ಲಕ್ಷ್ಮೇಶ್ವರ: ಮೀನು ಕದ್ದಿರುವ ಆರೋಪ ಹೊರಿಸಿ ಪರಿಶಿಷ್ಟ ಜಾತಿ ಲಂಬಾಣಿ ಸಮುದಾಯಕ್ಕೆ ಸೇರಿದ ಮಹಿಳೆಯನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿರುವ ಈ ಘಟನೆ ಪಾಕಿಸ್ತಾನದಲ್ಲೋ, ಇರಾಕಿನಲ್ಲೋ ನಡೆದದ್ದಲ್ಲ ಬದಲಿಗೆ ಕರ್ನಾಟಕದ ಉಡುಪಿ ಜಿಲ್ಲೆಯ ಮಲ್ಪೆ ಮೀನು ಬಂದರಿನಲ್ಲಿ ನಡೆದದ್ದು. ಇದು ಅಮಾನವೀಯ ಘಟನೆ ಆಗಿದ್ದು, ಹಲ್ಲೆ ಮಾಡಿದವರಿಗೆ ಸರ್ಕಾರ ಕಠಿಣ ಶಿಕ್ಷೆ ಒದಗಿಸಬೇಕು ಎಂದು ಗದಗ ಜಿಲ್ಲಾ ಬಂಜಾರ ಸೇವಾಲಾಲ ಸಂಘದ ಅಧ್ಯಕ್ಷ ಪರಮೇಶ ಎಸ್ ಲಮಾಣಿ ಮತ್ತು ಬಂಜಾರ ಯುವ ಮುಖಂಡ ರಮೇಶ ಎಸ್ ಲಮಾಣಿ ಪತ್ರಿಕಾ ಪ್ರಕಟಣೆಯಲ್ಲಿ ಮೂಲಕ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿರುವ ಅವರು, ಒಂದು ಬುಟ್ಟಿ ಸಿಗಡಿ ಮೀನು ಕದ್ದಿರುವ ಆರೋಪವನ್ನು ಹೊರಿಸಿ ಸಾರ್ವಜನಿಕವಾಗಿ ಥಳಿಸಿ ಮರಕ್ಕೆ ಕಟ್ಟಿಹಾಕಿ ಗಂಡಸರು ಹೆಂಗಸರು ಎಲ್ಲರೂ ಸೇರಿ ಹಲ್ಲೆ ಮಾಡಿರುತ್ತಾರೆ. ಆದರೆ ಅಸಲಿಗೆ ಮೀನುಗಾರಿಕೆ ಕೆಲಸಕ್ಕೆಂದು ಹೊರ ಜಿಲ್ಲೆ/ರಾಜ್ಯಗಳಿಂದ ಬಂದ ಜನರು ಸ್ವತಃ ಮೀನು ವ್ಯಾಪಾರದಲ್ಲಿ ತೊಡಗಿಕೊಂಡಿರುವುದನ್ನು ಸಹಿಸದೆ ಪೂರ್ವಯೋಜಿತವಾಗಿ ಪ್ಲಾನ್ ಮಾಡಿ ಹೀಗೆ ಸುಳ್ಳು ಆರೋಪವನ್ನು ಹೊರಿಸಿ ಸಾರ್ವಜನಿಕವಾಗಿ ಹಲ್ಲೆ ಮಾಡಿ ಮರ್ಯಾದೆ ತೆಗೆದರೆ ಹೆದರಿ ಜಾಗ ಖಾಲಿ ಮಾಡುತ್ತಾರೆ ಎನ್ನುವ ಉದ್ದೇಶದೊಂದಿಗೆ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಹಲ್ಲೆಗೊಳಗಾದವರನ್ನು ಸಂಪರ್ಕಿಸಿದಾಗ ತಿಳಿದ ವಿಷಯ ನಮಗೆ ತಿಳಿದಿದೆ ಎಂದರಲ್ಲದೇ, ಒಂದುವೇಳೆ ಒಂದು ಬುಟ್ಟಿ ಮೀನು ಕದ್ದಿರುವುದು ನಿಜವೇ ಆಗಿದ್ದರೆ ಪೊಲೀಸ್ ದೂರು ನೀಡಬೇಕಿತ್ತು, ಕಳ್ಳತನವನ್ನು ಪರಿಶೀಲಿಸಿ ಶಿಕ್ಷೆ ವಿಧಿಸುವುದಕ್ಕೆ ಪೊಲೀಸರು ಮತ್ತು ನ್ಯಾಯಾಲಯವಿದೆ. ಆದರೆ ಹೀಗೆ ಸಾರ್ವಜನಿಕವಾಗಿ ಮರಕ್ಕೆ ಕಟ್ಟಿ ಥಳಿಸಿರುವುದು ಕಾನೂನು ಬಾಹಿರ ಮತ್ತು ಮನುಷ್ಯವಿರೋಧಿ ನಡೆಯಾಗಿದೆ ಎಂದಿದ್ದಾರೆ.

ಉಡುಪಿ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಉಡುಪಿ ಜಿಲ್ಲಾಧಿಕಾರಿಗಳು ತಕ್ಷಣವೇ ಸುವು ಮೊಟೊ ಕೇಸ್ ದಾಖಲಿಸಿಕೊಂಡು ಹಲ್ಲೆ ಮಾಡಿದ ಅಷ್ಟೂ ಜನರ ಮೇಲೆ ಪ್ರಿವೆಂಟೇಷನ್ ಆಫ್ ಅಟ್ರೋಸಿಟೀಸ್ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸುವಂತೆ ಸನ್ಮಾನ್ಯ ಗೃಹಮಂತ್ರಿಗಳು ಡಾ. ಜಿ. ಪರಮೇಶ್ವರ ಮತ್ತು ಮಾನ್ಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರು ತಕ್ಷಣವೇ ತಾಕೀತು ಮಾಡಬೇಕು.
ಹಲ್ಲೆ ಮಾಡಿದವರಿಗೆ ಬಂದಿಸಿದ್ದೆ ಆದಲ್ಲಿ ಅವರಿಗೆ ಕಠಿಣ ಶಿಕ್ಷೆ ಒದಗಿಸಬೇಕು, ಇಲ್ಲದೇ ಹೋದಲ್ಲಿ ಮುಂದಿನ ದಿನದಲ್ಲಿ ಮಲ್ಪೆ ಚಲೋ ಚಳುವಳಿ ಮಾಡಬೇಕಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.