Home » News » ನೆರವು ಪತ್ತಿನ ಸಹಕಾರಿ ಸಂಘ ಎಲ್ಲರಿಗೂ ನೆರವಾಗಲಿ: ಎಸ್.ವ್ಹಿ. ಸಂಕನೂರ

ನೆರವು ಪತ್ತಿನ ಸಹಕಾರಿ ಸಂಘ ಎಲ್ಲರಿಗೂ ನೆರವಾಗಲಿ: ಎಸ್.ವ್ಹಿ. ಸಂಕನೂರ

by CityXPress
0 comments

ಗದಗ:ಬಡ ಹಾಗೂ ಮದ್ಯಮ ವರ್ಗದ ಕುಟುಂಬಗಳ ರೈತರಿಗೆ ಮತ್ತು ಸಣ್ಣ ಪುಟ್ಟ ವ್ಯಾಪಾರಗಳಿಗೆ ಆರ್ಥಿಕ ಸಬಲತೆ ಮಾಡುವಲ್ಲಿ ನೆರವು ಪತ್ತಿನ ಸಹಕಾರಿ ಸಂಘ ಹೆಸರಿಗೆ ತಕ್ಕಂತೆ ನೆರವು ನೀಡಲಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹೇಳಿದರು.

ನಗರದ ಸ್ಟೇಷನ್ ರಸ್ತೆಯ ಹಿರೇಮಠ ಟ್ರಸ್ಟ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಪ್ರಾರಂಭಿಸಿದ ನೆರವು ಪತ್ತಿನ ಸಹಕಾರಿ ಸಂಘ ನಿಯಮಿತ, ಗದಗ ಇದರ ಉದ್ಘಾಟನೆ ನಿಮಿತ್ತ ಪ್ರಧಾನ ಕಚೇರಿಯಲ್ಲಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಏಷ್ಯಾ ಖಂಡದಲ್ಲೆ ಮೊಟ್ಟಮೊದಲು ಸಹಕಾರಿ ಸಂಘ ಸ್ಥಾಪಿಸುವಲ್ಲಿ ದಿ. ಶ್ರೀ ಶಿದ್ಧನಗೌಡ ಸಣ್ಣರಾಮನಗೌಡ ಪಾಟೀಲ ಹಾಗೂ ಸಹಕಾರಿ ರಂಗದ ಭೀಷ್ಮ ದಿ. ಕೆ.ಎಚ್. ಪಾಟೀಲ ಭಾವಚಿತ್ರ ವೇದಿಕೆ ಮೇಲೆ ಇಟ್ಟು ಗೌರವ ಸಲ್ಲಿಸಿರುವುದು ಅತ್ಯಂಯ ಸ್ಮರಣೀಯವಾದುದು. ನಮಗೆ ಸಹಾಯ ಮಾಡಿದವರನ್ನ ಹಾಗೂ ಕ್ಷೇತ್ರಕ್ಕೆ ಸೇವೆ ಸಲ್ಲಿಸಿದವರನ್ನು ಸ್ಮರಿಸುವದು ನಮ್ಮ ಕರ್ತವ್ಯವಾಗಿದ್ದು,ಒಟ್ಟಾರೆ ನೆರವು ಪತ್ತಿನ ಸಹಕಾರ ಸಂಘ ನಿಮ್ಮೊಂದಿಗೆ ನಾವು ಎಂಬ ರೀತಿಯಲ್ಲಿ ಎಲ್ಲರಿಗೂ ನೆರವಾಗಲಿ ಎಂದು ಹಾರೈಸಿದರು.

ಬೈರನಹಟ್ಟಿ ಹಾಗೂ ಶಿರೋಳ ತೋಂಟದಾರ್ಯಮಠದ ಪರಮ ಪೂಜ್ಯ ಶ್ರೀ ಶಾಂತಲಿಂಗ ಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

banner

ನಗರಸಭಾ ಸದಸ್ಯರಾದ ಚಂದ್ರು ತಡಸದ ಮಾತನಾಡಿ, ನಮ್ಮ ವಾರ್ಡಿನ ಜನೆತೆ ಹಾಗೂ ಸಾರ್ವಜನಿಕರು ಇವರ ಸಂಘದಲ್ಲಿ ಷೇರುಗಳನ್ನು ಪಡೆಯುವ ಮೂಲಕ ಸಹಕಾರ ನೀಡೋಣ ಹಾಗೂ ಸಹಕಾರ ಸಂಘಗಳನ್ನು ಮುನ್ನಡೆಸಲು ಬೆಳಗಾವಿ ಜಿಲ್ಲೆಯಲ್ಲಿರುವ ಸಂಘಗಳನ್ನು ನಾವು ಮಾದರಿಯಾಗಿ ಇಟ್ಟುಕೊಂಡರೆ ನಮಗೆ ಸಹಾಯವಾಗಲಿದೆ ಎಂದು ಮಾತನಾಡಿದರು.

