ಗದಗ: ಗೂಗಲ್ ನಲ್ಲಿ ಶೇರ್ ಮಾರ್ಕೇಟಿಂಗ್ ಕಂಪನಿ ಬಗ್ಗೆ ಮಾಹಿತಿ ಹುಡುಕಲು ಹೋಗಿ ಆ್ಯಪ್ ಲಿಂಕ್ ಡೌನ್ಲೋಡ್ ಮಾಡಿಕೊಂಡ ವ್ಯಕ್ತಿಯೊಬ್ಬರು, ಬರೊಬ್ಬರಿ 42 ಲಕ್ಷಕ್ಕೂ ಅಧಿಕ ಮೊತ್ತದ ಹಣ ಕಳೆದುಕೊಂಡ ಘಟನೆ ಗದಗನಲ್ಲಿ ನಡೆದಿದೆ.
ಮನೆಯಲ್ಲಿದ್ದಾಗ ಶೆರ್ ಮಾರ್ಕೇಟಿಂಗ್ ಕಂಪನಿ ಕುರಿತು ಮಾಹಿತಿಯನ್ನ ಚೆಕ್ ಮಾಡಿದ್ದಾರೆ. ‘ಶೇರ್ಖಾನ್’ ಅನ್ನುವ ಲಿಂಕ್ ನ್ನ ಕ್ಲಿಕ್ ಮಾಡಿದ್ದಾರೆ.ಈ ಲಿಂಕ್ ಕ್ಲಿಕ್ ಮಾಡಿದಾಗ ಪ್ಲೇ ಸ್ಟೋರ್ ಗೆ ಕನೆಕ್ಟ್ ಆಗಿ, ಎಸ್.ಖಾನ್. ಪ್ರಿಮಿಎಮ್ ಎಂಬ ಆ್ಯಪ್ ಓಪನ್ ಆಗಿ ಡೌನ್ಲೋಡ್ ಆಗಿದೆ. ಅದರಲ್ಲಿ ಆಧಾರ್ ಕಾರ್ಡ್ ಹಾಗೂ ಫೋಟೋ ಮತ್ತು ಫೋನ ನಂಬರನ್ನು ಆ್ಯಪ್ ನವರು ಅಪ್ಲೋಡ್ ಮಾಡಿಸಿದ್ದಾರೆ.
ನಂತರ ವಿಐಪಿ ಚಾನೆಲ್ ಮುಖಾಂತರ ಶೇರ್ ಖರೀದಿ ಮಾಡಲು ತಿಳಿಸಿ, ಮೊದ ಮೊದಲು ಲಾಭಾಂಶ ತೋರಿಸಿ, 42,000 ರೂ.ಗಳನ್ನ ವಿಡ್ರಾಲ್ ಮಾಡಿಕೊಳ್ಳಲು ಅವಕಾಶ ನೀಡಿದ್ದಾರೆ.
ಹೀಗೆ ಹಂತ ಹಂತವಾಗಿ, ಎರೆಡು ತಿಂಗಳೊಳಗೆ ಬರೊಬ್ಬರಿ, ₹42,40,000. ರೂ. ಗಳನ್ನ ಹಾಕಿಸಿಕೊಂಡಿದ್ದಾರೆ.
ಇದಷ್ಟೇ ಅಲ್ಲದೇ, ತಾವು ಹಣ ಹಾಕಿರುವ ಎಸ್.ಖಾನ್. ಪ್ರಿಮಿಎಮ್ ಎಂಬ ಆ್ಯಪದಲ್ಲಿ ಬ್ಯಾಲನ್ಸ್ ಮೊತ್ತ ₹ 1,02,73,567/- (ಒಂದು ಕೋಟಿ ಎರೆಡು ಲಕ್ಷದ ಎಪ್ಪತ್ಮೂರು ಸಾವಿರದ ಐದನೂರಾ ಅರವತ್ತೇಳು) ರೂ.ಗಳನ್ನ ತೋರಿಸಿದ್ದಾರೆ.
ಕೋಟಿ ರೂ.ಸಿಕ್ಕಾಯಿತು ಎಂದು ಹಣವನ್ನ ವಿಡ್ರಾಲ್ ಮಾಡಲು ಹೋದಾಗ 25% ಸರ್ವೀಸ್ ಚಾರ್ಜ್ ಎಂದು ಹೇಳಿ,ಮತ್ತೇ ₹ 14,88,000/- ರೂ. ಹಣವನ್ನು ಹಾಕಲು ಹೇಳಿ, ಮೊದಲು ಹಾಕಿದ್ದ, 42 ಲಕ್ಷ ಹಾಗೂ ಬ್ಯಾಲೆನ್ಸ್ ನಲ್ಲಿ ತೋರಿಸಿದ್ದ ಒಂದು ಕೋಟಿ ಮೊತ್ತವನ್ನ ನೀಡದೇ, ಮೋಸ ಮಾಡಿದ್ದಾರೆ
ಈ ಕುರಿತು ಗದಗನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ‘ಡಿಜಿಟಲ್ ಅರೆಸ್ಟ್’ ನಿಂದ ನಾಗರೀಕರು ಎಚ್ಚರದಿಂದ ಇರಬೇಕು. ಸೈಬರ್ ವಂಚಕರಿಗೆ ಮಾರು ಹೋಗಿ, ವ್ಯವಹರಿಸಬಾರದು ಹಾಗೂ ಹಣ ಕಳೆದುಕೊಳ್ಳಬಾರದು ಎಂದು ಗದಗ ಸೈಬರ್ ಕ್ರೈಂ ಪೊಲೀಸರು ಸಾರ್ವಜನಿಕರಿಗೆ ವಿನಂತಿಸಿದ್ದಾರೆ.