ಗದಗ 21: ಜಿಲ್ಲೆಯಲ್ಲಿ 2025-26ನೇ ಸಾಲಿನ ಪೂರ್ವ ಮುಂಗಾರು ಮಳೆ ಉತ್ತಮವಾಗಿ ಶುರುವಾಗಿದ್ದು, ಮುಂಗಾರು ಮಳೆಯೂ ಕೂಡ ಉತ್ತಮವಾಗುವ ನಿರೀಕ್ಷೆಯಿದೆ. ರೈತ ಬಾಂಧವರು ಮಾಗಿ ಉಳುಮೆ ಕೈಗೊಳ್ಳಲು ಸೂಕ್ತ ಸಮಯವಾಗಿದೆ. ಇಳಿಜಾರಿಗೆ ಅಡ್ಡಲಾಗಿ ಬದು ನಿರ್ಮಾಣ ಮಾಡಿಕೊಂಡಲ್ಲಿ, ಬಿದ್ದ ಮಳೆಯ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ರೈತರು ಬಿತ್ತನೆಗೆ ಅವಸರ ಮಾಡದೇ, ಮಣ್ಣಿನಲ್ಲಿ ಸಂಪೂರ್ಣ ತೇವಾಂಶವಾದ ನಂತರ ಬಿತ್ತನೆ ಕೈಗೊಳ್ಳಲು ತಿಳಿಸಿದೆ. ಇಲ್ಲದೇ ಹೋದರೆ ಬಿತ್ತಿದ ಬೆಳೆಯು ಸರಿಯಾಗಿ ಮೊಳಕೆ ಬರಲು ಸಾಧ್ಯವಾಗದೇ ಇರಬಹುದು, ಅಥವಾ ಬೆಳವಣಿಗೆ ವೇಳೆಗೆ ತೇವಾಂಶ ಕೊರತೆ ಉಂಟಾಗಬಹುದಾಗಿದೆ.
ಜಿಲ್ಲೆಯಲ್ಲಿ ಬಹುಶಃ ಎಲ್ಲ ತಾಲ್ಲೂಕುಗಳಲ್ಲಿ ಬೇಸಿಗೆ ಬೆಳೆಗಳು ಕಟಾವಿಗೆ ಬಂದಿದ್ದು, ಕಟಾವಿನ ನಂತರ ಭೂಮಿ ಸಿದ್ಧಪಡಿಸಲು ಉತ್ತಮ ಸಮಯವಾಗಿದೆ. ರೈತರು ತಮ್ಮ ಭೂಮಿಯ ಮಣ್ಣು ಪರೀಕ್ಷೆ ಕೈಗೊಂಡು, ವಿಶ್ಲೇಷಣಾ ವರದಿಯ ಆಧಾರದ ಮೇಲೆ ಬೆಳೆಗಳಿಗೆ ರಸಗೊಬ್ಬರ ಮತ್ತು ಕಾಂಪೋಸ್ಟ್ ಗೊಬ್ಬರಗಳನ್ನು ನೀಡಿ ಸಮಗ್ರ ಪೋಷಕಾಂಶ ಪದ್ಧತಿ ಅನುಸರಿಸಿದಲ್ಲಿ ಭೂಮಿಯ ಫಲವತ್ತತೆ ಮತ್ತು ಉತ್ಪಾದಕತೆಯನ್ನು ಕಾಪಾಡಬಹುದಾಗಿದೆ.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಜಿಲ್ಲೆಯಲ್ಲಿ 2025-26 ನೇ ಸಾಲಿನ ಮುಂಗಾರು ಹಂಗಾಮಿಗೆ ಮೆಕ್ಕೆ ಜೋಳ 1,15,700 ಹೆ., 1,32,500 ಹೆ. ಹೆಸರು, 21,000 ಹೆ. ಶೇಂಗಾ, 7,500 ಹೆ. ಸೂರ್ಯಕಾಂತಿ, ಹಾಗೂ 17,000 ಹೆ. ಹತ್ತಿ ಸೇರಿದಂತೆ ಒಟ್ಟು 3,06,185 ಹೆ. ಪ್ರದೇಶದಲ್ಲಿ ಬಿತ್ತನಾ ಕ್ಷೇತ್ರದ ಗುರಿಯಿದೆ. ಜಿಲ್ಲೆಯ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆಯಾಗದಂತೆ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನೀಕರಿಸಲು ಕ್ರಮ ಕೈಗೊಳ್ಳಲಾಗಿದೆೆ. ರೈತರು ಆತಂಕಗೊಳ್ಳುವ ಅಗತ್ಯವಿಲ್ಲ.
ಕಳೆದ ಸಾಲಿನಂತೆ ಪ್ರಸಕ್ತ ವರ್ಷವೂ ಕೂಡ ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ರಿಯಾಯಿತಿ ದರದಲ್ಲಿ, ಇಲಾಖೆಯ ಮಾರ್ಗಸೂಚಿಯನ್ವಯ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತ್ತದೆ. ಕರ್ನಾಟಕ ರಾಜ್ಯ ಬೀಜ ನಿಗಮ, ರಾಷ್ಟಿçÃಯ ಬೀಜ ನಿಗಮ ಮತ್ತು ಖಾಸಗಿ ಮಾರಾಟ ಮಳಿಗೆಗಳಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ. ಇಲಾಖೆಯ ಮೂಲಕ ಬೀಜ ಬದಲಾವಣೆ ಅನುಪಾತಕ್ಕನುಗುಣವಾಗಿ(ಮೆಕ್ಕೆಜೋಳ ಹೊರತಾಗಿ ಉಳಿದೆಲ್ಲ ಬೀಜಗಳು 33% ಮಾತ್ರ) ಬೀಜಗಳನ್ನು ಪೂರೈಸಲಾಗುತ್ತದೆ. ಕಾರಣ, ರೈತರು ಹಿಂದಿನ ಹಂಗಾಮುಗಳಲ್ಲಿ ತಮ್ಮಲ್ಲಿ ಕಾಯ್ದಿರಿಸಿಕೊಂಡ ಬೀಜಗಳನ್ನು ಉಪಯೋಗಿಸಲು ಕೋರಿದೆ.

