ಹುಬ್ಬಳ್ಳಿ: ಮಾನವೀಯತೆಯನ್ನು ನಾಚಿಸುವಂತಿರುವ ಹೆಯ ಘಟನೆ ರವಿವಾರ ಬೆಳಿಗ್ಗೆ ಹುಬ್ಬಳ್ಳಿಯ ಅವಳಿ ನಗರದ ಅಧ್ಯಾಪಕ ನಗರದಲ್ಲಿ ನಡೆದಿತ್ತು. ಮನೆ ಹೊರಗೆ ಆಟವಾಡುತ್ತಿದ್ದ ಅಂಗವೈಕಲ್ಯ ಹೊಂದಿದ ಐದು ವರ್ಷದ ಬಾಲಕಿಯನ್ನ ಬಿಹಾರ ಮೂಲದ ಸೈಕೋಪಾತ ಒಬ್ಬನು ಅಪಹರಿಸಿ, ಪಾಳುಬಿದ್ದ ಮನೆಯಲ್ಲಿ, ಮದ್ಯಪಾನದ ಅಮಲಿನಲ್ಲಿ ಅತ್ಯಾಚಾರ ಮಾಡಿ, ಬಾಲಕಿ ಕಿರುಚಾಡಿದ ಹಿನ್ನೆಲೆ ಕತ್ತು ಹಿಸುಕಿ ಕೊಲೆಗೈದಿದ್ದ.
ಈ ಘಟನೆಯಿಂದ ರೊಚ್ಚಿಗೆದ್ದಿದ್ದ ಸ್ಥಳೀಯರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿ, ನಗರದ ವಿವಿಧೆಡೆ ಪ್ರತಿಭಟನೆ ನಡೆಸಿದ್ದರು. ಅದರಲ್ಲೂ ಅಶೋಕ ನಗರ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿ, ಆರೋಪಿಗೆ ಎನ್ ಕೌಂಟರ್ ಮಾಡಬೇಕು ಇಲ್ಲವಾದಲ್ಲಿ ನಮ್ಮ ಕೈಗೆ ಕೊಡಬೇಕು ಎಂದು ಪಟ್ಟು ಹಿಡಿದು ಸಂಜೆವರೆಗೂ ಪ್ರತಿಭಟನೆ ನಡೆಸಿದ್ದರು.

ಮೇಲಿನ ಈ ಪೋಸ್ಟ್ ನ್ನ ಟಚ್ ಮಾಡಿದಲ್ಲಿ ಕಾಲೇಜಿನ ಸಂಪೂರ್ಣ ಮಾಹಿತಿ ಒದಗುತ್ತದೆ.
ಘಟನೆಗೆ ಸಂಬಂಧಿಸಿದಂತೆ ಹುಬ್ಬಳ್ಳಿ ಪೋಲೀಸ್ ಆಯುಕ್ತ ಎನ್. ಶಶಿಕುಮಾರ್ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪೊಲೀಸರು ಶೀಘ್ರ ಕಾರ್ಯಾಚರಣೆ ನಡೆಸಿ ಆರೋಪಿ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಬಿಹಾರ ಮೂಲದ ರಕ್ಷಿತ್ ಕ್ರಾಂತಿ ಅನ್ನುವ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದ. ಹೀಗೆ ಸೆರೆಸಿಕ್ಕಾತನನ್ನ, ಠಾಣೆಗೆ ಕರೆದೊಯ್ಯುವಾಗ, ಪೊಲೀಸರಿಂದ ತಪ್ಪಿಸಿಕೊಳ್ಳಲು ರಕ್ಷಿತ್ ಯತ್ನಿಸಿದ್ದಾನೆ.
ಇತಿಹಾಸದಲ್ಲಿ ತಿರಸ್ಕಾರ ವ್ಯಕ್ತಪಡಿಸಿದ ಘಟನೆಗೆ ಎನ್ ಕೌಂಟರ್ ಅಂತಿಮ ಅಂತ್ಯ!
ಹೀಗೆ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ಅಶೋಕನಗರ ಠಾಣೆ ಪೋಲೀಸರು ಆತನ ಮೇಲೆ ಫೈರಿಂಗ್ ನಡೆಸಿದ್ದು, ಆರೋಪಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೊದಲು ಕಾಲಿಗೆ ಗುಂಡು ಹಾರಿಸಿದ್ದಾರೆ. ಇಷ್ಟಾದರೂ ಆರೋಪಿ ತನ್ನ ವರಸೆ ಮುಂದುವರೆಸಿದ ಪರಿಣಾಮ ಬೆನ್ನಿನ ಭಾಗಕ್ಕೆ ಮತ್ತೊಂದು ಗುಂಡು ಹಾರಿಸಿದ್ದಾರೆ. ನಂತರ ಕೀಮ್ಸ್ ಆಸ್ಪತ್ರೆಗೆ ದಾಖಲಿಸಿದರೂ, ಆರೋಪಿ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.ಇದು ಹುಬ್ಬಳ್ಳಿ ಇತಿಹಾಸದಲ್ಲಿ ಐವತ್ತು ವರ್ಷಗಳ ಬಳಿಕ ನಡೆದ ಮೊದಲ ಎನ್ ಕೌಂಟರ್ ಎಂಬುದು ಸ್ಪಷ್ಟವಾಗಿದೆ.
ಆರೋಪಿಯ ಶವವನ್ನು ತನಿಖೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಡಿಸಿಪಿ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಡೀ ಘಟನೆಯ ಬಗ್ಗೆ ಅಧಿಕೃತ ಮಾಹಿತಿ ಪ್ರಕಟಿಸಿದ ಆಯುಕ್ತ ಎನ್. ಶಶಿಕುಮಾರ್ ಈಗ ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ.
ಈ ಎನ್ ಕೌಂಟರ್ ಮೂಲಕ, ಕಿರುಕುಳ ನೀಡುವ ಮತ್ತು ಪಶುವಿನಷ್ಟಕ್ಕೂ ಮಿಕ್ಕ ಹೀನ ಕೃತ್ಯ ಎಸಗಿದ ಆರೋಪಿ ತನ್ನ ಕೃತ್ಯದ ಪ್ರತಿಫಲವನ್ನು ಕಂಡಿದ್ದಾನೆ. ಜನತೆಯ ಮನಃಪೂರ್ವಕ ಆಗ್ರಹಕ್ಕೆ ನ್ಯಾಯ ದೊರೆತಿದೆಯೆಂಬ ಅನಿಸಿಕೆ ಜನರಲ್ಲಿ ವ್ಯಕ್ತವಾಗಿದೆ.