ಬೆಂಗಳೂರು: 16 ವರ್ಷಗಳ ಹಿಂದೆ ಚಿತ್ರನಟ ಉಪೇಂದ್ರ ಹಾಗೂ ಮೋಹಕ ಬೆಡಗಿ ನಟಿ ರಮ್ಯಾ ನಟಿಸಿದ್ದ ಚಿತ್ರವೊಂದು ಮುಂದಿನ ವರ್ಷ ಬಿಡುಗಡೆಯಾಗಲಿದೆ. ಹೌದು, 2008ರಲ್ಲಿ ಶೂಟಿಂಗ್ ಮುಗಿಸಿದ್ದ ‘ರಕ್ತ ಕಾಶ್ಮೀರ’ ಅನ್ನುವ ಸಿನಿಮಾ ಮುಂದಿನ ಹೊಸ ವರ್ಷಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
ಈ ಸಿನಿಮಾದಲ್ಲಿ ಉಪೇಂದ್ರ ಹಾಗೂ ರಮ್ಯಾ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಈ ಹಿಂದೆ ಹಣಕಾಸಿನ ವಿಚಾರಕ್ಕೆ ಮನಸ್ತಾಪ ಉಂಟಾಗಿ ಸಿನಿಮಾ ಬಿಡುಗಡೆ ಆಗಿರಲಿಲ್ಲ ಎಂದು ನಿರ್ದೇಶಕರು ಹೇಳಿದ್ದಾರೆ. ಅಲ್ಲದೇ ಚಿತ್ರಕ್ಕೆ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಎಂದು ಹೆಸರಿಡಲಾಗಿತ್ತು, ಆದರೆ ಆ ಹೆಸರನ್ನ ಬದಲಾಯಿಸಿ, ಈಗ ‘ರಕ್ತ ಕಾಶ್ಮೀರ’ ಎಂದು ಹೆಸರಿಡಲಾಗಿದೆ ಎಂದು ಅವರು ತಿಳಿಸಿದ್ದಾರೆ.