ಹುಬ್ಬಳ್ಳಿಯ ಕರ್ನಾಟಕ ವಾಣಿಜ್ಯೋಧ್ಯಮ ಹಾಗೂ ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಸಿದ್ಧರಾಮಯ್ಯ ಸಂಶಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು, ಪಾರದರ್ಶಕತೆಯಿಂದ ಸಹಕಾರ ಸಂಘ ನಡೆಸಿದರೆ ಸಂಘಕ್ಕೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.ಕಾರ್ಯಕ್ರಮದಕ್ಕೆ ವಿಶೇಷ ಆಹ್ವಾನಿತರಾಗಿ ರಾಜ್ಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಅಧ್ಯಕ್ಷರಾದ ಬಿ. ಎ.ಪಾಟೀಲರು ಹಿರಿಯ ನಾಗರಿಕರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರದ ಜೊತೆಗೆ ಸರ್ಕಾರದಿಂದ ಒದಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಶಿವಪುತ್ರಪ್ಪ ಬೇವಿನಮರದ, ಅರುಣ ಮುನವಳ್ಳಿ ಭೀಮರಡ್ಡಿ ಕಿಲಬಣ್ಣವರ, ಡಿ,ಎಸ್.ತಳವಾರ ಹಾಜರಿದ್ದರು.ಇದೇ ವೇಳೆ, ಗದಗ ತಾಲೂಕ ಸಹಕಾರಿ ಸಂಘದ ನಿರೀಕ್ಷಕರಾದ ಶಾಂತಾ ಹಿರೇಮಠ, ಎಸ್. ಲೇಡ್ಜರ್ ತಂತ್ರಾಂಶ ಸಂಸ್ಥೆಯ ಹಿರಿಯ ವ್ಯವಸ್ಥಾಪಕಾರದ ಆನಂದ ಆಶ್ರೀತ, ನರಗುಂದದ ಲೆಕ್ಕ ಪರಿಶೋಧಕ ಸಹಾಯಕರಾದ ಮಹಾಂತೇಶ ಸೂರಪೂರ, ರಾಷ್ಟ್ರೀಯ ಹಿರಿಯ ನಾಗರಿಕರ ಜೀವನ ಗೌರವ ಅಭಿಯಾನದ ಅಧ್ಯಕ್ಷರಾದ ಶ್ರೀ ವಿಜಯ ದೇಶಮುಖ ಅವರನ್ನು ಸನ್ಮಾನಿಸಲಾಯಿತ್ತು. ಇದೇ ವೇಳೆ ಸದಸ್ಯರಿಗೆ ಸಾಂಕೇತೀಕವಾಗಿ ಷೇರು ಪ್ರಮಾಣ ಪತ್ರವನ್ನು ವಿತರಿಸಲಾಯಿತ್ತು.

ಅಧ್ಯಕ್ಷತೆಯನ್ನು ರುದ್ರಣ್ಣ ಗುಳಗುಳಿ ವಹಿಸಿದ್ದರು.

ಸಂಘದ ಉಪಾಧ್ಯಕ್ಷರಾದ ಶಿವಕುಮಾರಗೌಡ ಪಾಟೀಲ, ಗೌರವ ಕಾರ್ಯದರ್ಶಿಯಾದ ಶರಣೇಶ ಇಟಗಿ ನಿರ್ದೇಶಕರಾದ ಶಂಕರ ಕಾರದಕಟ್ಟಿ, ದಾನೇಶ ತಡಸದ, ಶ್ರೀಶೈಲ ತಡಸದ, ರಮೇಶ ಗಾರವಾಡ, ವಿಶ್ವನಾಥ ಅಂಗಡಿ, ನಾಗರಾಜ ಬೇವಿನಕಟ್ಟಿ, ಶ್ರೀಕಾಂತ ಜವಳಿ, ಶ್ರೀಮತಿ ರೂಪಾ ಗೋಕಾವಿ, ಶ್ರೀಮತಿ ಪ್ರಿಯಾ ಕಬಾಡಿ ಹಾಗೂ ಶ್ರೀ ವರಸಿದ್ಧಿ ವಿನಾಯಕ ಮಿತ್ರ ಮಂಡಳಿ ಸದಸ್ಯರಾದ ಹಾಗೂ ಸಹಕಾರ ಸಂಘದ ಸದಸ್ಯರಾದ ಕಿರಣ ಕಬಾಡಿ, ಅನಿಲ ಶೆಟ್ಟರ, ಸಹಕಾರ ಸಂಘದ ಸದಸ್ಯರು ಹಾಗೂ ಓಣಿಯ ಗುರು-ಹಿರಿಯರು, ಮಹಿಳೆಯರು ಮುಂತಾದವರು ಉಪಸ್ಥಿತರಿದರು. ಕಾರ್ಯಕ್ರಮದ ಸ್ವಾಗತ ಹಾಗೂ ವಂದನಾರ್ಪಣೆಯನ್ನು ನೆರವು ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ವಿಶ್ವನಾಥ ಶೀರಿಯವರು ನೆರವೇರಿಸಿದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb