ್ಕೆ ಇಗ್ಯಾಕೆ ಸುಣ್ಣ ಬಣ್ಣ ಎಂದು ಪ್ರಶ್ನೆ ಮಾಡುತ್ತಿದ್ದಾರೆ.
ವರದಿ : ಪರಮೇಶ ಎಸ್ ಲಮಾಣಿ
ಪ್ರವಾಸಿ ಮಂದಿರಗಳ ಅವ್ಯವಸ್ಥೆ ರಸ್ತೆ ಗುಂಡಿಗಳ ಮುಚ್ಚುವ ಬಗ್ಗೆ ಅಧಿಕಾರಿಗಳಿಗೆ ಮನವಿ ಮಾಡಿ, ಮೊಬೈಲ್ ಕರೆ ಮಾಡಿದರು ಕ್ಯಾರೆಯನ್ನದ ಅಧಿಕಾರಿಗಳು ಧಿಡೀರನೇ ಎಚ್ಚೆತ್ತು ಕಾರ್ಯಪ್ರವೃತ್ತ ಆಗಿರುವ ಅಧಿಕಾರಿಗಳು ಹಗಲು ರಾತ್ರಿ ಎನ್ನದೆ ಗುಂಡಿ ಮುಚ್ಚುವ ಹಾಗೂ ಕಚೇರಿಗಳಿಗೆ ಬಣ್ಣ ಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ.
ಇವೆಲ್ಲವನ್ನೂ ಗಮನಿಸಿದ ಸಾರ್ವಜನಿಕರು ಮುಖ್ಯಮಂತ್ರಿಗಳೇ ನೀವು ಒಂದು ಬಾರಿ ನಮ್ಮ ಕ್ಷೇತ್ರದಾದ್ಯಂತ ಬಂದು ಪ್ರವಾಸ ಕೈಗೊಂಡರೆ ರಸ್ತೆಗಳು ಸುಧಾರಿಸುತ್ತವೇ ಎಂಬ ಬಾವನೆ ಮೂಡಿದೆ.
ತಾಲೂಕಿನ ಹಳ್ಳಿ ಹಳ್ಳಿಗಳಿಗೆ ಬಂದು ಹೋಗಿ ಸಿಎಂ ಸಾಹೇಬರೆ ಎಂದು ಸಾರ್ವಜನಿಕರು ಮಾತನಾಡಿತ್ತಿದ್ದಾರೆ.
ಅದೇ ಸಾರ್ವಜನಿಕರು ಪ್ರಶ್ನೆ ಮಾಡಿದರೆ ಅನುದಾನ ಬಂದಿಲ್ಲ ಎಂದು ಹೇಳಿ ಕೈ ತೊಳೆದುಕೊಳ್ಳುತ್ತಿದ್ದ ಅಧಿಕಾರಿಗಳು ಈಗ ತುರ್ತು ಈ ಕಾಮಗಾರಿಗಳಿಗೆ ಸರಕಾರ ಏನಾದರೂ, ವಿಶೇಷ ಅನುದಾನ ನೀಡಿದೆಯೇ ಎಂದು ಪ್ರಶ್ನೆ ಮೂಡಿತ್ತಿದೆ.
ಲೋಕೋಪಯೋಗಿ ಇಲಾಖೆಗೆ ಸಂಘ-ಸಂಘಟನೆಗಳು ಸೇರಿದಂತೆ ಸಾರ್ವಜನಿಕರು ಸಾವಿರ ಸಾರಿ ಫೋನ್ ಮಾಡಿ ಪ್ರವಾಸ ಮಂದಿರ ಅಭಿವೃದ್ಧಿ ಪಡಿಸಿ ಎಂದು ಬಾಯಿ ಬಾಯಿ ಬಡೆದುಕೊಂಡರು ಅಭಿವೃದ್ಧಿ ಕಾಣಲಿಲ್ಲ ಆದರೆ ಸಿಎಂ ಸಿದ್ದರಾಮಯ್ಯ ಬರುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿಗಳು ಪ್ರವಾಸಿ ಮಂದಿರದ ರಸ್ತೆಯ ಮೂಲಕ ಚಂದನ ಶಾಲೆ ಬರುವುತ್ತಿರುವುದರಿಂದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಎದ್ದುಬಿದ್ದು ಬಣ್ಣ ಸುಣ್ಣ ಮಾಡುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ.
ಪ್ರವಾಸಿ ಮಂದಿರಕ್ಕೆ ಸುಣ್ಣ ಬಣ್ಣ ಬಳಿಯುತ್ತಿರುವುದರಿಂದ ಸಾರ್ವಜನಿಕರು ಮುಖ್ಯಮಂತ್ರಿಗಳು ನಮ್ಮ ಕ್ಷೇತ್ರಕ್ಕೆ ಪದೇ ಪದೇ ಬರಲಿ ಎಂದು ದೇವರಲ್ಲಿ ಕೈಮುಗಿಯುವಂತಾಗಿದೆ.
**************************************
ದಶಕದ ಕಳೆದರು ಅಭಿವೃದ್ಧಿ ಕಾಣದ ಪ್ರವಾಸಿ ಮಂದಿರ ಸಿಎಂ ಸಿದ್ದರಾಮಯ್ಯ ಬರುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಎಚ್ಚೆತಕೊಂಡು ಸುಣ್ಣ ಬಣ್ಣ ಬಳಿಯುತ್ತಿದ್ದಾರೆ ಸಾರ್ವಜನಿಕರು ಸಿಎಂ ಸಿದ್ದರಾಮಯ್ಯನವರು ತಿಂಗಳಿಗೆ ಒಮ್ಮೆ ಬಂದರೆ ಇಂತಹ ದಶಕದಿಂದ ಪಾಳು ಬಿದ್ದರುವ ಕಚೇರಿಗಳು ಅಭಿವೃದ್ಧಿ ಕಾಣುತ್ತದೆ ಎನ್ನುವ ಬಗ್ಗೆ ಪ್ರಶ್ನೆಯಾಗಿದೆ.
