ಶಿರಹಟ್ಟಿ: ಸಾಲಬಾಧೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಮಾಡಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಂದ್ರಶೇಖರ್ ಸಿಂದಗಿ (42) ಮೃತ ರೈತನಾಗಿದ್ದು, 5 ಎಕರೆ 3 ಗುಂಟೆ ಜಮೀನನ ಮೇಲೆ ಕೃಷಿ ಮತ್ತು ಮಕ್ಕಳ ವಿದ್ಯಾಭ್ಯಾಸದ ಸಲುವಾಗಿ ರೈತ ಸಾಲ ಪಡೆದಿದ್ದನು ಎನ್ನಲಾಗಿದ್ದು, ಕೆವಿಜಿ ಬ್ಯಾಂಕ್ ನಲ್ಲಿ 2 ಲಕ್ಷ , ಖಾಸಗಿ ಫೈನಾನ್ಸ್ ನಲ್ಲಿ 2 ಲಕ್ಷ ಹಾಗೂ ಕೈ ಸಾಲವಾಗಿ 5 ಲಕ್ಷ ಸಾಲ ಪಡೆದಿದ್ದನು ಎನ್ನಲಾಗಿದೆ.

ಜಮೀನನಲ್ಲಿ ಬೆಳೆ ಬಾರದ ಕಾರಣ ಸಾಲ ತಿರಿಸಲಾಗದೆ ಕಂಗಾಲಾಗಿದ್ದ ರೈತ ಚಂದ್ರಶೇಖರ್, ಸಾಲದ ಸುಳಿಗೆ ಸಿಕ್ಕು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಈ ಕುರಿತು ಶಿರಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.