ಲಕ್ಷ್ಮೇಶ್ವರ : ಪಟ್ಟಣದಲ್ಲಿ ಸೋಮುವಾರ ಗದಗ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಹಾಗೂ ಶಿರಹಟ್ಟಿ ಮಂಡಳ ಹಾಗೂ ಶಿರಹಟ್ಟಿ ಬಿಜೆಪಿ ಮಂಡಳದ ವತಿಯಿಂದ ರೈತರ ವಿವಿಧ ಬೇಡಿಕೆಗೆ ಆಗ್ರಹಿಸಿ ಮತ್ತು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ರೈತರ ಬೃಹತ್ ಪ್ರತಿಭಟನಾ ರ್ಯಾಲಿ ನಡೆಯಿತು.
ವರದಿ : ಪರಮೇಶ ಎಸ್ ಲಮಾಣಿ
ಪಟ್ಟಣದ ಪಂಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ತಹಶಿಲ್ದಾರ ಕಾರ್ಯಲಯ ತಲುಪಿ ಅಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಶಾಸಕ ಡಾ.ಚಂದ್ರು ಲಮಾಣಿ ಮಾತನಾಡಿ ರಾಜ್ಯದಲ್ಲಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿಯವರ ಬಿಜೆಪಿ ಸರ್ಕಾರದ ಅವಧಿಯಲ್ಲಿ ತಂದಿದ್ದ ಅನೇಕ ರೈತಪರ ಯೋಜನೆಗಳನ್ನು ಅಧಿಕಾರಕ್ಕೆ ಬರುತ್ತಿದ್ದಂತೆಯೆ ರದ್ದುಗೊಳಿಸಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ,
ಬಿಜೆಪಿ ಸರ್ಕಾರದ ಅವಧಿಯಲ್ಲಿ ಉಂಟಾದ ಅತಿವೃಷ್ಠಿ ಸಂದರ್ಭದಲ್ಲಿ ರೈತರಿಗೆ ನೇರವಾಗಿ ಪ್ರತಿ ಹೆಕ್ಟೇರ್ ಗೆ ಒಣ ಬೇಸಾಯಕ್ಕೆ ಮತ್ತು ನೀರಾವರಿಗೆ ಪರಪೂರ್ ಪರಿಹಾರ ನೀಡಿದ್ದರು, ಆದರೆ ಇಗಿನ ಕಾಂಗ್ರೆಸ್ ಸರ್ಕಾರದಲ್ಲಿ ಖಜಾನೆಯೇ ಖಾಲಿಯಾಗಿರುವದರಿಂದ ದಿನಕೊಂದು ನಾಟಕ ಮಾಡುತ್ತಿದೆ ಸರ್ಕಾರ.
ಮೆಕ್ಕೆಜೋಳ ಬೆಳೆದ ರೈತರು ಸಂಕಷ್ಟದಲ್ಲಿದ್ದರು ಖರೀದಿ ಮಾಡಲು ಸ್ಪಷ್ಠ ಆದೇಶ ನೀಡದೆ ಗೊಂದಲದ ವಾತಾವರಣ ಸೃಷ್ಠಿಸಿದ್ದಾರೆ. ಸೂಕ್ತ ನಿರ್ಧಾರ ಕೈಗೊಳ್ಳದಿದ್ದರೆ ಉಗ್ರ ಹೋರಾಟ ಮಾಡುವದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಕಿಸಾನ್ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಶಶಿಮೌಲಿ ಕುಲಕರ್ಣಿ, ಶಿರಹಟ್ಟಿ ಮಂಡಳ ಬಿಜೆಪಿ ಅಧ್ಯಕ್ಷ ಸುನೀಲ್ ಮಹಾಂತಶೇಟ್ಟರ್, ಗದಗ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಸವರಾಜ ಇಟಗಿ ಅವರು ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಿದರು.
ಸಂದರ್ಭದಲ್ಲಿ ಅಶೋಕ ಶಿರಹಟ್ಟಿ, ಫಕ್ಕೀರೇಶ ರಟ್ಟಿಹಳ್ಳಿ, ನಾಗರಾಜ ಲಕ್ಕುಂಡಿ, ಜಾನು ಲಮಾಣಿ, ಗಂಗಾಧರ ಮೆಣಸಿನಕಾಯಿ, ನಿಂಗಪ್ಪ ಬನ್ನಿ, ಮಹಾದೇವಪ್ಪ ಅಣ್ಣಿಗೇರಿ, ಕೃಷ್ಣ ಬಿದರಳ್ಳಿ, ಡಿ.ವಾಯ್.ಹುನಗುಂದ, ಶಕ್ತಿ ಕತ್ತಿ, ಪ್ರವೀಣ ಬೊಮಲೆ, ಶಿವಣ್ಣ ಲಮಾಣಿ, ಪುಂಡಲೀಕ ಲಮಾಣಿ, ಸಂತೋಷ ಜಾವೂರ, ಥಾವರಪ್ಪ ಲಮಾಣಿ, ಶಿವಾನಂದ ದೇಸಾಯಿ, ಅಶೋಕ ನೀರಾಲೋಟಿ, ಶಿವಯೋಗಿ ಅಂಕಲಕೋಟಿ, ಶಾಂತಣ್ಣ ಬಳ್ಳಾರಿ, ಎಂ.ಆರ್.ಪಾಟೀಲ್, ಅನೀಲ ಮುಳಗುಂದ, ಜಗದೀಶಗೌಡ ಪಾಟೀಲ್, ಚಂದ್ರು ಈಳಗೇರ, ವಿಜಯ ಹತ್ತಿಕಾಳ, ತಿಮ್ಮರೇಡ್ಡಿ ಮರಡ್ಡಿ, ರಾಮಣ್ಣ ಗೌರಿ, ವಿಜಯ ಕಂಬಾರ, ಬಸವರಾಜ ಚಕ್ರಸಾಲಿ, ಮಹೇಶ ಬಡ್ನಿ, ಶರಣು ಚನ್ನೂರ, ಬಸವರಾಜ ಕಲ್ಲೂರ, ದುಂಡೇಶ ಲಮಾಣಿ, ವಿಶಾಲ ಬಟಗುರ್ಕಿ ಸೇರಿದಂತೆ ಅನೇಕರಿದ್ದರು,
ನಂತರ ತಹಶಿಲ್ದಾರ ಎಂ. ಧನಂಜಯ ಅವರಿಗೆ ಮನವಿ ಸಲ್ಲಿಸಿದರು.
