ಲಕ್ಷ್ಮೇಶ್ವರ: ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಲಕ್ಷ್ಮೇಶ್ವರ ಸುದ್ದಿ: ಪರಮೇಶ ಎಸ್ ಲಮಾಣಿ.
ಪಟ್ಟಣದ ಬಳ್ಳಾರಿ ಮೋಹಲ್ಲಾ ಯಂಗ್ ಕಮೀಟಿ ವತಿಯಿಂದ ಹಣ್ಣು-ಹಂಪಲದ ಶರಬತ್ ಮಾಡಿ ಸಾರ್ವಜನಿಕರಿಗೆ ಪಟ್ಟಣಕ್ಕೆ ಬಂದ ಜನರಿಗೆ ಹಂಚುವ ಮೂಲಕ ಮೊಹರಂ ಹಬ್ಬ ಆಚರಿಸಲಾಯಿತು. ಇಂಥ ಸಂಪ್ರದಾಯಗಳು ಬಹುತೇಕ ಕಡಿಮೆ. ಆದರೆ, ಇಲ್ಲಿ ಉಭಯ ಧರ್ಮದವರೂ ಸೇರಿಕೊಂಡು ಸಂಪ್ರದಾಯ ಪಾಲಿಸುವ ಮೂಲಕ ಗಮನ ಸೆಳೆದರು.
ಸಾರ್ವಜನಿಕರು ತಂಪು-ತಂಪಾದ ಹಣ್ಣುಗಳ ಪಾನಿಯಾ ಸೇವಿಸಿ ಸಂಭ್ರಮಿಸಿವರು.
ಸಂದರ್ಭದಲ್ಲಿ ಹಫೀಜ್ ಮಹಮ್ಮದ್ ಸಾಧಿಕ, ಮಹಮ್ಮದ್ ಅಫಜಲ್ ರಿತ್ತಿ, ದಾದಾಫೀರ್ ಬಂಕಾಪೂರ, ಮುನ್ನಾ ಕಮತಗಿ, ಸೋಹಲ್ ರಿತ್ತಿ, ಫಯಾಜ್ ಕನಕಪುರ, ಸುಬಾನಿ ರಿತ್ತಿ, ಸಿದ್ದಿಕ ರಿತ್ತಿ, ಮಹಮ್ಮದ್ ನಧಾಫ, ತನವೀರ ರಿತ್ತಿ, ತಾಜ್ ಕೊತೆವಾಲೆ, ರಜಾಕ ಬಳಗಾರ, ಹಯ್ಯಾತ್ ಬಳಗಾರ, ಮುಜಾಮೀಲ್ ನಧಾಫ್, ರೀಯಾಜ್ ಗುಡಗೇರಿ, ರೀಯಾಜ್ ಬೇಳವಿಗಿ, ಅಬ್ದುಲ್ ರಿತ್ತಿ ಮತ್ತಿತರಿದ್ದರು.