ಲಕ್ಷ್ಮೇಶ್ವರ: ತಾಲೂಕಿನ ಬಟ್ಟೂರು ಗ್ರಾಮದಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ಮನೆ ಸಂಪೂರ್ಣವಾಗಿ ಸುಟ್ಟು ಅಪಾರ ಹಾನಿವಾಗಿರುವ ಘಟನೆ ಜರಗಿದೆ.
ಬಟ್ಟೂರು ಗ್ರಾಮದ ಚನ್ನಬಸವ್ವ , ಫಕ್ಕೀರಪ್ಪ ಬಾರ್ಕಿ ಎಂಬು ಎಂಬವರ ಮನೆ ಸಂಪೂರ್ಣ ಸುಟ್ಟ ಕರಕಲಾಗಿದೆ. ಮನೆಯಲ್ಲಿನ ಚಿನ್ನ, ಬೆಳ್ಳಿಯ ಆಭರಣಗಳು, ಕಟ್ಟಿಗೆ ಪೀಠೋಪಕರಣಗಳು, ಧವಸ ಧಾನ್ಯಗಳು, ಪಾತ್ರೆಗಳು, ಕೃಷಿ ಸಲಕರಣೆಗಳು ಸೇರಿದಂತೆ ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ಆರಿಸಲು ತಡವಾಗಿ ಬಂದ ಹಿನ್ನೆಲೆ, ಗ್ರಾಮಸ್ಥರೆ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಎರಡ್ಮೂರು ದಿನಗಳ ಹಿಂದೆ ಸಂಘದಲ್ಲಿ ಸಾಲ ಮಾಡಿದ್ದ ಹಣವನ್ನೂ ಸಹ ಫಕ್ಕೀರಪ್ಪ ಮನೆಯಲ್ಲಿ ಇಟ್ಟಿದ್ದನು. ಅದೂ ಸಹ ಬೆಂಕಿಗೆ ಸುಟ್ಟು ಬೂದಿಯಾಗಿದೆ. ನಾವು ಕೂಲಿ ಕೆಲಸಕ್ಕೆ ಹೋಗಿದ್ವೀ ಯಾವ ರೀತಿ ಬೆಂಕಿ ತಾಗಿದೆ ಅನ್ನೋ ಗೊತ್ತಾಗಿಲ್ಲ. ನಾವು ಈ ಗುಡಿಸಿನಲ್ಲಿ 15 ವರ್ಷದಿಂದ ಜೀವನ ಮಾಡುತ್ತಿದ್ದು ಈ ವರೆಗೂ ನಮಗೆ ಆಶ್ರಯ ಮನೆ ಹಾಕಿಲ್ಲ ಎಂದು ಮನೆ ಮಾಲಿಕ ಫಕ್ಕಿರಪ್ಪ ಕಣ್ಣಿರು ಹಾಕಿದರು.
ಲಕ್ಷ್ಮೇಶ್ವರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಗಟನೆ ಜರುಗಿದೆ.