Home » News » ಸಾಮರಸ್ಯದ ನವ್ಯಯುಗಕೆ ….! ಜ. 18 ರಂದು ಲಕ್ಷ್ಮೇಶ್ವರದಲ್ಲಿ ಹಿಂದೂ ಸಮ್ಮೇಳನ….!

ಸಾಮರಸ್ಯದ ನವ್ಯಯುಗಕೆ ….! ಜ. 18 ರಂದು ಲಕ್ಷ್ಮೇಶ್ವರದಲ್ಲಿ ಹಿಂದೂ ಸಮ್ಮೇಳನ….!

by CityXPress
0 comments

ಗದಗ : ಹಿಂದು ಸಮಾಜದ ವಿವಿಧ ಪಂಗಡಗಳನ್ನು ಒಗ್ಗೂಡಿಸಿ ಸಂಘಟಿತಗೊಳಿಸುವುದು ಹಾಗೂ ಸಮಾಜ ಪರಿವರ್ತನೆಗಾಗಿ ಜ.18 ರಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಬೃಹತ್ ಹಿಂದೂ ಸಮ್ಮೇಳನ ಆಯೋಜಿಸಲಾಗಿದೆ ಎಂದು ಹಿಂದೂ ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಬಸವರಾಜ ಬೆಂಡಿಗೇರಿ ತಿಳಿಸಿದರು.

ವರದಿ : ಪರಮೇಶ ಎಸ್ ಲಮಾಣಿ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಸಮ್ಮೇಳನ ಅಂಗವಾಗಿ ಜ. 18 ಬೆಳ್ಳಿಗ್ಗೆ 10 ಗಂಟೆಗೆ ನೂರಾರು ಹಿಂದೂಪರ ಕಾರ್ಯಕರ್ತರಿಂದ ಬೈಕ್ ರ್ಯಾಲಿ ಪಟ್ಟಣದ ಬಸ್ತಿಕೇರಿಯಿಂದ ಪ್ರಮುಖ ಬೀದಿಗಳಲ್ಲಿ ಹಾದು ಸೋಮೇಶ್ವರ ದೇವಸ್ಥಾನದವರೆಗೆ ಬೈಕ್ ರ್ಯಾಲಿ ನಡೆಯುವುದು. ಮಧ್ಯಾಹ್ನ 3-30 ಗಂಟೆಗೆ ಭಾರತಮಾತೆಯ ಭಾವಚಿತ್ರ ಹಾಗೂ ಸ್ತಬ್ಧಚಿತ್ರಗಳ ಭವ್ಯ ಶೋಭಾಯಾತ್ರೆ ಜರುಗಲಿದೆ. ಪಟ್ಟಣದ ಶ್ರೀ ಹಾವಳಿ ಆಂಜನೇಯ ದೇವಸ್ಥಾನದಿಂದ ಪ್ರಾರಂಭಗೊಂಡು ಪಾದಗಟ್ಟಿ, ಶಿಗ್ಲಿ ನಾಕಾ, ಹೊಸ ಬಸ್ ನಿಲ್ದಾಣ, ಅಂಬೇಡ್ಕರ್ ನಗರ, ಆದಯ್ಯ ಸರ್ಕಲ್ ಮುಖಾಂತರ ಶ್ರೀ ಸೋಮೇಶ್ವರ ತೇರಿನಮನೆ ಆವರಣದಲ್ಲಿ ಸಮಾಸ್ತಿಗೊಳ್ಳುವುದು.

ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ನಂದಿಕೋಲು ಸಮ್ಮಾಳ, ಕುದುರೆ ಕುಣಿತ, ಭಜನೆ, ಲಂಬಾಣಿ ಮೇಳ, ಸೇರಿದಂತೆ ವಿವಿಧ ದೇಶಿ ಜನಪದ ಮೇಳಗಳು ಭಾಗವಹಿಸಲಿವೆ.

banner

ನಂತರ ಸಂಜೆ 5 ಗಂಟೆಗೆ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಸೋಮೇಶ್ವರ ತೇರಿನ ಮನೆ ಆವರಣದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕ ಕಾರ್ಯಕ್ರಮದ ಸಾನ್ನಿಧ್ಯವನ್ನು ಗದಗ – ವಿಜಯಪುರ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರು ಪರಮಪೂಜ್ಯ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಧ್ಯಾತ್ಮಿಕ ಚಿಂತಕರು ಹಾಗೂ ಲಕ್ಷ್ಮೇಶ್ವರ ಹಿಂದೂ ಸಮ್ಮೇಳನ ಸಮಿತಿಯ ಅಧ್ಯಕ್ಷ ಚಂದ್ರಣ್ಣ ಶಿ ಮಹಾಜನಶೆಟ್ಟರ್ ವಹಿಸಿಕೊಳ್ಳುವರು ಕಾರ್ಯಕ್ರಮದಲ್ಲಿ ಧಾರವಾಡ ವಿಭಾಗದ ಸಂಘಚಾಲಕರಾದ ಗೋವಿಂದಪ್ಪ ಗೌಡಪ್ಪಗೋಳ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದರು.