ರೈತ ಬಂಧುಗಳು ಬಿತ್ತನೆ ಕೈಗೊಳ್ಳುವ ಮುನ್ನ ಕಡ್ಡಾಯವಾಗಿ ಜೈವಿಕ ಗೊಬ್ಬರಗಳಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡಲು ವಿನಂತಿಸಿದೆ. ಹೆಸರು ಬೀಜಗಳನ್ನು ಪ್ರತಿ ಕೆ.ಜಿ ಬೀಜಕ್ಕೆ 35-40 ಗ್ರಾಂ. ರೈಜೋಬಿಯಂನಿAದ ಬೀಜೋಪಚಾರ ಮಾಡಿ ಬಿತ್ತಬೇಕು. ಇದರಿಂದ ಬೆಳೆಯ ಪ್ರಾಥಮಿಕ ಹಂತದಲ್ಲಿ ಸಾರಜನಕವು ಚೆನ್ನಾಗಿ ಲಭ್ಯವಾಗಿ, ಬೆಳೆಯ ಉತ್ತಮ ಬೆಳವಣಿಗೆಗೆ ಸಹಾಯವಾಗುತ್ತದೆ. ಪ್ರತಿ ಕಿ.ಗ್ರಾಂ. ಬೀಜಕ್ಕೆ 10 ಗ್ರಾಂ. ಟ್ರೆöÊಕೋಡರ್ಮಾದಿಂದ ಬೀಜೋಪಚಾರ ಮಾಡಿದಲ್ಲಿ ಸರ್ಕೊಸ್ಪೊರಾ ಎಲೆಚುಕ್ಕೆ ರೋಗದ ನಿರ್ವಹಣೆ ಮಾಡಬಹುದು. ಗೋವಿನ ಜೋಳದಲ್ಲಿ ಪ್ರತಿ ಕಿ.ಗ್ರಾಂ ಬೀಜಕ್ಕೆ 25 ಗ್ರಾಂ ರಂಜಕ ಕರಗಿಸುವ ಅಣುಜೀವಿ (ಸುಡೋಮೊನಾಸ ಸ್ಟೆçಯೇಟಾ ಎಚ್-21) ಹಾಗೂ 6 ಗ್ರಾಂ ಟ್ರೆöÊಕೋಡರ್ಮಾ ಜೈವಿಕ ಶೀಲಿಂದ್ರನಾಶಕದಿAದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಕಾಂಡ ಕಪ್ಪು ಕೊಳೆ ರೋಗವನ್ನು ನಿಯಂತ್ರ್ರಿಸಬಹುದಾಗಿದೆ.
ಅಣುಜೀವಿ ಗೊಬ್ಬರಗಳಾದ ಅಝೋಸ್ಪಿರಿಲಂ 250 ಗ್ರಾಂ. ಪುಡಿ ಅಥವಾ 50 ಮಿ.ಲೀ. ದ್ರವರೂಪದ ಪದಾರ್ಥ ರಂಜಕ ಕರಗಿಸುವ ಜೈವಿಕ ಗೊಬ್ಬರ 250 ಗ್ರಾಂ. ಪುಡಿ ಅಥವಾ 25 ಮಿ.ಲೀ. ದ್ರವರೂಪದ ಪದಾರ್ಥ ಉಪಯೋಗಿಸಬಹುದಾಗಿದೆ. ಶೇಂಗಾ ಬೀಜಕ್ಕೆ ರೈಜೋಬಿಯಂ ಅಣುಜೀವಿ ಗೊಬ್ಬರ 1.0 ಕಿ.ಗ್ರಾಂ. ಪುಡಿ ಅಥವಾ 250 ಮಿ.ಲೀ. ದ್ರವರೂಪದ ಪದಾರ್ಥ ರಂಜಕ ಕರಗಿಸುವ ಜೈವಿಕ 1 ಕಿ.ಗ್ರಾಂ. ಪುಡಿ ಅಥವಾ 120 ಮಿ.ಲೀ. ದ್ರವರೂಪದ ಪದಾರ್ಥ, 2.5 ಕಿ.ಗ್ರಾಂ ರೈಜೋಬಿಯಂ, ರಂಜಕ ಕರಗಿಸುವ ಅಣುಜೀವಿ ಜೀವಾಣುವನ್ನು ಬೀಜಕ್ಕೆ ಉಪಚರಿಸಬೇಕು.

ಅಧಿಕೃತ ಪರವಾನಗಿ ಹೊಂದಿದ ಮಳಿಗೆಗಳಲ್ಲಿ ಮಾತ್ರ ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಖರೀದಿಸಬೇಕು. ಕೃಷಿ ಪರಿಕರಗಳನ್ನು ಎಂ.ಆರ್.ಪಿ.ಗಿAತ ಹೆಚ್ಚಿನ ದರದಲ್ಲಿ ಮಾರಾಟ ಮಾಡಿದಲ್ಲಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳು ಮತ್ತು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರ ಗಮನಕ್ಕೆ ತರಲು ಕೋರಿದೆ. ಅಂತಹವರ ಮೇಲೆ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.