ವಿಜಯನಗರ: ಜಮೀನಿನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ರೈತನೋರ್ವ ವಿಮಾನ ಪ್ರಯಾಣ ಮಾಡಿಸಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾನೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲ್ಲೂಕಿನ ಶಿರಗನಹಳ್ಳಿ ರೈತ ವಿಶ್ವನಾಥ್ ರಿಂದ ಮಹಿಳಾ ಕೂಲಿ ಕಾರ್ಮಿಕರಿಗೆ ವಿಮಾನ ಭಾಗ್ಯ ದೊರೆತಿದೆ.

ನಿತ್ಯ ವಿಶ್ವನಾಥ್ ತೋಟಕ್ಕೆ ಕೂಲಿ ಕೆಲಸಕ್ಕೆಂದು ಬರುತ್ತಿದ್ದ ಮಹಿಳಾ ಕೂಲಿ ಕಾರ್ಮಿಕರು, ಒಮ್ಮೆಯಾದರೂ ನಾವು ವಿಮಾನದಲ್ಲಿ ಪ್ರಯಾಣ ಮಾಡಬೇಕು ಎನ್ನುವ ಆಸೆ ವ್ಯಕ್ತಪಡಿಸಿದ್ದರು.ಹೀಗಾಗಿ ಕೂಲಿ ಕಾರ್ಮಿಕರ ಆಸೆಯಂತೆ ರೈತ, ವಿಶ್ವನಾಥ್ ಶಿವಮೊಗ್ಗ ಏರ್ಪೋರ್ಟ್ ನಿಂದ ಗೋವಾದ ವರೆಗೂ ಹತ್ತು ಜನ ಮಹಿಳೆಯರನ್ನ ವಿಮಾನದಲ್ಲಿ ಪ್ರಯಾಣ ಮಾಡಿಸಿ ಕೂಲಿ ಕಾರ್ಮಿಕರ ಆಸೆ ಪೂರೈಸಿದ್ದಾನೆ.
ವಿಮಾನ ಪ್ರಯಾಣ ಭಾಗ್ಯ ನೀಡಿದ ರೈತನ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.