ಸುನೀಲ್ ಮಹಾಂತಶೆಟ್ಟರ, ಸೋಮಣ್ಣ ಉಪನಾಳ, ಬಸವೇಶ ಮಹಾಂತಶೆಟ್ಟರ, ಚಂದ್ರಶೇಖರ ಹಂಪಣ್ಣವರ ಮಾತನಾಡಿ, ಸಂಘ ಶತಾಬ್ದಿ ನಿಮಿತ್ತ ಈ ಹಿಂದೂ ಸಮ್ಮೇಳನ ಮೂಲಕ ಹಿಂದು ನಾಗರಿಕತೆ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದು ಇದರ ಉದ್ದೇಶ. ಜಾತಿ, ಮತ, ಪಂಥಗಳಿಂದ ದೂರವಾಗಿರುವವರನ್ನು ಒಗ್ಗೂಡಿಸಿ ಸಂಘಟಿತ ಹಾಗೂ ಸಶಕ್ತ ಅಖಂಡ ಹಿಂದೂ ಸಮಾಜ ಕಟ್ಟಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಕಾರ್ಯಕ್ರಮದ ಯಶಸ್ವಿಗೆ ಹಿಂದುಗಳು ಸಂಘಟಿತರಾಗಿ ಭಾಗವಹಿಸಬೇಕು ಎಂದರು.

ಈ ಸಂದರ್ಭದಲ್ಲಿ ಬಸವರಾಜ ಬೆಂಡಿಗೇರಿ, ಬಸವೇಶ ಮಹಾಂತ ಶೆಟ್ಟರ, ಸುನೀಲ ಮಹಾಂತ ಶೆಟ್ಟರ,ರಾಮರಾವ ವೇರ್ಣೇಕರ, ಚಂದ್ರ ಹಂಪಣ್ಣವರ, ಗುರುರಾಜ ಪಾಟೀಲ ಕುಲಕರ್ಣಿ, ಸೋಮೇಶ ಉಪನಾಳ,ವೈ ಕೆ ಲಿಂಗಶೆಟ್ಟಿ, ಚಿಕ್ಕಣ್ಣ ಪೂಜಾರ, ಗಜಾನನ ಹೆಗಡೆ, ಅನೀಲ. ಮುಳಗುಂದ, ಬಸವೇಣೆಪ್ಪ ನಂದೆಣ್ಣವರ, ಗಂಗಾಧರ ಮೆಣಸಿನಕಾಯಿ, ಮಂಜುನಾಥ ಹೋಗೆಸೊಪ್ಪಿನ, ಪ್ರವೀಣ ಬೋಮಲೆ, ವಿಜಯ ಕುಂಬಾರ,ಬಂಗಾರೆಪ್ಪ ಮುಳುಗುಂದ, ಈರಣ್ಣ ಮುಳುಗುಂದ ಸುರೇಶ ಮೆಡ್ಲೇರಿ, ನವೀನ ಹಿರೇಮಠ,ಪ್ರಶಾಂತ ಮೆಡ್ಲೇರಿ, ರವಿ ಕಲ್ಲೂರ, ವೀರೇಶ ಸಾಸಲವಾಡ,ಸುರೇಶ ಕುರ್ಡೇಕರ,ಸಂತೋಷ ಜಾವೂರ, ಶಂಕರ ಬ್ಯಾಡಗಿ, ಬಾಳಪ್ಪ ಗೋಸಾವಿ ಮತ್ತಿತರಿದ್ದರು.

You may also like

Leave a Comment

Soledad is the Best Newspaper and Magazine WordPress Theme with tons of options and demos ready to import. This theme is perfect for blogs and excellent for online stores, news, magazine or review sites.

Buy Soledad now!

Edtior's Picks

Latest Articles

Website designed by Dreamweb
error: Content is protected by Dreamweb