ಮಂಡ್ಯ: ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಆಗಿರುವ ಹೆಚ್.ಎಲ್.ನಾಗರಾಜು ಅವರು ಸರ್ಕಾರಿ ಹುದ್ದೆ ತೊರೆದು ಸನ್ಯಾಸತ್ವ ಸ್ವೀಕರಿಸಲು ಮುಂದಾಗಿದ್ದಾರೆ. ಹೌದು ನಾಗರಾಜು ಅವರು ಪ್ರಸ್ತುತ ಮಂಡ್ಯದ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಈ ಹಿಂದೆಯೂ ಕೂಡ 2011ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಸನ್ಯಾಸತ್ವದ ದೀಕ್ಷೆ ಪಡೆದು ‘ನಿಶ್ಚಲಾನಂದನಾಥ’ ಎಂದು ಹೆಸರು ಬದಲಾವಣೆ ಮಾಡಿಕೊಂಡಿದ್ದರು. ಬಳಿಕ ಸಾರ್ವಜನಿಕರ ಒತ್ತಾಯದ ಮೇರೆಗೆ ವಾಪಸ್ ಕೆಲಸಕ್ಕೆ ಮರಳಿದ್ದರು.ಆದರೆ ಇದೀಗ ಮತ್ತೇ ಸನ್ಯಾಸತ್ವ ದೀಕ್ಷೆ ಪಡೆಯಲಿದ್ದಾರೆ ಎನ್ನಲಾಗುತ್ತಿದ್ದು, ಇನ್ನೆರೆಡು ದಿನಗಳಲ್ಲಿ ದೀರ್ಘ ರಜೆ ಮೇಲೆ ಹೊರಗೆ ಬರಲಿದ್ದಾರೆ. ಆನಂತರ ಬಹುತೇಖವಾಗಿ ಮತ್ತೇ ವೈರಾಗ್ಯದತ್ತ ಮುಖ ಮಾಡಲಿದ್ದಾರೆ ಎನ್ನಲಾಗಿದೆ. ಒಕ್ಕಲಿಗ ಸ್ವಾಮಿಜಿಯೊಬ್ಬರ ನೇತೃತ್ವದಲ್ಲಿ ಅದ್ದೂರಿ ಪಟ್ಟಾಧಿಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.
KAS ಹುದ್ದೆ ಬಿಟ್ಟು, ಸನ್ಯಾಸತ್ವ ಸ್ವೀಕರಿಸಲು ಸಜ್ಜಾದ ಅಪರ ಜಿಲ್ಲಾಧಿಕಾರಿ!
157
previous post